ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆಗೆ ಎಡ-ಬಲ ವಿಘ್ನ ಎದುರಾಗಿದೆ. ಗೌರಿ ಗಣೇಶ ಹಬ್ಬದ ಬಳಿಕ ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡೋ ಸಾಧ್ಯತೆಯಿದೆ.
ನೂತನ ಮಂತ್ರಿಗಳಾಗಿ ಹೆಚ್‍ಎಂ ರೇವಣ್ಣ ಹಾಗೂ ಷಡಕ್ಷರಿ ಓಕೆ ಆಗಿದ್ದಾರೆ. ಆದ್ರೆ ಎಸ್‍ಸಿ ಕೋಟಾದಲ್ಲಿ ನೂತನ ಸಚಿವರು ಯಾರಾಗ್ತಾರೆ ಎಂಬ ಪ್ರಶ್ನೆ ಎದ್ದಿದೆ. ಆರ್‍ಬಿ ತಿಮ್ಮಾಪುರ ಹೆಸರು ಫೈನಲ್ ಆಗಿದ್ರೂ ಲಾಬಿ ನಡೆದಿದೆ. ಮಂತ್ರಿಗಿರಿ ಗಿಟ್ಟಿಸಲು ಎಸ್‍ಸಿ ಸಮುದಾಯದ ಎಡ-ಬಲ ಬಣಗಳ ನಡುವೆ ಪೈಪೋಟಿ ಜೋರಾಗಿದೆ.
Advertisement
ಎಡಗೈ ಪರ ಮುನಿಯಪ್ಪ ಹಾಗೂ ಬಲಗೈ ಪರ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ಮಾಡಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಎಂಎಲ್‍ಸಿ ಮೋಟಮ್ಮರಿಂದಲೂ ಪ್ರಬಲ ಪೈಪೋಟಿ ಇದೆ.
Advertisement
ಪ್ರಬಲ ಲಾಬಿ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಬಳಿಕ ಸಂಪುಟ ವಿಸ್ತರಣೆಗೆ ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.
Advertisement
ತಮಟೆ ಬಾರಿಸಿ ಡ್ಯಾನ್ಸ್,ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ-ಸಚಿವ ಆಂಜನೇಯ 1ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ? https://t.co/tVTmoXWeKg #anjaneya pic.twitter.com/VuTT1jPqDJ
— PublicTV (@publictvnews) August 22, 2017