ಚಿಕ್ಕಮಗಳೂರು: `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಟೀಕಿಸಿರುವ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು `ಕಾಶ್ಮೀರದಲ್ಲಿ ಸಿದ್ದರಾಮಯ್ಯ ಅವರ ಮಕ್ಕಳು, ಮೊಮ್ಮೊಕ್ಕಳು ಉಳಿಯುತ್ತಿರಲಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ಸಿದ್ರಾಮುಲ್ಲಾ ಖಾನ್ ಆಗಿದ್ದರೆ ಮಾತ್ರ ಉಳಿದಕೊಳ್ಳೋರು ಎಂದು ವ್ಯಂಗ್ಯವಾಡಿದರು.
Advertisement
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, `ದಿ ಕಾಶ್ಮೀರ್ ಫೈಲ್ಸ್’ ಸತ್ಯದ ಘಟನೆಗಳನ್ನು ಆಧರಿಸಿದ ಚಿತ್ರ. ಸಿದ್ದರಾಮಯ್ಯ ಅವರು ವಕೀಲರಿದ್ದಾರೆ, ತಿಳಿವಳಿಕೆಯುಳ್ಳವರಾಗಿದ್ದಾರೆ. ಎಲ್ಲ ಕಾಲಘಟ್ಟಕ್ಕೂ ಸರ್ಕಾರಿ ದಾಖಲೆಗಳನ್ನಿಟ್ಟಿದ್ದಾರೆ. ಎಲ್ಲ ದಾಖಲೆಗಳನ್ನು ಒಳಗೊಂಡಂತೆಯೇ ಈ ಚಿತ್ರವನ್ನು ತೆರೆಗೆ ತಂದಿದ್ದಾರೆ. ಸಿದ್ದರಾಮಯ್ಯನವರಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಗವದ್ಗೀತೆ ಅಳವಡಿಸುವುದು ಕೊರೊನಾ ಮಹಾಮಾರಿಗಿಂತ ಮಾರಕ: ತನ್ವೀರ್ ಸೇಠ್
Advertisement
ಅಂದಿನ ಬಾಮಿಯಾನ್‍ನಲ್ಲಿ ಬುದ್ಧನನ್ನೂ ತಾಲಿಬಾನ್‍ಗಳು ಫಿರಂಗಿ ಇಟ್ಟು ಉಡಾಯಿಸಿದರು. ಅದೇ ಜನ ಕಾಶ್ಮೀರಿ ಪಂಡಿತರನ್ನು, ಹಿಂದೂಗಳನ್ನೂ ಕಾಶ್ಮೀರಿ ಕಣಿವೆ ತೊರೆಯಿರಿ ಎಂದು ಮೈಕ್‍ನಲ್ಲಿ ಸಾರಿದರು. ಅದೇ ಜನ ಭಯ ಹುಟ್ಟಿಸಲು ಕೊಂದರು. ಗರಗಸದಲ್ಲಿ ಕೊಯ್ದು ಕೊಂದರು. ಅದಕ್ಕೆ ಸಾಕ್ಷಿ ಬೇಕು ಅಂದರೆ ಸಾವಿರ ಸಾಕ್ಷಿಗಳು ಸಿಗುತ್ತವೆ ಎಂದು ಸ್ಪಷ್ಟಪಡಿಸಿದರು.
Advertisement
ಆ ಕಾಶ್ಮೀರಿ ಪಂಡಿತರ ಕುಟುಂಬದವರು ಇನ್ನೂ ಬದುಕಿದ್ದಾರೆ, ನಿರಾಶ್ರಿತರಾಗಿದ್ದಾರೆ. ಎಲ್ಲದರಲ್ಲೂ ರಾಜಕೀಯ ಹುಡುಕುವ ಪೂರ್ವಾಗ್ರಹ ಮನಸ್ಥಿತಿಗೆ ಇದೆಲ್ಲವೂ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ನೋಡಿ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಸತ್ಯವನ್ನೂ ನೋಡಿ ಒಪ್ಪಿಕೊಳ್ಳುವ ಮನಸ್ಸು, ಮನಸ್ಥಿತಿಯಿಲ್ಲ ಎಂದು ಟೀಕಿಸಿದರು.
