– ಕ್ಷೇತ್ರದ ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ ನೀಡದ ಬಗ್ಗೆ ಶಾಸಕ ಬೇಸರ
ಬೆಂಗಳೂರು: ಮುಂದಿನ ಮಳೆಗಾಲದೊಳಗೆ ಸಮಸ್ಯೆ ಬಗೆಹರಿಯದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಕೆ.ಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್(Byrathi Basavaraj) ಹೇಳಿದರು.
ಸಾಯಿ ಲೇಔಟ್‌ಗೆ(Sai Layout) ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಈ ಸಮಸ್ಯೆ ಇದೆ. ಈ ಕ್ಷೇತ್ರದ ಶಾಸಕನಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮಳೆ ಬಂದ ದಿನವೂ ಬೆಳಗ್ಗೆ 5 ಗಂಟೆಗೆ ಸ್ಥಳಕ್ಕೆ ಬಂದಿದ್ದೇನೆ. ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನ ಒದಗಿಸುತ್ತಿದ್ದೇನೆ. ಸಿಎಂಗೆ ಇಲ್ಲಿರುವ ಸಮಸ್ಯೆ ಬಗ್ಗೆ ವಿವರವಾಗಿ ಹೇಳಿದ್ದೇನೆ. ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಮುಂದಿನ ಮಳೆಗಾಲದೊಳಗೆ ಸಮಸ್ಯೆ ಬಗೆಹರಿಯದಿದ್ರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ದೇಶದಲ್ಲಿ 72,000 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು 2,000 ಕೋಟಿ ವೆಚ್ಚ: ಹೆಚ್‌ಡಿಕೆ
ಕೆಆರ್ ಪುರಂ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ(Siddaramaiah) ಭೇಟಿ ನೀಡದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಮಳೆ ಹಾನಿಯಾಗಿರೋ ಜಾಗಕ್ಕೆ ಬರಲಿಲ್ಲ ಅಂದ್ರೆ ನಾನೇನು ಮಾಡೋಕೆ ಆಗುತ್ತದೆ. ಹಿಂದಿನ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಮಳೆ ನೀರು ತಡೆಯಲು ಕಾಮಗಾರಿ ಆರಂಭ ಆಗಿತ್ತು. ಇದಕ್ಕೆ ಈಗ ಹಣ ಪಾವತಿ ಮಾಡಿಲ್ಲ. ಅನುದಾನ ಕೊಟ್ರೆ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಅದು ದಾನಧರ್ಮವಲ್ಲದೆ ಬೇರೇನೂ ಅಲ್ಲ – ಸುಪ್ರೀಂ ಮುಂದೆ ಕೇಂದ್ರದ ವಾದ
ಅವ್ರು ಬರಲಿಲ್ಲ ಅಂದ್ರೆ ಕೈ ಹಿಡ್ಕೊಂಡು ಎಳ್ಕೊಂಡು ಹೋಗೋಕೆ ಆಗುತ್ತಾ? ಕೈ ಹಿಡ್ಕೊಂಡು ಕರ್ಕೊಂಡು ಹೋಗೋದಲ್ಲ. ನನ್ನದೇ ತತ್ವ ಸಿದ್ಧಾಂತಗಳನ್ನ ಇಟ್ಟುಕೊಂಡಿದ್ದೇನೆ. ಹಾಗಾಗಿ ಅವರು ಎಲ್ಲಿ ತನಕ ಬರ್ತಾರೆ. ಅಲ್ಲಿ ತನಕ ಜೊತೆಗೆ ಹೋಗಿದ್ದೇನೆ. ಅವರು ಬಂದಿಲ್ಲ ಅಂದ್ರೆ ನಾನೇನು ಮಾಡೋಕೆ ಆಗುತ್ತದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ
ಈ ವೇಳೆ ಕಾರ್ಯಕರ್ತರು, ಕ್ಷೇತ್ರದ ಶಾಸಕರ ಮುಂದೆ ಸಮಸ್ಯೆ ಹೇಳಿಕೊಳ್ಳಲು ಮುಂದಾದ ಜನರಿಗೆ ಅವಕಾಶ ನೀಡದೇ ತಡೆದರು. ಸ್ಥಳೀಯರು ಪ್ರಶ್ನೆ ಮಾಡ್ತಿದ್ದಂತೆ ಶಾಸಕ ಬೈರತಿ ಬಸವರಾಜ್ ಅಲ್ಲಿಂದ ಹೊರಟಿದ್ದಾರೆ. ಸಮಸ್ಯೆಗಳನ್ನು ಆಲಿಸದ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದರು.