ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರ ರೀತಿ ಗಂಡಸರು ಇನ್ಯಾರು ಇಲ್ಲ. ಅವರ ಗಂಡಸ್ತನವನ್ನು ಬಹಳ ಸಲ ಅವರು ಸಾಬೀತುಪಡಿಸಿದ್ದಾರೆ. ನಿರ್ವಿವಾದವಾಗಿ ಹೇಳುತ್ತೇನೆ ಅವರ ರೀತಿ ಗಂಡಸ್ತನ ಯಾರಿಗೂ ಇಲ್ಲ ಅಂತ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಅವರ ಗಂಡಸ್ತತನದ ಹೇಳಿಕೆ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಗಂಡಸ್ತನ ಸರ್ಟಿಫಿಕೇಟ್ ಕುಮಾರಸ್ವಾಮಿಗೆ ಇರುವ ಥರಾ ನಮಗ್ಯಾರಿಗೂ ಇಲ್ಲ. ಅವರು ಬಹಳ ಸಲ ಸಾಬೀತುಪಡಿಸಿದ್ದಾರೆ. ಅವರ ಗಂಡಸ್ತನಕ್ಕೆ ನಾವ್ಯಾರು ಸವಾಲು ಹಾಕೋಲ್ಲ. ನಿಮ್ಮ ರೀತಿ ಗಂಡಸ್ತನದ ಗಂಡು ಇನ್ನೊಬ್ಬ ಇಲ್ಲ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ
ಇದೇ ವೇಳೆ ಹಲಾಲ್ ಸರ್ಟಿಫಿಕೇಟ್ ವಿರುದ್ಧ ಕಿಡಿಕಾರಿದ ಅವರು, ಯಾವ ಆಟ ಎಲ್ಲಿ ನಡೆಯುತ್ತೆ ಅನ್ನೋದನ್ನು ಜನ ತೀರ್ಮಾನ ಮಾಡುತ್ತಾರೆ. ಹಲಾಲ್ ಅಂದ್ರೆ ಮತದ ಸೋಂಕಿಲ್ಲವಾ? ಅದು ಗುಣಮಟ್ಟಕ್ಕೆ ಕೊಡುವ ಸರ್ಟಿಫಿಕೇಟಾ? ಯಾರು ಕೊಡೋದು ಅದು? ಯಾವ ಸರ್ಕಾರ ಮಾನ್ಯ ಮಾಡಿದೆ? ದೇವೇಗೌಡರು ಸಿಎಂ, ಪಿಎಂ ಆಗಿದ್ದಾಗ ತಂದ ಸರ್ಟಿಫಿಕೇಟಾ? ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಂದ ಸರ್ಟಿಫಿಕೇಟಾ? ಹಲಾಲ್ ಅಂದ್ರೆ ಏನು ಅಂತಾ ಗಂಡಸ್ತನ ಇರೋರು ಹೇಳಲಿ. ಹಲಾಲ್ ಅನ್ನು ನಾವು ಒಪ್ಕೋಬೇಕಾ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಕೇಜ್ರಿವಾಲ್ ಮನೆ ಮೇಲೆ ದಾಳಿ- 8 ಮಂದಿ ಬಂಧನ
ವೋಟಿಗಾಗಿ ಜೊಲ್ಲು ಸುರಿಸಿ ಮಾತಾಡೋದಲ್ಲ. ಕೇಸರಿ ಬಟ್ಟೆ ಸಮಾಜ ಒಡೆದಿಲ್ಲ, ಒಂದುಗೂಡಿಸುವ ಕೆಲಸ ಮಾಡಿದೆ. ಕೆಲವರು ಇನ್ನೊಂದು ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತಾನೆ ಅಂತಾರೆ. ಇಸ್ಲಾಂನಲ್ಲಿ ಪುನರ್ಜನ್ಮಕ್ಕೆ ಅವಕಾಶ ಇಲ್ಲ. ನನ್ನ ಹಿಂದೂ ಧರ್ಮದಲ್ಲಿ ಪುನರ್ಜನ್ಮದಲ್ಲಿ ನಂಬಿಕೆ ಇದೆ. ನಾನು ಮುಂದಿನ ಜನ್ಮದಲ್ಲಿ ಹಿಂದೂವಾಗಿಯೇ ಹುಟ್ಟುತ್ತೇನೆ ಅಂತಾ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.