– ಮತಾಂದರ ಸೊಕ್ಕಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ
ಚಿಕ್ಕಮಗಳೂರು: 80% ಹಿಂದೂಗಳೇ ಇದ್ದರೂ ನೆಮ್ಮದಿಯಿಂದ ಗಣೇಶೋತ್ಸವ ಆಚರಿಸೋಕೆ ಆಗ್ತಿಲ್ಲ. ನಾಗಮಂಗಲ, ದಾವಣಗೆರೆಯಲ್ಲಿ ಕಲ್ಲು ತೂರಾಟ, ಬೆಳಗಾವಿಯಲ್ಲಿ ಚಾಕು ಇರಿತ, ಇಂತಹ ಕೆಟ್ಟ ಪರಿಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ (Congress) ಸರ್ಕಾರ ತಂದಿದೆ ಎಂದು ಎಂಎಲ್‍ಸಿ ಸಿ.ಟಿ ರವಿ (C.T Ravi) ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವಡೆ ಗಣಪತಿ ಮೆರವಣಿಗೆ ವೇಳೆ ನಡೆದ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಮತಾಂದರಿಗೆ ಬೆಂಬಲ ಕೊಟ್ಟು ರಾಜಕಾರಣ ಮಾಡುವುದರಿಂದ ಮತಾಂದರು ಕೊಬ್ಬಿದ್ದಾರೆ. ಸಿದ್ದರಾಮಯ್ಯನವರೇ (Siddaramaiah), ನಿಮ್ಮ ಸೆಕ್ಯುಲರ್ ಅಂದ್ರೆ ಇದೇನಾ? ಗಣೇಶೋತ್ಸವದ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಹಾಕಿಸೋದು ನಿಮ್ಮ ಸೆಕ್ಯುಲರ್ ನೀತಿನಾ? ನಿಮ್ಮ ಸರ್ಕಾರ ಬಂದಾಗ ಏಕೆ ಇವರೆಲ್ಲ ಬಾಲ ಬಿಚ್ಚುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ
ಮತಾಂದರ ಇಂತಹ ಸೊಕ್ಕಿಗೆ ನಿಮ್ಮ ಸರ್ಕಾರವೇ ಕಾರಣ. ಅವರ ಹಡೆಮುರಿ ಕಟ್ಟದಿದ್ರೆ ಕರ್ನಾಟಕ ನಾಡಗೀತೆಗೆ ಆಶಯದಂತೆ ಇರುವುದಿಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.
ಜಮೀರ್ ಅಹ್ಮದ್, ಪ್ಯಾಲೆಸ್ತೀನ್ ಧ್ವಜ ಹಾರಿಸಿದರೆ ತಪ್ಪೇನು ಎಂದು ಕೇಳಿದ್ದಾರೆ. ಜಮೀರ್ ಸಾಹೇಬ್ರೆ, ಇಲ್ಲಿರುವವರಿಗೂ ಪ್ಯಾಲೆಸ್ತೀನ್‍ಗೂ ಏನು ಸಂಬಂಧ? ಏಕೆ ಹಾರಿಸಬೇಕು? ನಿಮಗೆ ಭಾರತದ ಧ್ವಜ ಹಾರಿಸಬೇಕಾದ್ರೆ ಕಷ್ಟವಾಗುತ್ತದೆ. ಒಂದೇ ಮಾತರಂ ಹೇಳಲು ಷರಿಯಾ ಅಡ್ಡಿಯಾಗುತ್ತೆ. ಅವರಿಗೆ ಬೆಂಬಲಿಸಿ ಮಾತನಾಡುವುದ ನೋಡಿದಾಗ ನಿಮ್ಮ ಬಗ್ಗೆಯೂ ಅನುಮಾನ ಬರುತ್ತದೆ. ಸರ್ಕಾರ ಹಾಗೂ ನಿಮ್ಮ ನಡವಳಿಕೆ ಜಿನ್ನಾಗಿಂತ ಕಡಿಮೆ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಗುಪ್ತಚರ ಇಲಾಖೆಗೆ ಮಾಹಿತಿ ಗೊತ್ತಿರುತ್ತದೆ. ಆದರೆ ಮೌಖಿಕ ಆದೇಶ ಇದೆ, ಬಾಂಧವರು ಏನು ಮಾಡಿದರು ಸುಮ್ಮನಿರಬೇಕು ಎಂದು, ಅದಕ್ಕೆ ಬಾಂಧವರ ಮೇಲೆ ಕ್ರಮ ತೆಗೆದುಕೊಂಡರೆ, ಪೊಲೀಸರ ಮೇಲೆ ಕ್ರಮ ಆಗುತ್ತೆ. ಈ ಕಾರಣಕ್ಕೆ ಪೊಲೀಸರು ಅಸಾಹಯಕರಾಗಿದ್ದಾರೆ. ತಾಲಿಬಾನ್ ಸರ್ಕಾರವಿದ್ದರೂ ಇಷ್ಟೊಂದು ಸ್ವೇಚ್ಛಾಚಾರ ಇರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಗಮಂಗಲದಲ್ಲಿ ನಿಷೇಧಿತ ಪಿಎಫ್‌ಐ ಸಕ್ರೀಯ, ಆಸ್ತಿ ಮುಟ್ಟುಗೋಲು ಹಾಕಬೇಕು – ಬಿಜೆಪಿ ಸತ್ಯಶೋಧನಾ ವರದಿಯಲ್ಲಿ ಏನಿದೆ?