ಸ್ವಾಮೀಜಿಗೆ ಬೆಳ್ಳಿ ಕಿರೀಟ ಕೊಟ್ಟಿದ್ದೆ ಅವರ‍್ಯಾಕೆ ಹಾಗೆ ಮಾತಾಡಿದ್ರೋ: ಬೈರತಿ ಸುರೇಶ್

Public TV
1 Min Read
BYRATI SURESH react on Chandrashekaranatha Swamiji statement

– ಸಿಎಂ, ಡಿಸಿಎಂ ಮಧ್ಯೆ ಯಾರು ಹುಳಿ ಹಿಂಡ್ಬೇಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಮಧ್ಯೆ ಯಾರು ಹುಳಿ ಹಿಂಡಬಾರದು ಎಂದು ಸಚಿವ ಬೈರತಿ ಸುರೇಶ್ (Byrathi Suresh) ಹೇಳಿದ್ದಾರೆ.

ಚಂದ್ರಶೇಖರನಾಥ ಸ್ವಾಮೀಜಿಯವರ (Chandrashekaranatha Swamiji) ಸಿಎಂ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಹಾಗೂ ಯಾರು ಡಿಸಿಎಂ, ಸಚಿವರು ಆಗಬೇಕು ಎಂದು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕಾಗಿಯೇ ಖರ್ಗೆ, ಸೋನಿಯಾ, ರಾಹುಲ್, ವೇಣುಗೋಪಾಲ್, ಸುರ್ಜೇವಾಲ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಗೆ ಸಿಎಂ ಸ್ಥಾನ ಹೇಳಿಕೆ ಹಿಂದಿದ್ಯಾ ಕುತಂತ್ರ? – ಆಪ್ತರ ಬಳಿ ಸಿಎಂ ತೀವ್ರ ಅಸಮಾಧಾನ

ಸ್ವಾಮೀಜಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮಾತಾಡಿದ ಸ್ವಾಮೀಜಿಯವರನ್ನ ಕಳೆದ ವರ್ಷ ನಮ್ಮ ಕ್ಷೇತ್ರಕ್ಕೆ ಕರೆದು ಬೆಳ್ಳಿ ಕಿರೀಟ ಕೊಟ್ಟಿದ್ದೆ ಅವರು ಯಾಕೆ ಹಾಗೆ ಮಾತಾಡಿದ್ದಾರೋ ಗೊತ್ತಿಲ್ಲ. ನನ್ನ ಪ್ರಕಾರ ಸಿದ್ದರಾಮಯ್ಯನವರು ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ಆತ್ಮೀಯವಾಗಿದ್ದಾರೆ. ಅವರಿಬ್ಬರು ತೀರ್ಮಾನ ಮಾಡ್ತಾರೆ. ಅವರಿಬ್ಬರ ನಡುವೆ ತಂದಿಡುವ ಕೆಲಸ ಯಾರು ಮಾಡಬಾರದು. ಮಾತುಗಳು ಅವರಿಬ್ಬರ ನಡುವೆ ಬೆಸುಗೆ ಹಾಕುವಂತಿರಬೇಕು. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಎರಡು ಭರ್ತಿ ಆಗಿದ್ದು ಖಾಲಿ ಇಲ್ಲ ಎಂದಿದ್ದಾರೆ.

ಆರ್ ಅಶೋಕ್, ಸಿದ್ದರಾಮಯ್ಯ ರಾಜಿನಾಮೆ ಕೇಳಿದ ವಿಚಾರವಾಗಿ, ಅವರು ಯಾರು ಹೇಳೋಕೆ? ಆರ್.ಅಶೋಕ್ ಕೇಳಿ ಸಿಎಂ ಮಾಡಬೇಕಾ? ಅವರಿಗೆ ಯಾವ ನೈತಿಕತೆ ಇಲ್ಲ. ಹುಳಿ ಹಿಂಡೋ ಕೆಲಸ ಮಾಡೋದು ಬೇಡ. ಹಿಂದೆ ಹೈಕಮಾಂಡ್ ಏನು ಹೇಳಿದೆ ಗೊತ್ತಿಲ್ಲ. ನಮ್ಮಲ್ಲಿ ಈ ವಿಚಾರವಾಗಿ ಯಾರು ಗೊಂದಲ ಉಂಟು ಮಾಡಿಲ್ಲ. ಜಾತಿವಾರು ಡಿಸಿಎಂ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎಷ್ಟು ವರ್ಷ ಏನು ಮಾತಾನಾಡಿಕೊಂಡಿದ್ದಾರೆ ಅವರಿಗೆ ಹಾಗೂ ಹೈಕಮಾಂಡ್‍ಗೆ ಗೊತ್ತು ಎಂದಿದ್ದಾರೆ. ಇದನ್ನೂ ಓದಿ: ದೇವೇಗೌಡರಿಗೆ ಅಪಮಾನ ಆಗಿರೋ ಬಗ್ಗೆ ಸ್ವಾಮೀಜಿ ಯಾಕೆ ಮಾತಾಡಲಿಲ್ಲ?: ಹೆಚ್.ಡಿ ರೇವಣ್ಣ

Share This Article