ಮುಂಬೈ: ಟೀಂ ಇಂಡಿಯಾದ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿದಿದ್ದಾರೆ. ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಅಂತಿಮವಾಗಿ ರವಿಶಾಸ್ತ್ರಿ ಅವರನ್ನೇ ಮರು ಆಯ್ಕೆ ಮಾಡಿದೆ.
ರವಿಶಾಸ್ತ್ರಿ ಜೊತೆ ನ್ಯೂಜಿಲೆಂಡಿನ ಮೈಕ್ ಹೆಸ್ಸನ್, ವೆಸ್ಟ್ ಇಂಡೀಸಿನ ಫಿಲ್ ಸಿಮನ್ಸ್, ಆಸ್ಟ್ರೇಲಿಯಾದ ಟಾಮ್ ಮೂಡಿ, ರಾಬಿನ್ ಸಿಂಗ್, ಲಾಲ್‍ಚಂದ್ ರಜಪೂತ್ ಕೋಚ್ ರೇಸ್‍ನಲ್ಲಿದ್ದರು.
Advertisement
ಇಂದು ಸಂಜೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಪಿಲ್ ದೇವ್, ಅಂಶುಮನ್ ಗಾಯಕ್‍ವಾಡ್, ಶಾಂತ ರಂಗಸ್ವಾಮಿ ಅವರು ರವಿಶಾಸ್ತ್ರಿ ಕೋಚ್ ಆಗಿದ್ದ ವೇಳೆ ಭಾರತ ತಂಡ ನೀಡಿದ ಪ್ರದರ್ಶನ ಮತ್ತು ಬಿಸಿಸಿಐ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಅವರು ನೀಡಿದ ಉತ್ತರವನ್ನು ಪರಿಗಣಿಸಿ ಮರು ಆಯ್ಕೆ ಮಾಡಿರುವುದಾಗಿ ತಿಳಿಸಿದರು.
Advertisement
The CAC reappoints Mr Ravi Shastri as the Head Coach of the Indian Cricket Team. pic.twitter.com/vLqgkyj7I2
— BCCI (@BCCI) August 16, 2019
Advertisement
6 ಮಂದಿ ಪೈಕಿ ಸಮಿತಿ ಮೂವರನ್ನು ಆರಿಸಿ ಅದರಲ್ಲಿ ರವಿಶಾಸ್ತ್ರಿ ಅವರಿಗೆ ಮೊದಲ ಸ್ಥಾನ ನೀಡಿದೆ. ಮೈಕ್ ಹೆಸ್ಸನ್ ಮತ್ತು ಟಾಮ್ ಮೂಡಿ ನಂತರದ ಸ್ಥಾನ ನೀಡಿದೆ.
Advertisement
2021ರ ಟ್ವೆಂಟಿ-20 ವಿಶ್ವಕಪ್ ವರೆಗೂ ರವಿ ಶಾಸ್ತ್ರಿ ಕೋಚ್ ಆಗಿ ಮುಂದುವರಿಯಲಿದ್ದಾರೆ. ವಿಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರವಿಶಾಸ್ತ್ರಿ ಅವರೇ ಕೋಚ್ ಆಗಿ ಮುಂದುವರಿಯಬೇಕು ಎಂದು ಹೇಳಿಕೆ ನೀಡಿದ್ದರು. ತಂಡದ ನಾಯಕನೇ ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರವಿಶಾಸ್ತ್ರಿ ಅವರೇ ಮುಂದುವರಿಯಲಿದ್ದಾರೆ ಎನ್ನುವ ಮಾತು ಅಂದೇ ಕೇಳಿಬಂದಿತ್ತು.
ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ನೇತೃತ್ವದ ಸಮಿತಿ 2017 ರಲ್ಲಿ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿತ್ತು. ಇದಕ್ಕೂ ಮುನ್ನ 2015ರ ವಿಶ್ವಕಪ್ ವೇಳೆ ರವಿಶಾಸ್ತ್ರಿ ಟೀಂ ಇಂಡಿಯಾದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.