ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ (C.J.Roy) ಆತ್ಮಹತ್ಯೆ ಪ್ರಕರಣ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 300 ಕೋಟಿಗೆ ರಾಯ್ ಸರಿಯಾದ ದಾಖಲಾತಿಗಳನ್ನು ಹೊಂದಿರಲಿಲ್ಲವಾ? 80 ಕೋಟಿಯಷ್ಟು ತೆರಿಗೆ ವಂಚನೆ ಆಗಿತ್ತಾ ಎಂಬ ಪ್ರಶ್ನೆಗಳು ಮೂಡಿವೆ.
ಹಲವು ಪ್ರಶ್ನೆಗಳನ್ನು ಆಧರಿಸಿ ತಿಂಗಳ ಹಿಂದೆ ಐಟಿ ರೇಡ್ ಮಾಡಿತ್ತು. ದಾಳಿ ನಡೆಸಿದ ಸಂದರ್ಭದಲ್ಲಿ ಸಿಜೆ ರಾಯ್ ದುಬೈನಲ್ಲಿದ್ದರು. ತಾಂತ್ರಿಕವಾಗಿ ಹೇಳಿಕೆ ದಾಖಲು ಮಾಡಲು ಸಾಧ್ಯ ಆಗಿರಲಿಲ್ಲ. ದುಬೈನಿಂದ ವಾಪಸ್ ಬಂದ ಕಾರಣ ಹೇಳಿಕೆ ಪಡೆಯಲು ಐಟಿ ಬಂದಿತ್ತು ಎನ್ನಲಾಗಿದೆ. ಇದನ್ನೂ ಓದಿ: ಉದ್ಯಮಿ ಸಿಜೆ ರಾಯ್ ಮೊಬೈಲ್‌ನಲ್ಲಿದ್ಯಾ ಡೆತ್ ಸೀಕ್ರೆಟ್ – ರಿಕವರಿಗಾಗಿ ಸಿಐಡಿ ಸೈಬರ್ ಸೆಲ್‌ಗೆ ರವಾನೆ
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೆ ಕೇರಳ ಎಲೆಕ್ಷನ್ ಕಂಟಕವಾಗಿರಬಹುದು ಎಂದು ಶಂಕಿಸಲಾಗಿದೆ. ಏಪ್ರಿಲ್‌ನಲ್ಲಿ ಕೇರಳ ಅಸೆಂಬ್ಲಿ ಎಲೆಕ್ಷನ್ ನಡೆಯಲಿದೆ. ಈ ಸಂಬಂಧ ಉದ್ಯಮಿಗಳ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿತ್ತು. ಕಳೆದ ಕೆಲ ಎಲೆಕ್ಷನ್‌ಗಳಿಂದ ಹಲವು ನಾಯಕರಿಗೆ ರಾಯ್ ಫಂಡಿಂಗ್ ಮಾಡಿದ್ದರು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಎಲೆಕ್ಷನ್‌ಗೂ ಕೂಡ ಫಂಡಿಂಗ್ ಮಾಡಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಹೀಗಾಗೀಯೇ ಕಳೆದ ಒಂದು ತಿಂಗಳಿಂದ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು. 2 ದಿನದಿಂದ ಲೆಕ್ಕಪತ್ರಗಳ ವ್ಯತ್ಯಾಸದ ಬಗ್ಗೆ ಮತ್ತೆ ಐಟಿ ತಲಾಶ್ ಶುರು ಮಾಡಿತ್ತು.
ರಾಯ್ ಅವರ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ, ಐಟಿ ಅಧಿಕಾರಿಗಳು ಸಮಜಾಯಿಷಿಗೆ ಇಳಿದಿದ್ದಾರೆ. ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಐಟಿ ಮಾಹಿತಿ ನೀಡಿದೆ. ಐಟಿ ವಂಚನೆ ಮಾಡಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು. 1 ತಿಂಗಳ ಹಿಂದೆ ದಾಳಿ ನಡೆಸಿ ದಾಖಲೆ ವಶಕ್ಕೆ ಪಡೆದಿದೆ. ರಾಯ್ ಆಡಿಟಿಂಗ್ ಅಲ್ಲಿ ವ್ಯತ್ಯಾಸ ಇತ್ತು. ಹೀಗಾಗಿ ಮತ್ತೆ ಪರಿಶೀಲನೆ ನಡೆಸಲಾಗುತ್ತಿತ್ತು. ನಿನ್ನೆ ಹೇಳಿಕೆ ಪಡೆದಿಲ್ಲ, ಒತ್ತಡ ಹೇರಿಲ್ಲ. ರಾಜಕೀಯ ಪ್ರೇರಿತವಾಗಿ ತನಿಖೆ ನಡೆಯಬಹುದು. ತನಿಖೆಯ ಮೇಲೆ ಗಮನ ಇಡಬೇಕಿದೆ ಅಂತ ಗೃಹ ಕಚೇರಿಗೆ ಐಟಿ ಮನವಿ ದೂರು ನೀಡಿದೆ. ಇದನ್ನೂ ಓದಿ: ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ.. ಐಟಿ ಅಧಿಕಾರಿಗಳ ಒತ್ತಡ ಇತ್ತು: ಸಿಜೆ ರಾಯ್ ಬಗ್ಗೆ ಸಹೋದರ ಮಾತು

