ಸ್ವಪಕ್ಷಿಯರಿಂದಲೇ ಆಪರೇಶನ್ ಕಮಲಕ್ಕೆ ಬ್ರೇಕ್- ಹೈಕಮಾಂಡ್‍ಗೆ ಬಿಎಸ್‍ವೈ ಟೀಂನಿಂದ ದೂರು?

Public TV
1 Min Read
HDK BJP 1

ಬೆಂಗಳೂರು: ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರಿಗೆ ಆಪರೇಷನ್ ಕಮಲದ ಮಾಹಿತಿಯನ್ನು ತಿಳಿಸಿದ್ದು ಯಾರು ಎನ್ನುವ ಗಂಭೀರ ಚರ್ಚೆ ಈಗ ಯಡಿಯೂರಪ್ಪ ಪಾಳೇಯದಲ್ಲಿ ಆರಂಭವಾಗಿದೆ.

ಹೌದು, ಪಕ್ಷದ ತಂತ್ರಗಾರಿಕೆಯ ಮಾಹಿತಿಯನ್ನು ಎಚ್‍ಡಿಕೆಗೆ ತಿಳಿಸಿದ ಪಕ್ಷದ ನಾಯಕರೊಬ್ಬರ ವಿರುದ್ಧ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲಕ್ಕೆ ಹುಳಿ ಹಿಂಡಿದ ವ್ಯಕ್ತಿ ಯಾರು ಎನ್ನುವುದನ್ನು ಬಿಜೆಪಿ ಮೂಲಗಳು ತಿಳಿಸಿಲ್ಲ. ಇತ್ತ ಸುಳಿವು ಬಿಟ್ಟುಕೊಟ್ಟಿರುವ ಬಿಜೆಪಿ, ಬೆಂಗಳೂರು ನಾಯಕರೊಬ್ಬರೇ ಈ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದು ಅವರ ವಿರುದ್ಧ ಬಿ.ಎಸ್.ಯಡಿಯೂರಪ್ಪ ತಂಡವು ಹೈಕಮಾಂಡ್‍ಗೆ ದೂರು ನೀಡಿದೆ ಎಂದು ತಿಳಿಸಿದೆ.

ಸಿಎಂ ಎಚ್.ಡಿ. ಕುಮಾರಸ್ವಾಮಿ ಮೇಲಿನ ಪ್ರೀತಿಗಾಗಿ ಸ್ವಪಕ್ಷದ ನಾಯಕರು ಮೂರನೇ ವ್ಯಕ್ತಿಯ ಸಹಾಯದಿಂದ ರಹಸ್ಯವನ್ನು ಬಯಲು ಮಾಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article