– ಅನ್ನದಾತರಿಗೆ ಬೆಳಕು ತೋರಿದ ಮೋದಿ: ಪ್ರಹ್ಲಾದ್ ಜೋಶಿ ಬಣ್ಣನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಸಕಾಲಿಕವಾಗಿ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಘೋಷಿಸಿ ರೈತರಿಗೆ ಬಲ ತುಂಬಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
Advertisement
ನವದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಮುಂಗಾರು, ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಪ್ರಧಾನಿ ಮೋದಿ ಅವರು ಅನ್ನದಾತರಿಗೆ ಬೆಳಕು ತೋರಿದ್ದಾರೆ ಎಂದು ಬಣ್ಣಿಸಿದರು.
Advertisement
2025-26ಕ್ಕೆ ಹಿಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಂತ್ರಿಮಂಡಲ ಸಮಿತಿ (ಸಿಸಿಇಎ) ವ್ಯಾಪಾರ ವರ್ಷ 2025-26ಕ್ಕಾಗಿ ಸೂಚಿಸಿದ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಲು ಅನುಮೋದನೆ ನೀಡಿದೆ ಎಂದರು. ಇದನ್ನೂ ಓದಿ: ವಕ್ಫ್ ಜಾಗದಲ್ಲಿ ಹೊಸ ಸಂಸತ್ ಭವನ ನಿರ್ಮಾಣ: ಬದ್ರುದ್ದೀನ್ ಅಜ್ಮಲ್ ವಿವಾದ
Advertisement
Advertisement
“ಅನ್ನದಾತನ ಶ್ರಮಕ್ಕೆ ತಕ್ಕ ಫಲ – ಇದು ನವ ಭಾರತದ ಪ್ರತಿಜ್ಞೆ”
ದೇಶದ ರೈತರ ಪರಮಮಿತ್ರನಾಗಿ ಸದಾ ಶ್ರಮಿಸುತ್ತಿರುವ ಪ್ರಧಾನಿ @narendramodi ಅವರ ನಾಯಕತ್ವದ ಕೇಂದ್ರ ಸಂಪುಟವು ಚಳಿಗಾಲದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಿದೆ. ಗೋಧಿ, ತೊಗರಿ, ಬಾರ್ಲಿ, ಧಾನ್ಯಗಳು, ರೇಪ್ಸೀಡ, ಸಾಸಿವೆ ಮತ್ತು ಕುಸುಬಿ ಮುಂತಾದ… pic.twitter.com/6McB5v7VmZ
— Pralhad Joshi (@JoshiPralhad) October 16, 2024
ಎಂಎಸ್‌ಪಿಯಲ್ಲಿ ಗರಿಷ್ಠ
ಹೆಚ್ಚಳವಾಗಿ ಕುರಿ ಮೇವಿನ ಕಾಳು ಮತ್ತು ಸಾಸಿವೆಗಳಿಗೆ ಪ್ರತಿ ಕ್ವಿಂಟಲ್ ಗೆ 300 ರೂ. ಹಾಗೂ ಮಸೂರ ಬೇಳೆಗೆ ಪ್ರತಿ ಕ್ವಿಂಟಲ್ ಗೆ 275 ರೂ. ಹೆಚ್ಚಿಸಿದೆ. ಕಡಲೆ, ಗೋಧಿ, ಕುಸುಬೆ ಮತ್ತು ಬಾರ್ಲಿ ಧಾನ್ಯಗಳಿಗೆ ಪ್ರತಿ ಕ್ವಿಂಟಲ್ ಗೆ ಅನುಕ್ರಮವಾಗಿ 210 ರೂ., 150 ರೂ., 140 ರೂ. ಮತ್ತು 130 ರೂಪಾಯಿ ಹೆಚ್ಚಿಸಲಾಗಿದೆ ಎಂದು ಸಚಿವರು ವಿವರಿಸಿದರು.
2025-26ರ ಹಿಂಗಾರು ಬೆಳೆಗಳಿಗಾಗಿ ಎಂ.ಎಸ್.ಪಿಯಲ್ಲಿ ಮಾಡಲಾದ ಹೆಚ್ಚಳ 2018-19ರ ಕೇಂದ್ರ ಬಜೆಟ್‌ನಲ್ಲಿ ಎಂ.ಎಸ್.ಪಿಯನ್ನು ಅಖಿಲ ಭಾರತೀಯ ನಿವ್ವಳ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಟ 1.5 ಪಟ್ಟು ಹೆಚ್ಚು ನಿಗದಿಪಡಿಸಿದೆ ಎಂದರು.
ಗೋಧಿಗೆ ಶೇ.105, ಕುರಿ ಮೇವಿಕ ಕಾಳು ಮತ್ತು ಸಾಸಿವೆಗಳಿಗೆ ಶೇ.98; ಮಸೂರ ಬೇಳೆಗೆ ಶೇ.89, ಕಡಲೆಗೆ ಶೇ.60; ಬಾರ್ಲಿಗೆ ಶೇ.60, ಕುಸುಬೆಗೆ ಶೇ.50 ರಷ್ಟಿದೆ. ಹಿಂಗಾರು ಬೆಳೆಗಳ ಎಂಎಸ್‌ಪಿಯಲ್ಲಿ ಮಾಡಲಾದ ಈ ಹೆಚ್ಚಳದಿಂದ ನಿಶ್ಚಿತವಾಗಿ ರೈತರಿಗೆ ಲಾಭ ಸಿಗಲಿದೆ ಎಂದು ಜೋಶಿ ಹೇಳಿದರು.