ಕೋಲಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರೊಬ್ಬರೇ ದೇವತಾ ಮನುಷ್ಯ ಇನ್ನೆಲ್ಲರೂ ಪಾಪಿಗಳು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ (Byrathi Suresh) ವ್ಯಂಗ್ಯವಾಡಿದ್ದಾರೆ.
ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಮನೆಗೂ ಮದ್ಯಭಾಗ್ಯ ಕೊಟ್ಟು ಸರ್ಕಾರ ದುಡ್ಡು ಮಾಡಲು ಮುಂದಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್: ಬಿಎಂಟಿಸಿ ಸಂಚಾರ ಇರುತ್ತಾ? ಇಲ್ವೋ? – ಗೊಂದಲದಲ್ಲಿ ಚಾಲಕರು
Advertisement
Advertisement
ಅಲ್ಲದೇ ಕಾವೇರಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ ನೀರು ಬಿಡುವುದನ್ನ ನಿಲ್ಲಿಸಬಹುದು ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂವಿಧಾನ ಬರೆದಿರುವುದು ಅಂಬೇಡ್ಕರ್ ಅವರೇ ಹೊರತು ಕುಮಾರಸ್ವಾಮಿ ಅಲ್ಲ. ಸಂವಿಧಾನದ ನಿಯಮಗಳು ಏನು ಹೇಳುತ್ತವೆಯೋ ಅದನ್ನೇ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ತಮಿಳುನಾಡು ಸರ್ಕಾರದಿಂದ ನಮಗೇನೂ ಆಗಬೇಕಿಲ್ಲ. ಯಾರನ್ನೂ ಓಲೈಕೆ ಮಾಡುವ ಪ್ರಶ್ನೆಯೇ ಇಲ್ಲ. ಸಂವಿಧಾನದ ನಿಯಮಗಳು ಏನು ಹೇಳುತ್ತವೆಯೋ ಅದನ್ನೇ ಮಾಡುತ್ತೇವೆ. ರಾಜ್ಯದ ಜನತೆಗೆ ಅನ್ಯಾಯ ಮಾಡಿ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಟಿ ಕಾರುಣ್ಯ ಆಲೋಚನೆ: ಅಂಗಾಂಗ ದಾನ ಶಿಬಿರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್
Advertisement
ಬೆಂಗಳೂರು ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬರ ಇದೆ, ನಮಗೇ ನೀರಿಗೆ ತತ್ವಾರ ಶುರುವಾಗಿದೆ. ಪ್ರಾಧಿಕಾರ ಆದೇಶ ಮಾಡಿದ ಮೇಲೆ ಹಳ್ಳ ಕೊಳ್ಳದಲ್ಲಿನ ನೀರು ಬಿಟ್ಟಿದ್ದೇವೆ. ಆದರೆ ಡ್ಯಾಂನಿಂದ ನೀರು ಬಿಡುವಂತಹದ್ದು ಆಗುವುದಿಲ್ಲ. ಅಲ್ಲದೆ ತಮಿಳುನಾಡು ಸರ್ಕಾರದಿಂದ ನಮಗೇನು ಆಗಬೇಕಿಲ್ಲ, ಯಾರನ್ನೂ ಓಲೈಸುವ ಪ್ರಶ್ನೆ ಇಲ್ಲ ಎಂದಿದ್ದಾರೆ.
Web Stories