ಬೆಂಗಳೂರು: ಹಲವು ಇತಿಮಿತಿಗಳ ನಡುವೆಯೂ ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಪ್ರಪಂಚದ ಬೇರಾವ ದೇಶದಲ್ಲೂ ಆಗಿಲ್ಲ. ಈ ವಿಷಯದಲ್ಲಿ ದೇಶವು ಅಮೆರಿಕದಂತಹ ದೈತ್ಯರಾಷ್ಟ್ರಕ್ಕೂ ಮಾದರಿಯಾಗಿದ್ದು, ಇವತ್ತು ಇಡೀ ವಿಶ್ವವೇ ನಮ್ಮನ್ನು ಅನುಸರಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
Advertisement
ಎಫ್.ಕೆ.ಸಿ.ಸಿ.ಐ ಏರ್ಪಡಿಸಿದ್ದ 14ನೇ ವರ್ಷದ ಮಂಥನ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ದೇಶದಲ್ಲಿ ಅನಕ್ಷರತೆ, ಬಡತನ ಮತ್ತು ಮೂಲಸೌಲಭ್ಯಗಳ ಕೊರತೆ ಇನ್ನೂ ಇದೆ. ಇವೆಲ್ಲವನ್ನೂ ಕಿತ್ತೊಗೆಯಬೇಕೆಂದರೆ ತಂತ್ರಜ್ಞಾನಕ್ಕಿಂತ ಅತ್ಯುತ್ತಮ ಸಾಧನ ಇನ್ನೊಂದಿಲ್ಲ. ಇದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲೀಕರಣದ ಕ್ರಾಂತಿಯನ್ನೇ ಸಾಧಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ
Advertisement
ಇಂದು ಬೆಂಗಳೂರು ಉದ್ಯಮಶೀಲತೆ, ತಂತ್ರಜ್ಞಾನ, ನವೋದ್ಯಮ, ನಾವೀನ್ಯತೆ, ಆವಿಷ್ಕಾರ ರಂಗಗಳಲ್ಲಿ ಜಗತ್ತಿನ ಅಗ್ರಮಾನ್ಯ 30 ನಗರಗಳಲ್ಲಿ ಒಂದಾಗಿದೆ. ದೇಶದಲ್ಲಂತೂ ಬೆಂಗಳೂರನ್ನು ಉಳಿದ ನಗರಗಳು ಅನುಸರಿಸುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ನಾವೀನ್ಯತಾ ಪ್ರಾಧಿಕಾರ ರಚನೆ ಸೇರಿದಂತೆ ಹತ್ತು ಹಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದು, ಉದ್ದಿಮೆಗಳ ಬೆಳವಣಿಗೆಗೆ ನಿರ್ಣಾಯಕ ಸಹಕಾರ ನೀಡುತ್ತಿದೆ ಎಂದರು. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್
Advertisement
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿರುವ (FKCCI) 14ನೇ ಆವೃತ್ತಿಯ ‘ಮಂಥನ್-2022’ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
ಡಿಜಿಟಲ್ ಯುಗದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲು ಗುಣಮಟ್ಟ ಕಾಯ್ದುಕೊಳ್ಳುವುದು ಬಹು ಮುಖ್ಯ. ಈ ದಿಶೆಯಲ್ಲಿ ನವೋದ್ಯಮ ಸಹಿತ ಔದ್ಯಮಿಕ ವಲಯದಲ್ಲಿ ನಮ್ಮ ರಾಜ್ಯ ಇಡೀ ದೇಶಕ್ಕೇ ಮಾದರಿಯಾಗಿದೆ. pic.twitter.com/ol0wNhm3YL
— Dr. Ashwathnarayan C. N. (@drashwathcn) February 18, 2022
Advertisement
ಸಬ್ಸಿಡಿ, ಸಾಲ, ರಿಯಾಯಿತಿ ಮತ್ತು ವಿನಾಯಿತಿಗಳ ಆಧಾರದ ಮೇಲೆ ಉದ್ದಿಮೆಗಳನ್ನು ಬೆಳೆಸಲು ಸಾಧ್ಯವಿಲ್ಲ. ಜಾಗತಿಕ ಸ್ಪರ್ಧೆಯ ಈ ದಿನಮಾನದಲ್ಲಿ ಅತ್ಯುತ್ತಮ ಗುಣಮಟ್ಟವೊಂದೇ ನಮ್ಮ ಅಸ್ತಿತ್ವಕ್ಕೆ ಆಧಾರವಾಗಿದೆ. ಈಗ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ದಾರಿದೀಪವಾಗಿದೆ ಎಂದು ತಿಳಿಸಿದರು.