ಬೆಂಗಳೂರು: ಸಿಎಎ, ಎನ್ಆರ್ಸಿ ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದು ವಿರೋಧವಾಗಿ ನಡೆಯುತ್ತಿದ್ದ ಪ್ರತಿಭಟನೆಯಿಂದ ನಾನು ಪ್ರಚೋದನೆಗೆ ಒಳಗಾಗಿದ್ದೆ. ಎಲ್ಲೆಲ್ಲಿ ಸಿಎಎ, ಎನ್ಆರ್ಸಿ ವಿರುದ್ಧವಾಗಿ ನಡೆಯುವ ಎಲ್ಲಾ ಪ್ರತಿಭಟನೆಯಲ್ಲೂ ನಾನು ಭಾಗಿಯಾಗುತ್ತಿದ್ದೆ ಎಂದು ಆರ್ದ್ರಾ ಅಲಿಯಾಸ್ ಅನ್ನಪೂರ್ಣೇಶ್ವರಿ ಸ್ವಇಚ್ಚಾ ಹೇಳಿಕೆ ನೀಡಿದ್ದಾಳೆ.
ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಹಲವು ವಿಚಾರಗಳನ್ನು ತಿಳಿಸಿರುವ ಈಕೆ, ಎಲ್ಲೆಲ್ಲಿ ಕಾರ್ಯಕ್ರಮಗಳು ನಿಗದಿಯಾಗುತ್ತಿತ್ತೋ ಆ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಕಾರ್ಯಕ್ರಮಗಳಿಗೆ ತಾನೇ ಮುಂದಾಗಿ ಹೋಗುತ್ತಿದ್ದೆ ಎಂದಿದ್ದಾಳೆ.
Advertisement
Advertisement
Advertisement
ಗುರುವಾರ ಸಂಜೆ ಫ್ರೀಡಂ ಪಾರ್ಕಿನಲ್ಲಿ ಅಮೂಲ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಈ ವೇಳೆ ಅಮೂಲ್ಯಳ ‘ಪಾಕಿಸ್ತಾನ್ ಜಿಂದಾಬಾದ್’ ಹೇಳಿಕೆಗೆ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಶುಕ್ರವಾರ ಅಮೂಲ್ಯ ವಿರುದ್ಧವಾಗಿ ಹಿಂದೂಪರ ಸಂಘಟನೆಗಳು ಇಂದು ಟೌನ್ ಹಾಲ್ ಬಳಿ ಸೇರಿ ಪ್ರತಿಭಟನೆ ನಡೆಸಲಿದ್ದಾರೆ ಎನ್ನುವ ವಿಚಾರ ತಿಳಿಯಿತು. ಹೀಗಾಗಿ ಗುರುವಾರವೇ ನಾನು ಮುಸಲ್ಮಾನ್ ಹಾಗೂ ದಲಿತರನ್ನ ಮುಕ್ತಗೊಳಿಸಿ, ಫ್ರೀ ಕಾಶ್ಮೀರ್ ಎಂಬ ಇಂಗ್ಲೀಷ್ ಹಾಗೂ ಕನ್ನಡದ ಬರಹಗಳಿರುವ ಸಂದೇಶಗಳನ್ನ ಬರೆದು ಇಟ್ಟುಕೊಂಡಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.
Advertisement
ಪಿಜಿ ಬಳಿಯಿದ್ದ ಅಂಗಡಿಯಿಂದ ಪೇಂಟ್ ತಗೆದುಕೊಂಡು ಬಂದು ಖಾಕಿ ಬಾಕ್ಸ್ ಗೆ ಮುಸಲ್ಮಾನ್, ಕಾಶ್ಮೀರ, ದಲಿತ್, ಟ್ರಾನ್ಸ್, ಆದಿವಾಸಿ ಮುಕ್ತಿ ಎಂದು ಬರೆದಿದ್ದೆ ಎಂಬುದಾಗಿ ತಿಳಿಸಿದ್ದಾಳೆ.
ಸ್ನೇಹಿತರು ಹೇಳೋದು ಏನು?
ಪಿಜಿಯಲ್ಲಿ ತೀರ್ಮಾನ ಮಾಡಿಕೊಂಡು ಬೆಳಗ್ಗೆ ಪ್ಲಕಾರ್ಡ್ ತಯಾರು ಮಾಡಿಕೊಂಡು ಬಂದಿದ್ದಳು. ಆಕೆಯ ಹೋರಾಟ ಮತ್ತು ಹೇಳಿಕೆ ಬಗ್ಗೆ ಗೊತ್ತಿಲ್ಲ. ಆಕೆಯ ಹೇಳಿಕೆಗೂ ನಮಗು ಯಾವುದೇ ಸಂಬಂಧ ಇಲ್ಲ. ನಾವು ಸ್ನೇಹಿತರಾದ ಕಾರಣ ಬಂದಿದ್ದೇವೆ ಅಷ್ಟೇ. ನಾವು ಯಾವ ಹೋರಾಟದಲ್ಲೂ ಭಾಗಿಯಾಗಿಲ್ಲ. ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಅಮೂಲ್ಯ ಮತ್ತು ಆರ್ದ್ರಾ ಸ್ನೇಹಿತರಾದ ಪರನ್ ಅಮಿತವ್, ನಾಜಿಬುಲ್ಲ ತಿಳಿಸಿದ್ದಾರೆ.