ಬೆಂಗಳೂರು: ಕುಮಾಸ್ವಾಮಿ ಅವರಿಗಿರುವ ತರಹದ ಗಂಡಸ್ತನ ನಮಗ್ಯಾರಿಗೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ. ರವಿ ಅವರು ಟಾಂಗ್ ನೀಡಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕುಮಾಸ್ವಾಮಿ ಅವರಿಗಿರುವ ತರಹದ ಗಂಡಸ್ತನದ ಸರ್ಟಿಫಿಕೇಟ್ ನಮಗ್ಯಾರಿಗೂ ಇಲ್ಲ. ಅವರ ಗಂಡಸ್ತನವನ್ನು ಬಹಳ ಸಾರಿ ಸಾಬೀತುಪಡಿಸಿದ್ದಾರೆ. ಆದರೆ ನಾವು ಆ ತರಹದವರಲ್ಲ. ಹಾಗಾಗಿ ಅವರಿಗಿರುವ ಗಂಡಸ್ತನದ ಬಗ್ಗೆ ನಾವು ಯಾರು ಸವಾಲು ಹಾಕುವುದಿಲ್ಲ. ನಾವು ಅವರೊಂದಿಗೆ ಕಾಂಪಿಟೇಷನ್ ಕೂಡ ಮಾಡುವುದಿಲ್ಲ. ನಾವು ನಿರ್ವಿವಾದವಾಗಿ ಒಪ್ಪಿಕೊಳ್ಳುತ್ತೇವೆ, ನಿಮಗಿರುವಂತಹ ಗಂಡಸ್ತನ ನಮಗ್ಯಾರಿಗೂ ಇಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ನಿಮ್ಮ ಆಟವನ್ನು ಇಲ್ಲಿ ಬಿಟ್ಟುಬಿಡಿ ಎಂಬ ಹೆಚ್‍ಡಿಕೆ ಹೇಳಿಕೆಗೆ, ಯಾರ ಆಟ ಎಲ್ಲ ನಡೆಯುತ್ತದೆ ಎಂಬುವುದನ್ನು ಜನ ತೀರ್ಮಾನ ಮಾಡುತ್ತಾರೆ. ಈ ಕುರಿತಂತೆ ನಾನು ಪ್ರಶ್ನಿಸುವುದಿಲ್ಲ. ಆದರೆ ಹಲಾಲ್ ಎಂದರೇನು? ಅದಕ್ಕೆ ಧಾರ್ಮಿಕ, ಮತದ ಸೋಂಕಿಲ್ಲವಾ, ಹಲಾಲ್ ಎಂದರೆ ಗುಣಮಟ್ಟಕ್ಕೆ ಪ್ರಮಾಣಿಸಿಕೊಡುವಂತಹ ಸರ್ಟಿಫೀಕೆಟಾ, ಐಎಸ್‍ಐ ಎಂಬುವುದು ಕ್ವಾಲಿಗೆ ಕೊಡುವಂತಹ ಸರ್ಟಿಫಿಕೇಟ್. ಅದೇ ರೀತಿ ಹಲಾಲ್ ಎಂಬುವುದು ಕ್ವಾಲಿಟಿಗೆ ನೀಡುವಂತಹ ಸರ್ಟಿಫಿಕೇಟಾ? ಇಲ್ಲ ಇದೊಂದು ಮತಂತರವನ್ನು ಚಲಾಯಿಸುವಂತಹ ಸರ್ಟಿಫಿಕೇಟಾ. ಇದನ್ನು ಯಾರು ಕೊಡುತ್ತಾರೆ? ಯಾವ ಸರ್ಕಾರದಲ್ಲಿ ಈ ನಿಯಮವಿದೆ. ದೇವೆಗೌಡರವರು ಪ್ರಧಾನಿಯಾಗಿದ್ದಾಗ ಈ ಸರ್ಟಿಫಿಕೇಟ್‍ನನ್ನು ತಂದರಾ, ಇಲ್ಲ ಬಸವರಾಜ್ ಬೊಮ್ಮಾಯಿ ಅವರು ತಂದರಾ? ಇಲ್ಲ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ತಂದರಾ? ಹಲಾಲ್ ಎಂದರೇನು? ಈ ಬಗ್ಗೆ ಗಂಡಸ್ತನ ಇರುವವರು ಹೇಳಲಿ ಎಂದು ಹರಿಹಾಯ್ದಿದ್ದಾರೆ.
ಇದೇ ವೇಳೆ, ಕೇಸರಿ ವಸ್ತ್ರ ಎಂದಿಗೂ ಸಮಾಜವನ್ನು ಒಡೆಯುವುದಿಲ್ಲ. ಬದಲಿಗೆ ಜೋಡಿಸುತ್ತದೆ. ಕೇಸರಿಯಲ್ಲಿ ಬಲವಿದೆ. ಕೇಸರಿ ಇರುವಂತಹ ಕಡೆ ಜಾತಿ ಜಗಳವಿಲ್ಲ. ಅಸ್ಪೃಶ್ಯತೆ ಇಲ್ಲ. ಇದ್ದರೂ ಸಣ್ಣ ಪ್ರಮಾಣದಲ್ಲಿ ಮಾತ್ರವಿದೆ. ಜಾತಿವಾದಿಗಳು ಎಲ್ಲಿರುತ್ತಾರೋ ಅಲ್ಲಿ ಅಸ್ಪೃಶ್ಯತೆ ಇದೆ. ಈ ದೇಶವನ್ನು ತುಂಡು ಮಾಡಿದ್ದ ಕೇಸರಿ ವಸ್ತ್ರ ಧರಿಸಿದವರಲ್ಲ ಎಂದು ಹೇಳಿದ್ದಾರೆ.