-ಸಚಿವ ಸಂಪುಟ ಸಭೆಗೆ ಬಿಜೆಪಿ ವ್ಯಂಗ್ಯ
ಬೆಂಗಳೂರು: ದಶಕದ ಬಳಿಕ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿಯಲ್ಲಿ (Kalaburagi) ನಾಳೆ (ಮಂಗಳವಾರ) ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಇಂದೇ ಕಲಬುರಗಿ ತಲುಪಿದ್ದಾರೆ.
ನಾಳೆ ಬೆಳಗ್ಗೆ 8.25ಕ್ಕೆ ಸರ್ಧಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿರುವ ಸಿಎಂ ಸಿದ್ದರಾಮಯ್ಯ, 9 ಗಂಟೆಗೆ ಡಿಎಆರ್ ಪೊಲೀಸ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಸಂಪುಟ ಸಭೆಯ ಸಿದ್ಧತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಪರಿಶೀಲನೆ ನಡೆಸಿದರು. ನಾಳಿನ ಸಚಿವ ಸಂಪುಟ ಸಭೆಗೆ ಬಿಜೆಪಿ ವ್ಯಂಗ್ಯವಾಡಿದೆ. ಇದನ್ನೂ ಓದಿ: ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಅಶೋಕ್ ಆಗ್ರಹ
ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮಾತಾಡಿ, ಕಾಂಗ್ರೆಸ್ (Congress) ಪಕ್ಷ ಅಂದರೆ ನಾಟಕ ಕಂಪನಿಯಿದ್ದಂತೆ. ಹೀಗಾಗಿ ನಾಳೆ 2 ಗಂಟೆಗಳ ಕ್ಯಾಬಿನೆಟ್ ಡ್ರಾಮಾ ನಡೆಯಲಿದೆ. ಬರೀ ಸಚಿವರು ಓಡಾಡುವ ರಸ್ತೆ ಮಾತ್ರ ಧೂಳು ತೆಗೆದು ಗುಂಡಿ ಮುಚ್ಚುತ್ತಿದ್ದಾರೆ. ಕಲಬುರಗಿಗೆ ಪ್ರವಾಸಿಗರ ರೀತಿ ಸಚಿವರು ಬರಬಾರದು. ಜನರ ಸಮಸ್ಯೆ ಕೇಳಲು ಬರಬೇಕು ಎಂದಿದ್ದಾರೆ. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್