ಚಿಕ್ಕಬಳ್ಳಾಪುರ: ನಾನು ಹಿಂದೂ ಆಗಿಯೇ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwara) ಅವರಿಗೆ ಬಿಜೆಪಿ ಮುಖಂಡ ಸಿ.ಟಿ ರವಿ (CT Ravi) ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದ ಮರಳುಕುಂಟೆ ಗ್ರಾಮದಲ್ಲಿ ಬರ ಅಧ್ಯಯನದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿಯವರಿಗೆ ಶ್ರೀರಾಮನೇ ಚುನಾವಣಾ ಅಜೆಂಡಾ ಎಂಬ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಬಿಜೆಪಿ (BJP) ನೇರವಾಗಿ ತೊಡಗಿಸಿಕೊಂಡಿತ್ತು. ರಾಮಮಂದಿರಕ್ಕೆ ವಿರೋಧ ಮಾಡಿದ್ದು ಕಾಂಗ್ರೆಸ್ (Congress) ಪಕ್ಷ. ಹಜ್ ಯಾತ್ರೆಗೆ ಕಳಿಸೋದು ಮಾತ್ರ ಜಾತ್ಯಾತೀತತೆಯೇ? ಅಯೋಧ್ಯೆಗೆ ಯಾತ್ರೆ ಕಳುಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆಯೇ? ಚುನಾವಣೆ ವೇಳೆಯ ಹಿಂದೂಗಳು ಇದೇ ರೀತಿ ಮಾತನಾಡುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗೋಕೆ ಕುಮಾರಸ್ವಾಮಿ ಬೆಂಬಲ ಕೊಡೋದಾದ್ರೆ ಕೊಡಲಿ: ಪರಮೇಶ್ವರ್ ಲೇವಡಿ
ನಾವು ಹುಟ್ಟಿನಿಂದ ಸಾಯುವವರೆಗೂ ಹಿಂದೂಗಳು, ಆದರೆ ಕೆಲವರಿಗೆ ಚುನಾವಣೆ ವೇಳೆ ಉದ್ದದ ನಾಮ ಬರುತ್ತದೆ. ಜೈ ಶ್ರೀರಾಮ್, ಹರಹರ ಮಹಾದೇವ ಘೋಷಣೆಗಳು ಬರುತ್ತವೆ. ಆಮೇಲೆ ಇವರೆಲ್ಲ ನಾಪತ್ತೆ ಆಗುತ್ತಾರೆ. ಜಾತ್ಯಾತೀತತೆ ಅಂದರೆ ಸರ್ವ ಧರ್ಮ ಭಾವ, ತಾಲಿಬಾನ್ ಹಾಗೂ ಹಮಾಸ್‍ಗಳ ಬಳಿ ಸರ್ವ ಧರ್ಮ ಭಾವ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಗೆ ಉಚಿತ ಪ್ರವಾಸ ಆಯೋಜನೆ ಎಂಬ ಬಿಜೆಪಿ ಚುನಾವಣಾ ಪ್ರಣಾಳಿಕೆ ವಿಚಾರಕ್ಕೆ ಪರಮೇಶ್ವರ್ ಅವರು ಟೀಕೆ ಮಾಡಿದ್ದರು. ಇದನ್ನೂ ಓದಿ: ಸರ್ಕಾರದ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇ ತಪ್ಪಾ?: ಕೊಲೆಯಾದ ಪ್ರತಿಮಾ ಸಹೋದರನ ಗೋಳಾಟ