– ಕೃತ್ಯದ ವೇಳೆ ಹಿಂಬದಿ ಸೀಟ್ನಲ್ಲಿಟ್ಟಿದ್ದ ಮೊಬೈಲ್
ಬೆಂಗಳೂರು: ಭೀಮಾನಗರ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿ ಕ್ಯಾಬ್ ಚಾಲಕ ದೇವರಾಜು ಅತ್ಯಾಚಾರವೆಸಗಿ ಪರಾರಿಯಾಗುವ ಭರದಲ್ಲಿ ತನ್ನ ಮೊಬೈಲ್ ಬಿಟ್ಟು ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬೇಗನೆ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು.
Advertisement
ಹೌದು. ಆರೋಪಿಯು ನಿದ್ದೆಯಲ್ಲಿದ್ದ ಯುವತಿ ಜೊತೆಗೆ ತನ್ನ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ನಂತರ ಆಕೆಯ ಮನೆ ಮುರುಗೇಶ್ ಪಾಳ್ಯ ಸಮಿಪವೇ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಎಚ್ಚರಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ಕಂಗಾಲಾದ ಆರೋಪಿ ಕಾರಿನಿಂದ ಹೊರಬಂದಿದ್ದಾನೆ. ಅಲ್ಲದೆ ಯುವತಿ ಜೊತೆ ಸಾರಿ ಕೇಳಿದ್ದಾನೆ.
Advertisement
Advertisement
ಇತ್ತ ಚಾಲಕನ ಕೃತ್ಯದಿಂದ ಗಾಬರಿಗೊಂಡ ಯುವತಿ, ತಾನು ಕುಳಿತಿದ್ದ ಸೀಟ್ ನಲ್ಲಿದ್ದ ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಬಟ್ಟೆ ಸರಿಮಾಡುತ್ತಾ ಕಾರಿನಿಂದ ಇಳಿದು ಮನೆಗೆ ಓಡಿದ್ದಾಳೆ. ಯುವತಿ ಮನೆಯತ್ತ ತೆರಳುತ್ತಿದ್ದಂತೆಯೇ ಇತ್ತ ಚಾಲಕ ತನ್ನ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾನೆ.
Advertisement
ಎಸ್ಕೇಪ್ ಅಗಿ ಐದು ನಿಮಿಷಗಳ ಬಳಿಕ ಆರೋಪಿ ಮತ್ತೆ ಸ್ಪಾಟ್ಗೆ ಬಂದಿದ್ದಾನೆ. ತನ್ನ ಮೊಬೈಲ್ ಹುಡುಕಿಕೊಂಡು ಮತ್ತೆ ಘಟನಾ ಸ್ಥಳಕ್ಕೆ ಬಂದು ಎಲ್ಲಾ ಕಡೆ ಹುಡುಕಾಡಿದ್ದಾನೆ. ಆದರೆ ಆತನಿಗೆ ಎಲ್ಲೂ ಮೊಬೈಲ್ ಸಿಕ್ಕಿರಲಿಲ್ಲ. ಹೀಗಾಗಿ ಅಲ್ಲಿಂದ ವಾಪಸ್ ಆಗಿದ್ದಾನೆ. ಅರೋಪಿ ದೇವರಾಜ್ ಮೊಬೈಲ್, ಸಂತ್ರಸ್ತೆ ಜೊತೆ ಇದ್ದ ಕಾರಣ ಊಬರ್ ಟ್ರಿಪ್ ಸಹ ಎಂಡ್ ಅಗಿರಲಿಲ್ಲ. ಇದನ್ನೂ ಓದಿ: ಜೀವನ್ಭೀಮಾ ನಗರ ರೇಪ್ಕೇಸ್ಗೆ ಟ್ವಿಸ್ಟ್ – ಕ್ಯಾಬ್ನಲ್ಲಿ ರೇಪ್ ಮಾಡಿರೋದು ಬೆಳಕಿಗೆ
ಮನೆಗೆ ಬಂದ ಬಳಿಕ ಯುವತಿ ಬೆಳಗ್ಗಿನ ಜಾವ 112 ಗೆ ಕರೆಮಾಡಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ಯುವತಿ ಮನೆಗೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಕರೆಸಿ ಠಾಣೆಗೆ ಯುವತಿ ಕರೆದುಕೊಂಡು ಹೋಗಿದ್ದಾರೆ. 7 ಗಂಟೆಗೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅರೋಪಿ ಮೊಬೈಲ್ ಮತ್ತು ಕಾರ್ ನಂಬರ್ ಊಬರ್ ರಿಜಿಸ್ಟರ್ ಅನ್ವಯ ಹುಡುಕಿದ್ದಾರೆ. ಘಟನೆ ಬಳಿಕ ಅವಲಹಳ್ಳಿಯ ತನ್ನ ರೂಮ್ ನಲ್ಲಿದ್ದ ಅರೋಪಿಯನ್ನು 11 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದರು. ನಂತರ ವಿಚಾರಣೆ ಬಳಿಕ ಮಧ್ಯಾಹ್ನ 2 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಎಸಿಪಿ ಹಲಸೂರು ಕುಮಾರ್ ಗೆ ಮುಂದಿನ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡೆಸಲಿದ್ದಾರೆ. ವಿಚಾರಣೆಗೆ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಇತ್ತ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ಮೌಕಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.