Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಿಯಾಂಕ್ ಖರ್ಗೆಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ: ಸಿ.ಟಿ.ರವಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪ್ರಿಯಾಂಕ್ ಖರ್ಗೆಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ: ಸಿ.ಟಿ.ರವಿ

Bengaluru City

ಪ್ರಿಯಾಂಕ್ ಖರ್ಗೆಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ: ಸಿ.ಟಿ.ರವಿ

Public TV
Last updated: February 17, 2026 2:58 pm
Public TV
Share
4 Min Read
Priyank Kharge CT Ravi
SHARE

– ಚಿಕ್ಕಮಗಳೂರು ಕಲ್ಲು ತೂರಾಟ ಪ್ರಕರಣ ಸಮಗ್ರ ತನಿಖೆ ಆಗಲಿ ಎಂದು BJP ನಾಯಕ ಆಗ್ರಹ

ಬೆಂಗಳೂರು: RSS ಬಗ್ಗೆ ಮಾತಾಡೋ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ ಅಂತ ಬಿಜೆಪಿ ನಾಯಕ ಸಿ.ಟಿ.ರವಿ (C.T.Ravi), ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RSS ದೆವ್ವ, ಬಿಜೆಪಿ ದೆವ್ವದ ನೆರಳು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ. ಸಾಂಸ್ಕೃತಿಕ ಮಾರ್ಕ್ಸ್‌ವಾದದ ಟೀಚರ್‌ಗಳು ಇವರಿಗೆ ಪಾಠ ಮಾಡ್ತಾ ಇದ್ದಾರೆ. RSS ಬಗ್ಗೆ ಗಾಂಧೀಜಿ ಏನ್ ಹೇಳಿದ್ರು. RSS ಶಿಬಿರಕ್ಕೆ ಗಾಂಧಿ ಭೇಟಿ ನೀಡಿದ್ರು. ಆಗ RSS ಕೆಲಸದ ಬಗ್ಗೆ ಹೊಗಳಿದ್ರು. ಅಂಬೇಡ್ಕರ್ RSS ಶಿಬಿರಕ್ಕೆ ಹೋಗಿದ್ರು. ಅವರು ಕೂಡಾ RSS ಕೆಲಸ ಹೊಗಳಿದ್ರು. ಪ್ರಣಬ್ ಮುಖರ್ಜಿ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ರು. ಹೆಗಡೆ ವಾರ್ ಅವರನ್ನ ಹೊಗಳಿದ್ದರು. ರತನ್ ಟಾಟಾ RSS ಬಗ್ಗೆ ಹೊಗಳಿದ್ದಾರೆ ಅಂತ ಸಂಘಟನೆ ಬಗ್ಗೆ ಮಾತಾಡೋದು ಸರಿಯಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ, ನಿಯತ್ತಿನ ನಾಯಿಗಳು: ಡಿಕೆ ಸುರೇಶ್‌ ಪಂಚ್

RSS 100 ವರ್ಷಗಳಲ್ಲಿ ವ್ಯಕ್ತಿಗೆ ಸಂಸ್ಕಾರ ಕೊಡುವ ಮೂಲಕ ಹಿಂದೂಗಳನ್ನ ಸಂಘಟನೆ ಕೆಲಸ ಮಾಡ್ತಿದೆ. ಸಂಘದ ಪ್ರೇರಣೆಯಿಂದ ನೂರಾರು ಸಂಘಟನೆಗಳು ಅನೇಕ ಸಮಾಜಮುಖಿ ಕೆಲಸ ಮಾಡ್ತಿವೆ. ಒಳ್ಳೆ ಕೆಲಸ ಮಾಡೋ ಸಂಘಟನೆಗೆ ದೆವ್ವದ ರೀತಿ ಕಾಣುತ್ತೆ ಎಂದರೆ ಪ್ರಿಯಾಂಕ್ ಖರ್ಗೆಗೆ ಮಾರ್ಕ್ಸ್‌ವಾದದ ದೆವ್ವ ಇವರಿಗೆ ಬಡಿದಿದೆ. ದೆವ್ವ ಬಡಿದಿರೋರು ಎಲ್ಲರನ್ನು ಅವರಂತೆ ನೋಡ್ತಾರೆ. ಪ್ರಿಯಾಂಕ್ ಖರ್ಗೆಗೆ ದೆವ್ವ ಬಡಿದಂತೆ ಕಾಣ್ತಿದೆ. ರಾಜ್ಯದ, ದೇಶದ ಜನ ದೇಶಕ್ಕೆ ಹಿಡಿದಿದ್ದ ಕಾಂಗ್ರೆಸ್ ದೆವ್ವ ಓಡಿಸೋ ಕೆಲಸ ಮಾಡಿದ್ರು. ಅದರ ಹತಾಶೆಯಿಂದ ಇಂತಹ ಆರೋಪ ಪ್ರಿಯಾಂಕ್ ಖರ್ಗೆ ಮಾಡ್ತಾ ಇದ್ದಾರೆ ಅಂತ ಕಿಡಿಕಾರಿದರು.