Advertisement
ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ:
ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ, ಬದಲಿಗೆ ಜೀವನದ ಸಾರ್ಥಕತೆ ಮೆರೆದಿದ್ದಾರೆ. ಜಗತ್ತಿನ ಇತಿಹಾಸದಲ್ಲಿಯೂ ಭಗವದ್ಗೀತೆ ಓದಿ ಭಯೋತ್ಪಾದಕರಾದ ಒಬ್ಬ ವ್ಯಕ್ತಿಯ ಉದಾಹರಣೆಯಿಲ್ಲ. ಏಕೆಂದರೆ ಭಗವದ್ಗೀತೆ ಪ್ರೇರಣೆ ಕೊಡುತ್ತದೆಯೇ ಹೊರತು ಪ್ರಚೋದಿಸಲ್ಲ. ಮಹಾತ್ಮ ಗಾಂಧೀಜಿ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೂ ಭಗವದ್ಗೀತೆ ಪ್ರೇರಣೆ ನೀಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಹಿಜಾಬ್ ಬ್ಯಾನ್ ಮಾಡಿ ಎಂದು ಹೇಳಿಲ್ಲ:
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿಜಾಬ್ ಬ್ಯಾನ್ ಮಾಡಿ ಎಂದು ನ್ಯಾಯಾಲಯ ಅಥವಾ ಸರ್ಕಾರ ಎಲ್ಲೂ ಹೇಳಿಲ್ಲ. ಶಾಲೆಯಲ್ಲಿ ಮಾತ್ರ ಧರಿಸಬಾರದು ಎಂದು ಹೇಳಲಾಗಿದೆ. ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡುವುದಕ್ಕೆ ಸಂವಿಧಾನ ಎಲ್ಲರಿಗೂ ಅಧಿಕಾರ ಕೊಟ್ಟಿದೆ. ಆದರೆ ಮತ್ತೆ ಮತ್ತೆ ಆದೇಶ ಉಲ್ಲಂಘಿಸುವುದು ಪ್ರಚೋದನೆ ನೀಡಿದಂತಾಗುತ್ತದೆ. ವಿವಾದವನ್ನು ಜೀವಂತವಾಗಿಡುವ ದುರುದ್ದೇಶವಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ : ಪ್ರತಾಪ್ ಸಿಂಹ
ಬಿಸಿಯೂಟದಲ್ಲಿ ಜಾತಿ ಇದೆಯೇ?
ಮುಗ್ಧ ಮಕ್ಕಳ ಮನಸ್ಸನ್ನು ಒಡೆಯಬಾರದೆಂದು ಶಾಲೆಯಲ್ಲಿ ಸಮವಸ್ತ್ರ ತರಲಾಗಿದೆ. ಒಡೆಯುವ ಕೆಲಸ ಮಾಡಿದವರು ಯಾರು? ಮಕ್ಕಳ ಬಿಸಿಯೂಟದಲ್ಲಿ ಜಾತಿಯಿದೆಯೇ? ಜೀನವಕ್ಕೆ ಪ್ರೇರಣೆ ನೀಡುವ ಅಂತಃಸತ್ವಗಳೇ ಬೇರೆ. ಬಸವಣ್ಣ, ಕಬೀರ, ಕನಕದಾಸರು, ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂರವರ ಬದುಕಿನಿಂದಲೇ ಒಂದು ಪ್ರೇರಣೆ ಸಿಗುತ್ತದೆ. ಇದನ್ನು ಜಾತಿಯಿಂದ ನೋಡಲಾಗುತ್ತದೆಯೇ ಎಂದು ಪ್ರಶ್ನಿಸಿದರು.