ಮಂಡ್ಯ: ಮಾಸ್ಕ್, ಹೆಲ್ಮೆಟ್ ತಪಾಸಣೆ ಮಾಡುವ ಪೊಲೀಸರ ಮೇಲೆ ಪುಂಡರೊಬ್ಬ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.
ಎಸ್‍ಎಐ ಮಹೇಶ್ ಪ್ರಭು ಹಲ್ಲೆಗೊಳಗಾದ ಪೊಲೀಸ್ ಹಾಗು ನಾಗೇಶ್ ಹಲ್ಲೆ ಮಾಡಿದ ಆರೋಪಿ. ಶನಿವಾರ ಸಂಜೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಎಸ್‍ಎಐ ಮಹೇಶ್ ಪ್ರಭು ಎಂಬವರ ಮೇಲೆ ಶಾಂತಿನಗರದ ನಿವಾಸಿ ನಾಗೇಶ್ ಎಂಬಾತ ಹಲ್ಲೆ ಮಾಡಿದ್ದಾನೆ.
ಎಸ್‍ಐ ಮಹೇಶ್ ಪ್ರಭು ತಮ್ಮ ಸಿಬ್ಬಂದಿಯೊಂದಿಗೆ ಪಾಂಡವಪುರ ಪಟ್ಟಣದಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದರು. ಈ ವೇಳೆ ನಾಗೇಶ್ ಹೆಲ್ಮೆಟ್, ಮಾಸ್ಕ್ ಎರಡನ್ನು ಹಾಕದೇ ಸ್ಥಳಕ್ಕೆ ಬಂದಿದ್ದಾರೆ.
ಇದಕ್ಕೆ ಪ್ರಶ್ನಿಸಿದ ಮಹೇಶ್ ಪ್ರಭುಗೆ ನಾಗೇಶ್ ಏರು ಧ್ವನಿಯಲ್ಲಿ ಜೋರಾಗಿ ಮಾತನಾಡುತ್ತಾನೆ. ಆದರೂ ಪೊಲೀಸರು ಇದನ್ನು ಪ್ರಶ್ನೆ ಮಾಡಿ ದಂಡ ಕಟ್ಟುವಂತೆ ನಾಗೇಶ್‍ಗೆ ಹೇಳುತ್ತಾರೆ. ನಂತರ ನಾಗೇಶ್ ಕೊಪದಿಂದ ಪೊಲೀಸರಿಗೆ ಬೈಯ್ಯುವ ಕೆಲಸಕ್ಕೆ ಮುಂದಾಗುತ್ತಾರೆ. ಹೀಗಾಗಿ ಪೊಲೀಸರು ಪೊಲೀಸ್ ಠಾಣೆಗೆ ಅವರನ್ನು ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ನಾಗೇಶ್ ಎಸ್‍ಎಸ್‍ಐ ಮಹೇಶ್ ಪ್ರಭು ಮೇಲೆ ಹಲ್ಲೆಗೆ ಮುಂದಾದರು. ಇದನ್ನೂ ಓದಿ: ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ
ಅಲ್ಲೇ ಇದ್ದ ಸ್ಥಳೀಯರು ಪೊಲೀಸರು ಬಿಡಿಸಲು ಪ್ರಯತ್ನಿಸಿದರೂ, ಮಹೇಶ್ ಪ್ರಭು ಅವರ ಕಾಲರ್ ಹಿಡಿದು ನಾಗೇಶ್ ಹಲ್ಲೆಗೆ ಮುಂದಾಗುತ್ತಾನೆ. ಇದಾದ ಬಳಿಕ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ನಾಗೇಶ್‍ನನ್ನು ಬಂಧಿಸಿ ಈತನ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