2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು

Public TV
3 Min Read
chandrayaan 3 south pole

– ಸ್ವದೇಶಿ ಅಂತರಿಕ್ಷ ನಿಲ್ದಾಣಕ್ಕೆ ರಾಕೆಟ್ – 8,240 ಕೋಟಿ ರೂ.ಗೆ ಸಂಪುಟ ಅನುಮೋದನೆ

ನವದೆಹಲಿ: ಚಂದ್ರನ ಮೇಲೆ ಲ್ಯಾಂಡರ್‌ ಇಳಿಸುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದ್ದ ಭಾರತ (India) ಇದೀಗ ಚಂದ್ರನ ಮೇನೆ ಮಾನವನ್ನು ಕಳಿಸುವ ಸಾಹಸಕ್ಕೆ ಮುಂದಾಗಿದೆ.

ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅಧ್ಯಯನ ನಡೆಸಿದ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಚಂದ್ರಯಾನ-4 (Chandrayaan-4) ಯೋಜನೆಗೆ ಕೇಂದ್ರ ಸಚಿವ ಸಂಪುಟ (Union Cabinet) ಅನುಮೋದನೆ ನೀಡಿದೆ. 2040ರಲ್ಲಿ ಈ ಸಾಹಸ ನಡೆಸಲು, 2104 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ. ತಂತ್ರಜ್ಞಾನ ಇನ್ನಷ್ಟೇ ಸಿದ್ದಗೊಳ್ಳಬೇಕಿದೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

XPoSatLaunch ISRO

ಎಲ್ಲವೂ ಅಂದುಕೊಂಡಂತೆ ನಡೆದರೆ 2040ಕ್ಕೆ ಈ ಸಾಹಸ ನಡೆಯಲಿದೆ. ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅವರನ್ನು ವಾಪಸ್ ಕರೆತರುವ ತಂತ್ರಜ್ಞಾನವನ್ನು ಇಸ್ರೋ ಅನಾವರಣಗೊಳಿಸಬೇಕಿದೆ. ಈ ಯೋಜನೆಗೆ 2,104.06 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ರೂಮ್‌ಗಳಿರುವ ಮನೆ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್: ಹರಿಯಾಣಕ್ಕೆ ಸಪ್ತ ಗ್ಯಾರಂಟಿ ಘೋಷಣೆ

ISRO 1

2008 ರಲ್ಲಿ ಇಸ್ರೋ ಚಂದ್ರನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಿತ್ತು. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಧ್ಯಯನ ನಡೆಸುವ ಆ ನೌಕೆಗೆ ಚಂದ್ರಯಾನ -1 ಹೆಸರಿಡಲಾಗಿತ್ತು. ಚಂದ್ರನ ಮೇಲೆ ಲ್ಯಾಂಡರ್ ಹಾಗೂ ರೋವರ್ ಇಳಿಸಲು ಚಂದ್ರಯಾನ-2 ಯೋಜನೆಯನ್ನು ಇಸ್ರೋ 2019ರಲ್ಲಿ ಹಮ್ಮಿಕೊಂಡಿತ್ತು. ಸಾಫ್ಟ್‌ವೇರ್ ದೋಷದಿಂದಾಗಿ ಅದು ವಿಫಲವಾಗಿತ್ತು. ಆದ್ರೆ 2023ರಲ್ಲಿ ಚಂದ್ರಯಾನ-3 ಕೈಗೆತ್ತಿಕೊಂಡು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ‌ರ್ ಹಾಗೂ ರೋವ‌ರ್ ಅನ್ನು ಇಳಿಸಿತ್ತು. ಇದಾದ ಬಳಿಕ ‌ಸೂರ್ಯಯಾನದಲ್ಲೂ ಇಸ್ರೋ ಸಕ್ಸಸ್‌ ಕಂಡಿತ್ತು. ಹೀಗೆ ಸಾಲು ಸಾಲು ಸಕ್ಸರ್‌ ಕಂಡಿರುವ ಇಸ್ರೋ ಇದೀಗ ಚಂದ್ರಲೋಕಕ್ಕೆ ಮಾನವನ್ನು ಕಳಿಸಲು ತಯಾರಿ ನಡೆಸುತ್ತಿದೆ.

