ಬೆಂಗಳೂರು: ಕೇಕ್ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಬಿದ್ದ ಮಕ್ಕಳವರೆಗೂ ಎಲ್ಲರಿಗೂ ಕೇಕ್ ಇಷ್ಟ. ಅದರಲ್ಲೂ ಕ್ರಿಸ್‍ಮಸ್ ಹಬ್ಬದಲ್ಲಂತೂ ಕೇಕ್‍ಗಳ ಸಾಮ್ರಾಜ್ಯವೇ ಧರೆಗಿಳಿಯುತ್ತೆ. ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ ಕೇಕ್‍ಗಳ ಲೋಕವೊಂದು ಧರೆಗಿಳಿದಿದೆ.
ಇಲ್ಲಿ ಇಂದಿನಿಂದ ಜನವರಿ 15ರವರೆಗೆ ಭಾರತದ ಅತೀ ದೊಡ್ಡ ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ ನ 45ನೇ ವರ್ಷದ ಈ ಕೇಕ್ ಶೋವನ್ನು ಸುಮಾರು 60ಕ್ಕೂ ಹೆಚ್ಚು ನಳಪಾಕ ಪ್ರವೀಣರು, ವಿವಿಧ ಡಿಸೈನ್‍ಗಳನ್ನು ತಯಾರಿಸಿದ್ದಾರೆ.
Advertisement
Advertisement
ಪೇಸ್ಟ್ರಿ ಶೋದ ಈ ಬಾರಿಯ ಮೇನ್ ಅಟ್ರಾಕ್ಷನ್ ಎಂದರೆ 16ನೇ ಶತಮಾನದ ಸೈಂಟ್ ಬಾಸಿಲ್ ಕ್ಯಾಥೆಡ್ರಾಲ್ ಚರ್ಚ್. ಸುಮಾರು 20 ಅಡಿ ಅಗಲ ಹಾಗೂ 16 ಅಡಿ ಉದ್ದವಿರುವ ಈ ಕೇಕ್ ಅನ್ನು 120 ದಿನಗಳಲ್ಲಿ 5 ಜನರ ತಂಡ ವಿನ್ಯಾಸ ಮಾಡಿದೆ.
Advertisement
ಚರ್ಚ್ ಜೊತೆಗೆ ನರಿಗಳ ಸಂಸಾರ, ಆನೆ ಮರಿಗಳು, ಕಥಕ್ಕಳಿ ನೃತ್ಯಗಾರ, ಉದ್ದೀಪಿಸುವ ನಾಗರಾಣಿ, ವಿವಾಹದ ಉಂಗುರ, ಹಾಲೊವೀನ್ ಪಿಲ್ಲರ್, ನಮ್ಮ ಹೆಮ್ಮೆಯ ಚಂದ್ರಯಾನ 2, ಕಥಕ್ಕಳಿ ನೃತ್ಯಗಾರ್ತಿ ಹೀಗೆ ಹಲವು ಕೇಕ್‍ಗಳು ಕಮಾಲ್ ಮಾಡತ್ತಿವೆ. ಒಟ್ಟಿನಲ್ಲಿ ಈ ಶೋ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುತ್ತಿದೆ