ಬೆಂಗಳೂರು ಬಿ ಖಾತಾದಾರರಿಗೆ ಗುಡ್ ನ್ಯೂಸ್: ಎ ಖಾತಾದಂತೆ ಬಿ ಖಾತೆಗಳಿಗೂ ಅಧಿಕೃತ ಮಾನ್ಯತೆ

Public TV
1 Min Read
Vidhana Soudha

ಬೆಂಗಳೂರು: ಬಿ ಖಾತಾ ಹೊಂದಿರುವ ಬೆಂಗಳೂರಿಗರಿಗೆ‌ (Bengaluru) ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಎ ಖಾತಾ (A Khata), ಬಿ‌ ಖಾತಾ (B Khata) ಗೊಂದಲಕ್ಕೆ ತೆರೆ ಎಳೆಯಲು ಸಂಪುಟ ಒಪ್ಪಿಗೆ ನೀಡಿದೆ.

ಎ ಖಾತಾದಂತೆ ಬಿ ಖಾತಾಗೂ ಅಧಿಕೃತ ಮಾನ್ಯತೆ ನೀಡಲು ಸಂಪುಟ ತೀರ್ಮಾನಿಸಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. 2020ರ ಮೇ 22 ರಿಂದ ಅನ್ವಯ ಆಗಲಿದ್ದು, 2024 ಸೆ.30 ರ ವರೆಗೆ ಮಾತ್ರ ಹಾಲಿ ಇರುವ ಬಿ ಖಾತಾಗಳನ್ನು ಎಲ್ಲಾ ಕಾನೂನು ಉದ್ದೇಶಕ್ಕೆ ಅಧಿಕೃತ ಖಾತಾ ಎಂದು ಪರಿಗಣಿಸುವುದಾಗಿ ಸಂಪುಟ ತೀರ್ಮಾನಿಸಿದೆ.‌ ಈ ಮೂಲಕ ಬಿ ಖಾತಾಗಳಿಗಿದ್ದ ಬಿಬಿಎಂಪಿ ಪ್ಲಾನಿಂಗ್, ಓಸಿ, ಬ್ಯಾಂಕ್ ಲೋನ್ ಸಮಸ್ಯೆಗೆ ಮುಕ್ತಿ ಸಿಗಲಿದ್ದು, ಸರ್ಕಾರದ ಮಾನದಂಡಗಳು ಮುಂದಿನ‌ ದಿನಗಗಳಲ್ಲಿ ಸ್ಪಷ್ಟವಾಗಲಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ಆರ್‌ಸಿಬಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ

Siddaramaiah Sri Chamundeshwari Development Authority Meeting 2

ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ 5 ಪಾಲಿಕಗಳ ರಚನೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.‌ ಆದರೆ, 5 ಪಾಲಿಕೆಗಳ ವ್ಯಾಪ್ತಿ ಪ್ರದೇಶ, ಗಡಿಗಳ ವಿಚಾರದಲ್ಲಿ ಗೊಂದಲ ಇದ್ದು, ಶಾಸಕರ ಸಭೆ ಕರೆದು ಅಂತಿಮಗೊಳಿಸುತ್ತೇವೆ ಎಂದು ಕ್ಯಾಬಿನೆಟ್ ‌ಸಲಹೆ ನೀಡಿದೆ.

ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ಯಾಬಿನೆಟ್ ತಾತ್ವಿಕ ಅನುಮೋದನೆ ನೀಡಿದ್ದು, ಎನ್‌ಟಿಪಿಸಿ ಗುರುತಿಸಿರುವ ಸಂಭಾವ್ಯ ಸ್ಥಳಗಳ ಪರಿಶೀಲನೆಗೆ ನಿರ್ಧಾರ ಮಾಡಿದೆ. ಇಡೀ ಕರ್ನಾಟಕದಲ್ಲಿ ಎಲ್ಲೆಲ್ಲಿ ಸಾಧ್ಯವೋ ಆ ಸ್ಥಳಗಳ ಅಧ್ಯಯನ ಮಾಡಲು ಕ್ಯಾಬಿನೆಟ್ ನಿರ್ಧರಿಸಿದೆ. ಅಂದಹಾಗೆ 3 ಸ್ಥಳಗಳ ಪರಿಶೀಲನೆಗೆ ಎನ್ಟಿಪಿಸಿ ಸಲಹೆ ನೀಡಿದ್ದರೂ, ಇಡೀ ಕರ್ನಾಟಕದಲ್ಲಿ ಒಟ್ಟಾರೆ ಸ್ಥಳ ಪರಿಶೀಲನೆ ಅಧ್ಯಯನ ನಡೆಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂಗೆ ಬರಬೇಡ ಅಂದಿದ್ದೇ ಬಿಎಸ್‍ವೈ: ಯತ್ನಾಳ್ ಬಾಂಬ್

Share This Article