ಬಿಜೆಪಿ ಅವಧಿ ಅಕ್ರಮಗಳ ಮುಂದಿನ ತನಿಖೆಗಾಗಿ ಸಚಿವ ಸಂಪುಟ ಸಮಿತಿ ರಚನೆ: ಸಿದ್ದರಾಮಯ್ಯ

Public TV
2 Min Read
siddaramaiah 16

ಬೆಂಗಳೂರು: ಬಿಜೆಪಿ (BJP) ಅವಧಿಯಲ್ಲಿ ಅಕ್ರಮಗಳ ಕೇಸ್‌ನಲ್ಲಿ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ವರದಿ ಪಡೆಯಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿ ಹಗರಣಗಳ ತನಿಖೆಗೆ ಪರಮೇಶ್ವರ್  ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಎಚ್.ಕೆ.ಪಾಟೀಲ್, ಸಂತೋಷ್ ಲಾಡ್ ಇದ್ದಾರೆ. ನಾನು ಸದನದಲ್ಲಿ ಉತ್ತರ ಕೊಡುವಾಗ ಬಿಜೆಪಿ ಅವಧಿಯ 21 ಕ್ಕೂ ಹೆಚ್ಚು ಹಗರಣಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅವೆಲ್ಲದಕ್ಕೂ ಕೂಡಾ ತ್ವರಿತವಾಗಿ ಚಾಲನೆ ಕೊಡಲು ಮತ್ತು ಮುಂದೆ ಏನು ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ಕೊಡಲು ಸಮಿತಿ ರಚನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ಅವರೇ ಮುಖ್ಯಮಂತ್ರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಈಗ ಕೋವಿಡ್ ಹಗರಣ, ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಹಗರಣ, 40% ಹಗರಣಕ್ಕೆ ಮಾತ್ರ ಆಯೋಗ ನೇಮಕ ಮಾಡಿದ್ದೇವೆ. ಕೋವಿಡ್ ಹಗರಣದ ಪ್ರಾಥಮಿಕ ವರದಿ ಕೊಟ್ಟಿದ್ದಾರೆ. ಕೋವಿಡ್ ಹಗರಣದಲ್ಲಿ ಅಧಿಕಾರಿಗಳ ಸಮಿತಿ ಮಾಡಿದ್ದೇವೆ ಮುಂದೆ ಏನು ಮಾಡಬೇಕು ಎಂಬ ವರದಿ ಕ್ಯಾಬಿನೆಟ್‌ಗೆ ಕೊಡುತ್ತಾರೆ. ಅದಾದ ಬಳಿಕ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. 40% ಹಗರಣದ್ದು ಇನ್ನೂ ವರದಿ ಕೊಟ್ಟಿಲ್ಲ. ಕ್ಯಾಬಿನೆಟ್ ಸಬ್ ಕಮಿಟಿಯೂ ಯಾವ ಯಾವ ಕೇಸ್‌ನಲ್ಲಿ ಯಾವ ಹಂತದಲ್ಲಿ ಇವೆ? ತನಿಖೆ ಮಾಡದೇ ಇದ್ದರೆ ಯಾಕೆ ಮಾಡಲಿಲ್ಲ? ಯಾವ ತನಿಖೆ ಮಾಡಬೇಕು? ಇವುಗಳನು ನೋಡಲು ಸಮಿತಿ ಮಾಡಿದ್ದೇವೆ. ಸರ್ಕಾರ ಮುಂದೆ ಏನು ಮಾಡಬೇಕು ಎಂದು ಈ ಸಮಿತಿ ಶಿಫಾರಸು ಮಾಡುತ್ತದೆ. ಅಲ್ಲದೆ ಮುಂದೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಸೂಚನೆ ಕೊಡುತ್ತಾರೆ ಅದರಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿನ ಮೀನುಗಾರಿಕಾ ಬೋಟ್‍ಗೆ ಲಂಕಾ ನೌಕಾಪಡೆಯ ಹಡಗು ಡಿಕ್ಕಿ – ನಾಲ್ವರಿಗೆ ಗಾಯ

ಸಮಿತಿ ರಚನೆ, ಇದು ದ್ವೇಷದ ರಾಜಕೀಯ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಬಿಜೆಪಿ ಅವರು ನನ್ನ ಮೇಲೆ ಮಾಡಿದ್ದು ಏನು? ನನ್ನ ಮೇಲೆ ಮಾಡಿದ್ದು ಯಾವ ರಾಜಕೀಯ? ನಾವು ದ್ವೇಷದ ರಾಜಕೀಯ ಮಾಡುವುದಕ್ಕೆ ಹೋಗುವುದಿಲ್ಲ. ಹಿಂದೆ ನಾನು ದ್ವೇಷದ ರಾಜಕೀಯ ಮಾಡಿಲ್ಲ. ಈಗಲೂ ಮಾಡಿಲ್ಲ. ಆದರೆ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಯಾವುದೇ ಬೆಂಬಲವನ್ನು ನೀಡಿಲ್ಲ- ಪಿ.ಟಿ.ಉಷಾ ವಿರುದ್ಧ ಫೋಟೋ ಕ್ಲಿಕ್ಕಿಸಿದ ಬಗ್ಗೆ ಫೋಗಟ್ ಕಿಡಿ

Share This Article