ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ ಗಳ ಸುಮಾರು 7 ಸಾವಿರ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭಾರತ ಬಾಂಗ್ಲಾ ವಿಭಜನೆ ಬಳಿಕ ಹಿಂಸೆಗೊಳಗಾದ ಬಾಂಗ್ಲಾ ದೇಶದ ಹಿಂದೂಗಳು 1970ರಲ್ಲಿ ಭಾರತಕ್ಕೆ ವಲಸೆ ಬಂದರು. ಆಗಿನ ಸರ್ಕಾರ ನಿರಾಶ್ರಿತರ ಯೋಜನೆಯಡಿ ಪೌರತ್ವ ನೀಡಿ ದೇಶದಲ್ಲಿ ಆಶ್ರಯ ನೀಡಿತ್ತು. ಆದ್ರೆ ಬಾಂಗ್ಲಾದೇಶದಲ್ಲಿದ್ದ ಆಸ್ತಿ ಆಸೆ ಹಾಗೂ ಇನ್ನಿತರ ಕಾರಣಗಳಿಗೆ ಅಲ್ಲೆ ಉಳಿದು 1971ರ ಬಳಿಕ ಭಾರತಕ್ಕೆ ವಲಸೆ ಬಂದವರಿಗೆ ಇದುವರೆಗೂ ಪೌರತ್ವ ನೀಡಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಈಗ ಅವರೆಲ್ಲಾ ಭಾರತೀಯರಾಗುತ್ತಿದ್ದಾರೆ.
Advertisement
ಇನ್ನೂ ಪೌರತ್ವ ಹೊಂದಿದ ಸೆಟ್ಲರ್ ಹಾಗೂ ಪೌರತ್ವಯಿಲ್ಲದ ಅನ್ ಸೆಟ್ಲರ್ ಕುಟುಂಬಗಳ ನಡುವೆ ಮದುವೆ ಸಂಬಂಧ ಬೆಳೆದಿದ್ದು ಇಲ್ಲಿ ಹುಟ್ಟುವ ಮಕ್ಕಳು ಪೌರತ್ವ ಪಡೆಯಲು ಅನರ್ಹರಾಗಿದ್ದರು. ತಾಯಿ ಭಾರತೀಯಳಾದರು ಮಕ್ಕಳು ಅಕ್ರಮ ವಲಸಿಗರಾಗಿ ಯಾವುದೇ ಸೌಲಭ್ಯ ಇಲ್ಲದೆ ಬದುಕುತ್ತಿದ್ದರು. ಸುಮಾರು 40 ವರ್ಷಗಳಿಂದ ಪೌರತ್ವವೇ ಇಲ್ಲದೆ ವಾಸಿಸುತ್ತಿದ್ದ ಈ ಜನ ಎನ್‍ಆರ್ ಸಿ ಕಾಯ್ದೆ ಜಾರಿಯಾದ್ರೆ ನಮ್ಮನ್ನು ದೇಶದಿಂದ ಹೊರ ಹಾಕುತ್ತಾರೆ ಅನ್ನೋ ಭೀತಿಯಲ್ಲಿ ಕಾಲಕಳೆಯುತ್ತಿದ್ದರು ಈಗ ನಿರುಮ್ಮಳರಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ಅನ್ಯಾಯವಾಗಲ್ಲ ಅದ್ರೆ ಕೆಲವರು ಅನಾವಶ್ಯಕವಾಗಿ ಪ್ರತಿಭಟನೆ ನಡೆಸಿದ್ದಾರೆ ಅಂತ ಬಾಂಗ್ಲಾ ವಲಸಿಗ ಆರ್ ಎಚ್ ಕ್ಯಾಂಪ್ -2 ರ ನಿವಾಸಿ ಸುಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
1970-71 ರಲ್ಲಿ 721 ಕುಟುಂಬಗಳ 4000 ಸಾವಿರ ಜನ ವಲಸೆ ಬಂದಿದ್ರು ಅವರೆಲ್ಲರಿಗೂ ಪೌರತ್ವ ಸಿಕ್ಕಿತ್ತು. ಅಲ್ಲದೆ ಬಾಂಗ್ಲಾ ನಿರಾಶ್ರಿತರಿಗಾಗಿ 5,518 ಎಕರೆ ಜಮೀನು ಮೀಸಲಿಟ್ಟು ಪ್ರತಿ ಕುಟುಂಬಕ್ಕೆ ಐದು ಎಕರೆ ಜಮೀನು, ನಿವೇಶನ, ಗುಡಿಸಲು ಸೇರಿ ಇತರೆ ಸೌಲಭ್ಯ ಒದಗಿಸಲಾಗಿತ್ತು. ಈಗ ಇಲ್ಲಿ ವಾಸ ಮಾಡುವ ಸುಮಾರು 12 ಸಾವಿರ ಜನರಿಗೆ ಪೌರತ್ವಯಿದೆ. ಆದ್ರೆ 1971ರ ಬಳಿಕ 1990 ರವರೆಗೆ ವಲಸೆ ಬಂದ ಸುಮಾರು 250 ಕುಟುಂಬಗಳ 3 ಸಾವಿರ ಜನ ಅಕ್ರಮವಾಗಿ ವಾಸಿಸುತ್ತಿದ್ದರು. ಈಗ ಅವರ ಸಂಖ್ಯೆ 7 ಸಾವಿರ ದಾಟಿದೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಿರ್ಧಾರದಿಂದ ನೆಲೆ ಕಂಡ ಖುಷಿಯಲ್ಲಿದ್ದಾರೆ.