ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಶೇ.100 ಮತ್ತು ಡಿಜಿಟಲ್ ಮೀಡಿಯಾದಲ್ಲಿ ಶೇ.26 ವಿದೇಶಿ ನೇರ ಬಂಡವಾಳ(ಎಫ್‍ಡಿಐ) ಹೂಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ವಿಶ್ವದೆಲ್ಲೆಡೆ ಎಫ್‍ಡಿಐ ಹೂಡಿಕೆ ಇಳಿಮುಖವಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಗುತ್ತಿಗೆ ಉತ್ಪಾದನೆ ಆಧಾರಿತ ಎಲ್ಲ ಕ್ಷೇತ್ರಗಳಲ್ಲಿ ಶೇ.100 ರಷ್ಟು ಎಫ್‍ಡಿಐ ಹೂಡಿಕೆ ಮಾಡಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
Advertisement
#Cabinet allows 100% FDI in Contract Manufacturing pic.twitter.com/GsvWadXU8x
— PIB India (@PIB_India) August 28, 2019
Advertisement
24,375 ಕೋಟಿ ರೂ. ವೆಚ್ಚದಲ್ಲಿ 2021-22ರ ಒಳಗಡೆ 75 ಹೊಸ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಇದರಿಂದಾಗಿ ದೇಶದಲ್ಲಿ 15,700 ಎಂಬಿಬಿಎಸ್ ಸೀಟ್‍ಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
Advertisement
60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಸಂಬಂಧ 6,268 ಕೋಟಿ ರೂ. ಸಬ್ಸಿಡಿ ನೀಡಲಾಗುವುದು. ಸಬ್ಸಿಡಿ ನೇರವಾಗಿ ರೈತರ ಖಾತೆಗಳಿಗೆ ಜಮೆ ಆಗಲಿದೆ ಎಂದು ತಿಳಿಸಿದರು.
Advertisement
#Cabinet approves 75 new Medical Colleges, to be established by 2021-22
Move to add 15,700 #MBBS seats in the country pic.twitter.com/ZqHZehdqOw
— PIB India (@PIB_India) August 28, 2019
ಸಿಂಗಲ್ ಬ್ರ್ಯಾಂಡ್ ರಿಟೇಲಿಂಗ್ ಎಫ್‍ಡಿಐ ನಿಯಮವನ್ನು ಸಡಿಲಿಸಲಾಗಿದೆ. ರಿಟೇಲ್ ಮಳಿಗೆ ತೆರೆಯದೇ ಆನ್‍ಲೈನ್ ಶಾಪಿಂಗ್ ತಾಣಗಳ ಮೂಲಕವೇ ವಸ್ತುಗಳನ್ನು ಮಾರಾಟ ಮಾಡಬಹುದಾಗಿದೆ.