ನವದೆಹಲಿ: ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವ ‘ಜನೌಷಧಿ’ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಹೆಸರಿನಲ್ಲಿ ಜೆನೆರಿಕ್ ಔಷಧಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಯೋಜನೆಗಾಗಿ 2026ರ ಮಾರ್ಚ್ 31ರ ಹೊತ್ತಿಗೆ 75 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಪಶು ಆರೋಗ್ಯ ಮತ್ತು ರೋಗ ನಿಯಂತ್ರಣದ ಕಾರ್ಯಕ್ರಮ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
Advertisement
ಕಳೆದ ಜನಗಣತಿಯ ಪ್ರಕಾರ 19.25 ಕೋಟಿ ಜಾನುವಾರುಗಳ ಸಂಖ್ಯೆ ಇದೆ. ಪಶುವೈದ್ಯಕೀಯ ಔಷಧಿಗಳು ಮತ್ತು ಮೇವು ಪೂರಕಕ್ಕೆ ಸುಮಾರು 6,000 ಕೋಟಿಗಳಷ್ಟು ಬಳಕೆ ಮಾಡಲಾಗುತ್ತಿದೆ. ಆದರೆ, ಪ್ರಸ್ತಾಪಿತ ನಿಧಿಯ ಹಂಚಿಕೆಯು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement
2019 ರ 20 ನೇ ಜಾನುವಾರು ಜನಗಣತಿಯ ಪ್ರಕಾರ, ಭಾರತವು ದನ, ಎಮ್ಮೆ, ಮಿಥುನ್ ಮತ್ತು ಯಾಕ್ ಸೇರಿದಂತೆ ಸುಮಾರು 30.38 ಕೋಟಿ ಗೋವುಗಳಿಗೆ ನೆಲೆಯಾಗಿದೆ. ನಂತರ ಜಾನುವಾರು ಜನಗಣತಿಯನ್ನು 2024ರ ಅಕ್ಟೋಬರ್ ಮತ್ತು 2025 ರ ಫೆಬ್ರವರಿ ನಡುವೆ ನಡೆಸಲಾಯಿತು. ಅದರ ಡೇಟಾವನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
Advertisement
ಸಂಪುಟ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ. (LHDCP) ಯೋಜನೆಯ ‘ಪಶು ಔಷಧಿ’ ಘಟಕದ ಅಡಿಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement
2024-25 ಮತ್ತು 2025-26ನೇ ಸಾಲಿಗೆ LHDCP ಯೋಜನೆಗೆ ಒಟ್ಟು ಬಜೆಟ್ 3,880 ಕೋಟಿ ರೂ. ಮೀಸಲಿಡಲು ಸಂಪುಟ ನಿರ್ಧರಿಸಿದೆ. ಪಶು ಔಷಧಿಯು ಜನೌಷಧಿ ಯೋಜನೆಯಂತೆಯೇ ಇರುತ್ತದೆ ಎಂದು ಸಚಿವರು ಒತ್ತಿ ಹೇಳಿದ್ದಾರೆ.