– ವಿಶ್ವನಾಥ್ ರೋಲ್‌ಕಾಲ್ ಗಿರಾಕಿ – ಏಕವಚನದಲ್ಲೇ ಸಚಿವ ವಾಗ್ದಾಳಿ
ಚಾಮರಾಜನಗರ: ಯಾರ್ರಿ ಅವನು ವಿಶ್ವನಾಥ್ (H Vishwanath), ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವಾ? ಅವ್ನು, ಅವನ ಮಗ ನನ್ನ ಮನೆಗೆ ಸೈಟು ಕೇಳಿಕೊಂಡು ಬಂದಿದ್ದ ಫೋಟೋ ಇದೆ. ಅವನು ಏಕವಚನ ಬಳಸಿದ್ರೆ, ನನಗೂ ಅದರಪ್ಪನಂಗೆ ಮಾತಾಡೋಕೆ ಬರುತ್ತೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh), ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: MUDA Scam| ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಬರೀ ಬೊಗಳೆ ಬಿಡ್ತಾನೆ: ಹೆಚ್‌ವಿಶ್ವನಾಥ್
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ (Real Estate Agent) ಎಂಬ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಯಾರ್ರಿ ಅವನು ವಿಶ್ವನಾಥ್, ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವಾ? ಅವನು ಮತ್ತು ಅವನ ಮಗ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದ ಫೋಟೊ ಇದೆ. ಅವನು ಏಕವಚನ ಬಳಸಿದ್ರೆ ನಾನೂ ಅದಕ್ಕಿಂತ ಹೆಚ್ಚಿಗೆ ಮಾತನಾಡೋಕೆ ಬರುತ್ತೆ. ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದಿರೋದು, ಅದರಪ್ಪನಂಗೆ ಮಾತಾಡ್ತಾನಿ. ಮೊದಲು ಮರ್ಯಾದೆ ಕೊಟ್ಟು, ಮರ್ಯಾದೆ ತೆಗೆದುಕೊಳ್ಳಲಿ. ವಿಶ್ವನಾಥ್ ತರ ನಾನು ರೋಲ್ ಕಾಲ್ ಗಿರಾಕಿ ಅಲ್ಲ. ವಯಸ್ಸಾಗಿದೆ ಅಂತ ಅಷ್ಟೇ ಬೆಲೆ ಕೊಡ್ತೀವಿ ಅದನ್ನ ಉಳಿಸಿ ಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಮುಡಾ ಹಗರಣ (MUDA Site Allotment Scam) ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಗರಣ ಇದ್ದರೆ ತಾನೇ ಆಚೆಗೆ ಬರೋದು. ಯಾವ ಹಗರಣವೂ ನಡೆದಿಲ್ಲ. ಇನ್ನೂ ಹಗರಣ ಅಂತ ಸಾಬೀತಾಗಿಲ್ಲ. ಸೈಟ್‌ಗಳನ್ನು ಏಜೆಂಟ್, ರೈತರು, ಮಧ್ಯವರ್ತಿಗಳಿಗೆ ಕೊಟ್ಟಿದ್ದಾರಾ ಅಂತ ಗೊತ್ತಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಸರ್ಕಾರಕ್ಕೆ ಸೈಟ್ ವಾಪಸ್ ಕೊಡದಿದ್ದರೆ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ: ಹೆಚ್. ವಿಶ್ವನಾಥ್
ಇನ್ನೂ ಮುಡಾ ಹಗರಣ ಸಿಬಿಐ ತನಿಖೆಗೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಲ್ಲಿ ಪೊಲೀಸ್ ಇಲ್ವಾ? ನಮ್ಮಲ್ಲಿ ಅಧಿಕಾರಿಗಳಿಲ್ವಾ? ಹಗರಣ ನಡೆದಿದ್ರೆ ತಾನೇ ಸಿಬಿಐಗೆ ಕೊಡೋದು. ಬಿಜೆಪಿಯವರು ಏನ್ ಮಹಾ, ಎಷ್ಟು ತನಿಖೆಯನ್ನ ಸಿಬಿಐಗೆ ಕೊಟ್ಟಿದ್ದಾರೆ? ನಮ್ಮಲ್ಲೇ ಅಧಿಕಾರಿಗಳಿಲ್ವಾ? ಇಬ್ಬರು ಐಎಎಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಬಿಜೆಪಿ, ಜೆಡಿಎಸ್ ನವರು ಹೇಳ್ತಾರೆ ಅಂತ ಎಲ್ಲವನ್ನೂ ಸಿಬಿಐ ತನಿಖೆಗೆ ಕೊಡೋಕಾಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಯ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ – ತಯಾರಿ ಆರಂಭಿಸಿದ ಬಿಜೆಪಿ