ಡೊನೇಷನ್, ಡಿವೋಷನ್‌ಗೆ ಬಹಳ ವ್ಯತ್ಯಾಸ ಇದೆ. RSS ಡೊನೇಷನ್ ಸಂಗ್ರಹ ಮಾಡೊಲ್ಲ. RSS ಸಂಘದ ಅಂಗ ಸಂಸ್ಥೆಗಳು ರಿಜಿಸ್ಟರ್ ಆಗಿವೆ. ಅವು ಡೊನೇಷನ್ ಕಲೆಕ್ಟ್ ಮಾಡ್ತವೆ. ಅದಕ್ಕೆ ಎಲ್ಲಾ ಲೆಕ್ಕಾಚಾರ ಇದೆ. RSSಗೆ ಸ್ವಯಂ ಸೇವಕರು ಗುರುಪೂರ್ಣಿಮೆ ಸಮಯದಲ್ಲಿ ಗುರು ಕಾಣಿಕೆ ಕೊಡ್ತಾರೆ. ಸಂಘಕ್ಕೆ 100 ರೂ. ಗಿಂತ ಜಾಸ್ತಿ ಹಣ ಮಾಡಬೇಕಾದ್ರೆ ಚೆಕ್ ಮೂಲಕ ಕೊಡಬೇಕು. ಅದಕ್ಕೂ ವ್ಯವಸ್ಥೆ ಇದೆ ಅಂತ ಸ್ಪಷ್ಟಪಡಿಸಿದರು.

RSS

RSS ಸರ್ಕಾರದ ಅನುದಾನಕ್ಕೆ ಕೈ ಚಾಚಿಲ್ಲ. RSS ರಿಜಿಸ್ಟರ್ ಆಗಿಲ್ಲ. ಅದರ ಅಂಗ ಸಂಘಟನೆಗಳು ರಿಜಿಸ್ಟರ್ ಆಗಿವೆ. ಇದರ ಅರಿವಿಲ್ಲದೆ ವಿರೋಧ ಮಾಡ್ತಾರೆ. ಪ್ರಿಯಾಂಕ್ ಖರ್ಗೆಗೆ ಆಂಟಿ RSS ಸಿಂಡ್ರೋಮ್ ಅಟ್ಯಾಕ್ ಆಗಿದೆ. ಪ್ರಿಯಾಂಕ್ ಖರ್ಗೆ ಅವರೇ ದೇಶ ಸೇವೆ ಕೆಲಸವನ್ನು ವಿರೋಧ ಮಾಡ್ತೀರಾ ನೀವು? ಸಂಘಕ್ಕೆ 100 ವರ್ಷಗಳ ಹಿನ್ನೆಲೆಯಲ್ಲಿ 5 ವಿಚಾರ ಇಟ್ಟುಕೊಂಡು ಪಂಚ ಪರಿವರ್ತನೆ ಅಂತ ಸಂಘ ಪ್ರಚಾರ ಮಾಡ್ತಿದೆ. ಇದಕ್ಕೆ ನಿಮ್ಮ ವಿರೋಧನಾ? ಹಿಂದೂಗಳು ಒಟ್ಟಾದ್ರೆ ಜಾತಿ ರಾಜಕೀಯ ಮಾಡೋಕೆ ಆಗೊಲ್ಲ ಅಂತ ಪ್ರಿಯಾಂಕ್ ಖರ್ಗೆ RSS ವಿರೋಧ ಮಾಡ್ತಾ ಇದ್ದಾರೆ. RSS ದೆವ್ವ ಅಲ್ಲ. ನಿಮಗೆ ದೆವ್ವ ಮೆಟ್ಟಿದೆ. ನಿಮಗೆ ಮಾರ್ಕ್ಸ್‌ವಾದದ ದೆವ್ವ ಅಥವಾ ನಿಮ್ಮ ಹತಾಶೆಯ ದೆವ್ವ ಹಿಡಿದಿದೆ. ನಿಮಗೆ ಹಿಡಿದಿರೋ ದೆವ್ವನ ಓಡಿಸೋ ಅವಶ್ಯಕತೆ ಇದೆ. ದೇಶಭಕ್ತಿಯ ಪ್ರೇರಣೆ ಕೊಡುವ ದೇವರನ್ನ ದೂರ ಮಾಡೋ ಅವಶ್ಯಕತೆ ಇಲ್ಲ. RSS ದೇವತಾ ಕಾರ್ಯ ಮಾಡ್ತಿದೆ. ದೇವರ ಕಾರ್ಯ ಮಾಡ್ತಿದೆ. ರಾಷ್ಟ್ರ ಮೊದಲು ಅಂತ ಕೆಲಸ ಮಾಡ್ತಿದೆ. ಅದು ದೇವರು ನಿಮಗೆ ಮೆಟ್ಟಿರೋದು ದೆವ್ವ. ನಿಮ್ಮ ರಾಜಕೀಯ ಆರೋಗ್ಯ, ವ್ಯಕ್ತಿಗತ ಆರೋಗ್ಯದ ದೃಷ್ಟಿಯಿಂದ ನಿಮಗೆ ಹಿಡಿದಿರೋ ದೆವ್ವ ಬಿಡಿಸೋ ಅವಶ್ಯಕತೆ ಇದೆ ಅಂತ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮೋಹನ್ ದಾಸ್ ಪೈ ಟಾಂಗ್

