ಮೈಸೂರು: ಭೈರತಿ ಸುರೇಶ್ (Byrathi Suresh) ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ (Real Estate Agent) ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (MLC H Vishwanth) ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಗರಣಕ್ಕೆ (MUDA Site Allotment Scam) ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಲಿಕಾಪ್ಟರ್‌ನಲ್ಲಿ ಬಂದು ಪೊಲೀಸ್ ಭದ್ರತೆಯಲ್ಲಿ ಸಭೆ ಮಾಡಿ ಹೋಗ್ತಾನೆ. ಸಭೆಯ ಬಳಿಕ ಅದು ಕ್ಯಾನ್ಸಲ್ ಮಾಡಿದ್ದೀನಿ. ಅದು ಮಾಡಿದ್ದೀನಿ, ಇದು ಮಾಡಿದ್ದೀನಿ ಎಂದು ಹೇಳ್ತಾನೆ. ಒಂದಕ್ಕಾದ್ರೂ ಆದೇಶ ಬಂದಿದ್ಯಾ? ಬರಿ ಬೊಗಳೆ ಬಿಡ್ತಾನೆ ಎಂದು ಏಕವಚನದಲ್ಲೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಸರ್ಕಾರಕ್ಕೆ ಸೈಟ್ ವಾಪಸ್ ಕೊಡದಿದ್ದರೆ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ: ಹೆಚ್. ವಿಶ್ವನಾಥ್
Advertisement
Advertisement
ಹೇ ನೀನು ಯಾವನಲೇ? ನೀನು ದಡ್ಡನೋ ಬುದ್ದಿವಂತನಾ? ನಾನು ಏಳು ಸೈಟ್ ಕೇಳಿದ್ದೇನೆ ಅಂತೀಯಲ್ಲ. ಇವ್ನುಯಾವನ್ರೀ ಭೈರತಿ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಹೆಚ್‌ಡಿಕೆ
Advertisement
ನಾನು ಪ್ರಾಮಾಣಿಕ ಅಂತಾ ವಿಧಾನಸೌಧದ ಒಳಗೆ ಹೇಳಿದ್ದಿನಿ. ಚೇಂಜ್ ಆಫ್ ಲ್ಯಾಂಡ್‌ಗೆ ಐದು ಲಕ್ಷ ಫಿಕ್ಸ್ ಮಾಡಿದ್ದಾನೆ ಈ ಭೈರತಿ ಸುರೇಶ್ ಎಂದು ಕಿಡಿಕಾರಿದರು.
Advertisement
ಹೆಚ್ ವಿಶ್ವನಾಥ್ ಮೈಸೂರಿನ ಪ್ರಜೆಯಾಗಿದ್ದಾರೆ ಜೊತೆ ಪರಿಷತ್ ಸದಸ್ಯರೂ ಆಗಿದ್ದಾರೆ. ಹೀಗಾಗಿ ಅವರು ಮುಡಾದಲ್ಲಿ ಸದಸ್ಯರಾಗಿದ್ದಾರೆ. ಈ ಮುಡಾದ ಸದಸ್ಯರೇ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಸಚಿವ ಭೈರತಿ ವಿರುದ್ಧ ಆರೋಪ ಮಾಡಿರುವುದು ಸಂಚಲನ ಮೂಡಿಸಿದೆ.