ISRO SOMANATH

ಶುಕ್ರಗ್ರಹಕ್ಕೆ ನೌಕೆ – 1,236 ಕೋಟಿ ಅನುದಾನಕ್ಕೆ ಗ್ರೀನ್‌ ಸಿಗ್ನಲ್‌:
ಚಂದ್ರ, ಸೂರ್ಯ, ಮಂಗಳ ಗ್ರಹದ ಕುರಿತ ಅಧ್ಯಯನವನ್ನು ಯಶಸ್ವಿಯಾಗಿ ನಡೆಸಿರುವ ಇಸ್ರೋ, ಇದೀಗ ಶುಕ್ರ ಗ್ರಹದ ಅಧ್ಯಯನಕ್ಕೆ ಆರ್ಬಿಟರ್‌ ಕಳುಹಿಸಲು ನಿರ್ಧರಿಸಿದೆ. ಶುಕ್ರಗ್ರಹ ಅಧ್ಯಯನ ಕುರಿತ ಯೋಜನೆ ಜಾರಿಗೆ 1,236 ಕೋಟಿ ನೀಡಲು ಕೇಂದ್ರ ನಿರ್ಧರಿಸಿದೆ. ಬಾಹ್ಯಾಕಾಶ ಇಲಾಖೆಯ ಮಾರ್ಗದರ್ಶನದಲ್ಲಿ ಶುಕ್ರ ಆರ್ಬಿಟರ್ ಮಿಷನ್ ಅಧ್ಯಯನ ನಡೆಸಲಿದೆ. ಈ ಬಾಹ್ಯಾಕಾಶ ನೌಕೆಯು ಶುಕ್ರನ ಕಕ್ಷೆಯಲ್ಲಿ ಮೇಲೆ, ಉಪ ಮೇಲ್ಫ್, ವಾತಾವರಣದ ಪ್ರಕ್ರಿಯೆಮತ್ತು ಶುಕ್ರನ ಮೇಲೆ ಸೂರ್ಯನ ಪ್ರಭಾವದ ಕುರಿತು ಅಧ್ಯಯನ ನಡೆಸಲಿದೆ. ಶುಕ್ರನು ಭೂಮಿಗೆ ಹತ್ತಿರವಿರುವ ಗ್ರಹ ಆಗಿರುವುದರಿಂದ, ಗ್ರಹಗಳ ಪರಿಸರ ಹೇಗೆ ವಿಭಿನ್ನವಾಗಿ ರೂಪುಗೊಳ್ಳುತ್ತದೆ ಎಂದು ನೆರವಾಗಲಿದೆ. ಇದನ್ನೂ ಓದಿ: ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ಆಂಧ್ರ ಸಿಎಂ ಆರೋಪ

ಸ್ವದೇಶಿ ಅಂತರಿಕ್ಷ ನಿಲ್ದಾಣಕ್ಕೆ ರಾಕೆಟ್:
ಅಮೆರಿಕ ಮೊದಲಾದ ದೇಶಗಳು ಹೊಂದಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಪರ್ಯಾಯವಾಗಿ ಸ್ವದೇಶಿ ʻಭಾರತೀಯ ಅಂತರಿಕ್ಷ ನಿಲ್ದಾಣʼ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಸಾಕಾರಕ್ಕಾಗಿ ದೈತ್ಯ ಎನ್‌ಜಿಎಲ್ ರಾಕೆಟ್ ಅಭಿವೃದ್ಧಿಪಡಿಸುವ 8,240 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಭಾಗಶಃ ಮರುಬಳಕೆ ಮಾಡಬಹುದಾದ ನವಪೀಳಿಗೆಯ ಉಡ್ಡಯನ ವಾಹಕ (ಎನ್‌ಜಿಎಲ್‌ವಿ) ಅಭಿವೃದ್ಧಿಪಡಿಸುವ ಸಂಪುಟ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

ಇಸ್ರೋ ಬಳಿ ಈಗಾಗಲೇ ಇರುವ ದೈತ್ಯ ರಾಕೆಟ್ ‘ಲಾಂಚ್ ವೆಹಿಕಲ್ ಮಾರ್ಕ್ 3’ (LMV-3)ಗಿಂತ ಮೂರು ಪಟ್ಟು ಅಧಿಕಭಾರ ಹೊರುವ ಸಾಮರ್ಥ್ಯವನ್ನು ಎನ್‌ಜಿಎಲ್‌ವಿ ಹೊಂದಿರಲಿದೆ. ಎಲ್‌ಎಂವಿ-3ಗೆ ಹೋಲಿಸಿದರೆ ವೆಚ್ಚ ಒಂದೂವರೆ ಪಟ್ಟು ಹೆಚ್ಚಾಗುತ್ತದೆ. ಎನ್‌ಜಿಎಲ್‌ವಿಗಾಗಿ 8,240 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. 2040ರಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಚಂದ್ರಯಾನಕ್ಕೂ ಈ ರಾಕೆಟ್ ಬಳಕೆಗೆ ಬರಲಿದೆ. ಅಭಿವೃದ್ಧಿ ಹಂತವನ್ನು ಮುಗಿಸಲು 8 ವರ್ಷಗಳ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.

Share This Article