ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ – ಕೊಡಲಿಯಿಂದ ಕೊಚ್ಚಿ ಸಶಸ್ತ್ರ ಪಡೆ ಕಮಾಂಡರ್ ಹತ್ಯೆ

Public TV
1 Min Read
CAF COMMANDER

ರಾಯ್‍ಪುರ್: ಸಶಸ್ತ್ರ ಪಡೆ (ಸಿಎಎಫ್) ಕಮಾಂಡರ್ (CAF commander) ಒಬ್ಬರನ್ನು ನಕ್ಸಲ್ ನಿಗ್ರಹ ಪಡೆಯ ಶಿಬಿರದ ಸಮೀಪವೇ ಮಾವೋವಾದಿಗಳು ( Maoists) ಹತ್ಯೆಗೈದ ಘಟನೆ ಛತ್ತೀಸ್‍ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಕಮಾಂಡರ್ ತೇಜು ರಾಮ್ ಭುರ್ಯ ಹತ್ಯೆಗೀಡಾದ ಕಮಾಂಡರ್ ಆಗಿದ್ದಾರೆ. ಅವರು ಶಿಬಿರದಿಂದ ಸಿಬ್ಬಂದಿ ಜೊತೆ ಸಮೀಪದ ಮಾರುಕಟ್ಟೆಗೆ ತರಕಾರಿ ತರಲು ತೆರಳುತ್ತಿದ್ದರು. ಈ ವೇಳೆ ಮಾವೋವಾದಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತೇಜು ರಾಮ್ ಅವರಿಗೆ ಕೊಡಲಿಯಿಂದ ನಕ್ಸಲರು ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಹೆಚ್ಚುವರಿ ಸೇನೆ ಅಲ್ಲಿಗೆ ತೆರಳಿದ್ದು ಅಷ್ಟರಲ್ಲೇ ಮಾವೋವಾದಿಗಳ ತಂಡ ಅಲ್ಲಿಂದ ಪರಾರಿಯಾಗಿದೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು

ಭುರ್ಯ ಅವರು ಅನುಭವಿ ಅಧಿಕಾರಿಯಾಗಿದ್ದು, ಛತ್ತೀಸ್‍ಗಢದ ವಿವಿಧ ಭಾಗಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ದಾಳಿ ನಡೆಸಿದ ನಕ್ಸಲರ ಪತ್ತೆಗಾಗಿ ಸಿಎಎಫ್ ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಸಂಧಾನಕ್ಕೆ ಹೋಗಿದ್ದ ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರುಳರು!

Share This Article