ಬೀದರ್: ಬಾಂಬ್ ಸ್ಫೋಟದ (Bomb Blast) ಕೃತ್ಯ ಮಾಡಿದವರು ಎಲ್ಲಿ ಇದ್ದರೂ ಹುಡುಕಿ ಕಾನೂನು ಕ್ರಮ ಜರಗಿಸುತ್ತೇವೆ ಎಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.
ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮಾಡಿ ಯಾರೇ ಆರೋಪಿಗಳು ಇದ್ದರೂ ಕಠಿಣವಾದ ಶಿಕ್ಷೆ ಕೊಡುತ್ತೇವೆ. ಜೊತೆಗೆ ಮತ್ತೆ ಈ ರೀತಿ ಪ್ರಕರಣಗಳು ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಮಂಗಳೂರು ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಲಿಂಕ್ ಕಾಣ್ತಿದೆ: ಡಿಕೆಶಿ
Advertisement
Advertisement
ಇನ್ನು ವಿಧಾನಸೌಧದಲ್ಲಿ (Vidhan Soudha) ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ದೇಶ ವಿರೋಧ, ಸಮಾಜಘಾತುಕ ಶಕ್ತಿಗಳು ಇದ್ದಾರೋ ಅಂಥವರ ಮೇಲೆ ಅತ್ಯಂತ ಕಠಿಣವಾದ ಕ್ರಮ ಜರಗಿಸುತ್ತೇವೆ. ದೊಡ್ಡ ವ್ಯಕ್ತಿ ಇದ್ದರೂ, ಸಂಘಟನೆಗಳಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಎಂಟಿಸಿಯಿಂದ ಸಿಕ್ತಾ ಶಂಕಿತನ ಸುಳಿವು?- ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಪೊಲೀಸರ ಮನವಿ
Advertisement
Advertisement
ಘೋಷಣೆ ಹಾಕಿದ ವ್ಯಕ್ತಿಯನ್ನು ಪತ್ತೆ ಹಚ್ಚುತ್ತಿದ್ದೇವೆ. ರಾಷ್ಟ್ರಪ್ರೇಮ, ದೇಶಭಕ್ತಿ ಯಾರ ಸ್ವತ್ತಲ್ಲಾ. 140 ಕೋಟಿ ಜನರು ರಾಷ್ಟ್ರ ಭಕ್ತರೇ ಇದ್ದಾರೆ ಎಂದು ಬಿಜೆಪಿ ನಾಯಕರಿಗೆ ಖಂಡ್ರೆ ಟಾಂಗ್ ನೀಡಿದರು. ಇದರ ಹಿಂದೆ ಯಾರ ಕೈವಾಡವಿದೆ? ಯಾರು ಆರೋಪ ಮಾಡುತ್ತಾರೆ ಅವರ ಕೈವಾಡವಿರುತ್ತೆ ಎಂದು ಬಿಜೆಪಿ (BJP) ವಿರುದ್ಧ ಖಂಡ್ರೆ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್