ಕೋಲ್ಕತ್ತಾ: ಪೌರತ್ವ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಕರೆದಿರುವ ಸರ್ವ ಪಕ್ಷ ಸಭೆಗೆ ಟಿಎಂಸಿ ಭಾಗವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ದೆಹಲಿಯಲ್ಲಿ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದಂತೆ ಸರ್ವ ಪಕ್ಷ ಸಭೆ ಆಯೋಜಿಸಿದ್ದಾರೆ. ಈ ಸಭೆಯಿಂದ ದೂರ ಇರುವುದಾಗಿ ಮಮತಾ ತಿಳಿಸಿದ್ದಾರೆ.
Advertisement
ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ ಎಂದು ದೂರಿರುವ ಮಮತಾ ಬ್ಯಾನರ್ಜಿ ಈ ವಿಚಾರದಲ್ಲಿ ಟಿಎಂಸಿ ಏಕಾಂಗಿಯಾಗಿ ಹೋರಾಟ ಮಾಡುತ್ತದೆ ಎಂದಿದ್ದಾರೆ.
Advertisement
ಎನ್.ಆರ್.ಸಿ/ಸಿಎಎ ಕಾಯ್ದೆ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ರಂಗೋಲಿ ಬಿಡಿಸುವ ಮೂಲಕ ಪ್ರತಿಭಟನೆ.
ಪ್ರತಿಭಟನೆಯಲ್ಲಿ ಕೆಪಿಎಂಸಿ ಅಧ್ಯಕ್ಷರಾದ @DrPushpaAmarnat, @TabbuRao, ಮೀನಾಕ್ಷಿ ಬೈರೇಗೌಡ, ಮಂಜುಳಾ ನಾಯ್ಡು, ಗೀತಾ ರಾಜಣ್ಣ ಸೇರಿ ಕೆಪಿಎಂಸಿ ಪದಾಧಿಕಾರಿಗಳು, ಕಾರ್ಯಕರ್ತರು ಭಾಗಿ. pic.twitter.com/Y6156fC6Cw
— Karnataka Congress (@INCKarnataka) January 9, 2020
Advertisement
ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ನಮ್ಮ ವಿರೋಧಿಯಾಗಿದೆ. ಹೀಗಾಗಿ ನಾವು ಕಾಂಗ್ರೆಸ್ ಆಯೋಜಿಸಿದ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಬಂಗಾಳದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ತಿಳಿಸಿದ್ದಾರೆ.
Advertisement
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಮೊದಲು ಆಂದೋಲನ ಆರಂಭಿಸಿದ್ದು ನಾನು. ಆದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸಿಎಎ ಮತ್ತು ಎನ್ಆರ್ಸಿ ವಿಚಾರದಲ್ಲಿ ಆಂದೋಲನ ಮಾಡದೇ ವಿಧ್ವಂಸಕ ಕೃತ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಬುಧವಾರ ನಡೆದ ಪ್ರಕರಣದ ಬಳಿಕ ಯಾವುದೇ ಕಾರಣಕ್ಕೂ ಈ ಸಭೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಹೇಳಿದರು.
CPIM Politburo Member Nilotpal Basu addressed a big protest rally and public meeting against #CAA_NRC_NPR at Raipur, Chhattisgarh. pic.twitter.com/lSYiETr6tT
— CPI (M) (@cpimspeak) January 4, 2020
ನಿನ್ನೆ ನಡೆದ ಭಾರತ್ ಬಂದ್ ವೇಳೆ ಟಿಎಂಸಿ ಮತ್ತು ಎಡ ಪಕ್ಷಗಳ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದರು. ರಾಜಕೀಯದಲ್ಲಿ ನೆಲೆ ಇಲ್ಲದವರು ಮುಷ್ಕರಕ್ಕೆ ಕರೆ ನೀಡುತ್ತಾರೆ ಎಂದು ಹೇಳಿ ಮಮತಾ ಬ್ಯಾನರ್ಜಿ ಎಡಪಕ್ಷ ಮತ್ತು ಕಾಂಗ್ರೆಸ್ಸನ್ನು ಟೀಕಿಸಿದ್ದರು.