ಮೈಸೂರು: ಮಾಗಿ ಉತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ಕೇಕ್ ಉತ್ಸವದ ವೀಕ್ಷಣೆಗೆ ಬಂದವರಿಗೆ ಭಾರೀ ನಿರಾಸೆ ಉಂಟಾಗಿದೆ.
ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಒಟ್ಟು ಮೂರು ದಿನಗಳ ಕಾಲ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಕೇಕ್ ಉತ್ಸವ ಜಿಲ್ಲಾಡಳಿತದಿಂದ ಆಯೋಜನೆಯಾಗಿದೆ. ಭಿನ್ನ ವಿಭಿನ್ನ ಮಾದರಿಯ ಕೇಕ್‍ನ ಆಕೃತಿಗಳು ಉತ್ಸವದಲ್ಲಿ ಇರುತ್ತವೆ ಎಂದು ಉತ್ಸವಕ್ಕೆ ಬಂದವರಿಗೆ ನಿರಾಸೆ ಉಂಟಾಗಿದೆ. ಯಾಕೆಂದರೆ ಕೇಕ್ ಉತ್ಸವದಲ್ಲಿ ಕೇವಲ ಎರಡೇ ಎರಡು ಕೇಕ್‍ನ ಆಕೃತಿ ಇವೆ. ಇನ್ನುಳಿದಂತೆ ಬಗೆ ಬಗೆಯ ಕೇಕ್ ಮತ್ತು ಚಾಟ್ಸ್ ತಿನಿಸುಗಳ ಮಾರಾಟಕ್ಕಿವೆ.
Advertisement
Advertisement
ಕಳೆದ ವರ್ಷ ಬಹಳ ಅತ್ಯಾಕರ್ಷಕವಾಗಿ ಕೇಕ್ ಉತ್ಸವ ಮೂಡಿಬಂದಿದ್ದು, ಸಾರ್ವಜನಿಕರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಗಿತ್ತು. ಕಳೆದ ವರ್ಷ ಕೇಕ್‍ನಿಂದ ನಿರ್ಮಿಸಿದ್ದ ಹಲವು ಬಗೆಯ ಆಕೃತಿಗಳು ನೋಡುಗರ ಮನ ಸೂರೆಗೊಂಡಿದ್ದವು. ಅದೇ ಗುಂಗಿನಲ್ಲಿ ಈ ಬಾರಿಯ ಕೇಕ್ ಉತ್ಸವ ವೀಕ್ಷಣೆಗೆ ಜನರು ಆಗಮಿಸಿದ್ದಾರೆ. ಆದರೆ ಅವರಿಗೆ ಕೇವಲ ಕೇಕ್, ಬೇಕರಿ ತಿನಿಸು, ಚುರುಮುರಿ, ಪಾನಿಪುರಿ, ಬಜ್ಜಿ ಮಾರಾಟ ಮಾಡುವ ಮಳಿಗೆಗಳು ಮಾತ್ರ ಕಂಡು ಬಂದಿದೆ. ಹೀಗಾಗಿ ಜನರು ಉತ್ಸವದ ಬಗ್ಗೆ ಬೇಸರ ವ್ಯಕ್ತಪಡಿಸಿದರು.