– ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಅಂತಾ ಮೋದಿ ಚುನಾವಣಾ ಬಾಂಡ್ ತಂದ್ರು
ಚಿಕ್ಕಮಗಳೂರು: ಕಾಂಗ್ರೆಸ್‌ಗೆ ಚುನಾವಣಾ ಬಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ಳುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಕಿಡಿಕಾರಿದರು.
Advertisement
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಮೇಲೆ ಕೇಸ್ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಚುನಾವಣಾ ಬಾಂಡ್ ವೈಯಕ್ತಿಕವಲ್ಲ, ಪಾರ್ಲಿಮೆಂಟ್‌ನಲ್ಲಿ ಪಾಸ್ ಮಾಡಿ, ಆಯೋಗದ ಗಮನಕ್ಕೂ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ
Advertisement
Advertisement
ರಾಜಕೀಯ ಪಕ್ಷಗಳಿಗೆ ನಿಧಿ ಸಂಗ್ರಹಿಸಲು ಪಾರದರ್ಶಕ ವ್ಯವಸ್ಥೆ ಹುಟ್ಟು ಹಾಕಿದ್ದು, ಆಯಾ ಪಕ್ಷಗಳ ಸಾಮರ್ಥ್ಯ, ಬೆಂಬಲ, ಹಿತೈಷಿಗಳ ಅನುಗುಣವಾಗಿ ಚುನಾವಣಾ ಬಾಂಡ್ ಸಿಕ್ಕಿದೆ. ಕಾಂಗ್ರೆಸ್ಸಿಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು ಎಂದು ಟೀಕಿಸಿದರು.
Advertisement
ಮೋದಿ ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಎಂದು ಚುನಾವಣಾ ಬಾಂಡ್ ತಂದ್ರು. ಪಾರದರ್ಶಕ ವ್ಯವಸ್ಥೆ ತಪ್ಪೋ… ಕದ್ದು ಸೂಟ್ಕೇಸ್ ತೆಗೆದೊಳ್ತಿದ್ದದ್ದು ತಪ್ಪೋ. ಕಾಂಗ್ರೆಸ್ ಕದ್ದು ಸೂಟ್‌ಕೇಸ್ ತೆಗೆದುಕೊಳ್ತಿರೋದು ಸರಿ, ಪಾರ್ದರ್ಶಕತೆ ತಪ್ಪು ಅಂತಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಕದ್ದು ಯಾರಿಗೆ, ಯಾರು, ಎಷ್ಟು ಅನ್ನೋದು ಗೊತ್ತಾಗಬಾರದು ಅನ್ನೋದು ಕಾಂಗ್ರೆಸ್ ಉದ್ದೇಶ. ಇಂದು ಕಾಂಗ್ರೆಸ್ ಅಕ್ರಮಕ್ಕೆ ಪ್ರೋತ್ಸಾಹ ಕೊಡುವ ಮಾತನ್ನ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಶಂಕಿತ ಡೆಂಗ್ಯೂಗೆ 5 ವರ್ಷದ ಬಾಲಕ ಬಲಿ
ಪಾರದರ್ಶಕ, ಪ್ರಾಮಾಣಿಕತೆ ಹುಟ್ಟು ಹಾಕಿದವರ ಮೇಲೆ ಕೇಸ್ ದಾಖಲಿಸಿದೆ. ತೊಂದರೆ ಇಲ್ಲ, ಇವೆಲ್ಲವನ್ನೂ ನಾವು ಎದುರಿಸುತ್ತೇವೆ. ಮುಡಾ ಪ್ರಕರಣಕ್ಕೂ ಅದಕ್ಕೂ ಹೋಲಿಕೆ ಮಾಡಬಾರದು. ಮುಡಾ ವ್ಯಕ್ತಿಗತ ಸ್ವಾರ್ಥದಿಂದ, ಡಿನೋಟಿಫೈ, ಕನ್ವರ್ಷನ್‌ನಿಂದ ನಿವೇಶನ ಪಡೆಯೋವರೆಗೂ ಸ್ವಹಿತಾಸಕ್ತಿ ಇದೆ ಎಂದು ತರಾಟೆಗೆ ತೆಗೆದುಕೊಂಡರು.