ಬೆಂಗಳೂರು: ಉದ್ಯಮಿ ಸಿಜೆ ರಾಯ್ (CJ Roy) ಆನೆಪಾಳ್ಯದಲ್ಲಿರುವ ಕಚೇರಿಯ ಮೊದಲನೇ ಮಹಡಿಯ ರೂಂ ಒಂದರಲ್ಲಿ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ.
ಅಶೋಕ್ ನಗರ ಪೊಲೀಸರು ಸಿ.ಜೆ ರಾಯ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಮಹಜರು ಪ್ರಕ್ರಿಯೆ ಮಾಡುವಾಗ ರಾಯ್ ಶೂಟ್ ಮಾಡಿಕೊಂಡಿದ್ದ ಪಿಸ್ತೂಲ್ ಸೀಜ್ ಮಾಡಿದ್ದರು. ಪೊಲೀಸರು ಪಿಸ್ತೂಲ್ ಬಗ್ಗೆ ಮಾಹಿತಿ ಕೆದಕಿ ನೋಡಿದಾಗ ಮೋಸ್ಟ್ ಡೇಂಜರಸ್ ಪಿಸ್ತೂಲ್ ಅನ್ನೋದು ತಿಳಿದು ಬಂದಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಉದ್ಯಮಿ ಸಿ.ಜೆ ರಾಯ್ – ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಸಂಸ್ಕಾರ
ಉದ್ಯಮಿ ಸಿ.ಜೆ. ರಾಯ್ ಶೂಟೌಟ್ ಮಾಡಿಕೊಂಡ ಪಿಸ್ತೂಲ್ ಬೆಲ್ಜಿಯಮ್ (Belgium) ದೇಶದ ಪಿಸ್ತೂಲ್ (Pistol) ಅನ್ನೋದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬೆಲ್ಜಿಯಮ್ ದೇಶದ ಇಂಪೋರ್ಟೆಡ್ ಮಿನಿಗನ್ ಇದಾಗಿದ್ದು, ಸ್ಮಾರ್ಟ್, ಸೌಂಡ್‌ಲೆಸ್ ಗನ್ ಆಗಿದೆ. ಅತ್ಯಂತ ಅಪಾಯಕಾರಿ ಪಿಸ್ತೂಲ್ ಒಂದರಿಂದ ಶೂಟೌಟ್ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಮೇಲ್ನೋಟಕ್ಕೆ ಅನುಮತಿ ಪಡೆದಿರುವ ಪಿಸ್ತೂಲ್ ಅನ್ನೋದು ಗೊತ್ತಾಗಿದ್ದು, ಪೊಲೀಸರು ಬುಲೆಟ್ ಹಾಗೂ ಪಿಸ್ತೂಲ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರೆಸಲಾಗಿದೆ. ಇದನ್ನೂ ಓದಿ: 400 ಕೋಟಿ ದರೋಡೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ – ಪೊಲೀಸರಿಗೆ ತಾನೇ ಶರಣಾದ ಪ್ರಮುಖ ಆರೋಪಿ