ಚಿಕ್ಕಮಗಳೂರು ಕಲ್ಲು ತೂರಾಟ ಪ್ರಕರಣ ಸಮಗ್ರ ತನಿಖೆ ಆಗಲಿ
ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಸಮುದಾಯದಿಂದ ಕಲ್ಲು ತೂರಾಟ ಮಾಡಿರೋ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು. ಸುಧಾ ಎಂಬ SC ಸಮುದಾಯದ ಸರ್ಕಾರಿ ನೌಕರರು. ಅವರ ಮುನ್ನಡೆಗೆ 3-4 ದಿನಗಳಿಂದ ಕಲ್ಲು ತೂರಾಟ ಮಾಡಿದ್ದಾರೆ. ಅವರು ದೂರು ಕೊಟ್ಟಿದ್ದಾರೆ. ನಿನ್ನೆ ರೆಡ್‌ಹ್ಯಾಂಡ್ ಅವರನ್ನು ಬಂಧಿಸಿದ್ದಾರೆ. ಅರೆಸ್ಟ್ ಆದವರು 16-17 ವರ್ಷದವರು.ಅವರ ಪರ ಕೆಲವರು ಬಂದಿದ್ದಾರೆ. ಇಂತಹ ಘಟನೆ ಪದೇ‌ಪದೇ ಚಿಕ್ಕಮಗಳೂರುನಲ್ಲಿ ನಡೆಯುತ್ತಿದೆ‌ ಅಂತ ಆತಂಕ ವ್ಯಕ್ತಪಡಿಸಿದರು.

ಪ್ರಕರಣದ ಬಗ್ಗೆ ದೂರು ದಾಖಲಾಗಿದೆ. ಯಾಕೆ ಇದನ್ನ ಮಾಡಿದ್ದಾರೆ. ಯಾಕೆ ಕಲ್ಲು ಹೊಡೆದ್ರು ಸಮಗ್ರ ತನಿಖೆ ಆಗಬೇಕು. ತಪ್ಪು ಮಾಡಿದವರನ್ನ ಸಮರ್ಥನೆ ಮಾಡೋಕೆ ಬರೋದು ಸೂಕ್ತ ಅಲ್ಲ. ಆದ್ದರಿಂದ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತೆ. ತಪ್ಪು ‌ಮಾಡಿರೋರಿಗೆ ಶಿಕ್ಷೆ ಆಗುತ್ತದೆ. ಕಾನೂನಿನ ಮಧ್ಯೆ ಯಾರೂ ಪ್ರವೇಶ ಮಾಡಬಾರದು ಅಂತ ತಿಳಿಸಿದರು.

TAGGED:bjpc t ravicongressPriyank Khargerss
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

fight over a girlfriend young man murdered his friend Terdala Bagalkote
Bagalkot

ಒಬ್ಬಳಿಗಾಗಿ ಸ್ನೇಹಿತರ ಮಧ್ಯೆ ಕಿತ್ತಾಟ – ಚಾಕು ಇರಿದು ಕೊಂದೇ ಬಿಟ್ಟ!

Public TV
By Public TV
3 hours ago
Shehbaz Sharif
Latest

ಇಂಧನ ಹೊಡೆತಕ್ಕೆ ಪಾಕ್ ತತ್ತರ – ಶಾಲೆಗಳಿಗೆ 2 ವಾರ ರಜೆ, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

Public TV
By Public TV
3 hours ago
Davangere South Ticket Fight Siraj Ahmed
Davanagere

ಜಮೀರ್‌ ಬಳಿ ಕ್ಷಮೆ ಕೇಳದೇ ಇದ್ರೆ ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಎಫೆಕ್ಟ್ ಆಗುತ್ತೆ: ಮಲ್ಲಿಕಾರ್ಜುನ್‌ಗೆ ಸಿರಾಜ್ ಅಹ್ಮದ್‌ ವಾರ್ನಿಂಗ್‌

Public TV
By Public TV
3 hours ago
Raichur Couple Death
Districts

ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿ ಸಾವು

Public TV
By Public TV
3 hours ago
lpg sylender
Latest

ಇರಾನ್‌ ಯುದ್ಧ| ಎಲ್‌ಪಿಜಿ ಕನಿಷ್ಠ ಬುಕ್ಕಿಂಗ್‌ ಅವಧಿಯನ್ನು ಹೆಚ್ಚಿಸಿದ ಕೇಂದ್ರ

Public TV
By Public TV
5 hours ago
GBA Maheshwar Rao
Bengaluru City

ಪರಿಷ್ಕೃತ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ ಜಿಬಿಎ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?