ಬೆಂಗಳೂರು: ಸಿಎಂ ಬೊಮ್ಮಾಯಿ ತವರು ಜಿಲ್ಲೆಯಾದ ಹಾವೇರಿಯ ಹಾನಗಲ್‌ನಲ್ಲಿ ಆರಂಭಿಕ ಮತ ಎಣಿಕೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು ಕಾಂಗ್ರೆಸ್‌ಗೆ 182 ಮತಗಳ ಮುನ್ನಡೆ ಸಿಕ್ಕಿದೆ.
ಮೊದಲ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು ಬಿಜೆಪಿಯ ಶಿವರಾಜ್ ಸಜ್ಜನರ 4,296, ಕಾಂಗ್ರೆಸ್ಸಿನ ಶ್ರೀನಿವಾಸ ಮಾನೆ 4,296 ಜೆಡಿಎಸ್‌ನ ನಿಯಾಜ್ ಶೇಖ್. 25 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಅಶ್ಲೀಲ ಸಿನಿಮಾಗಳ ವಿವಾದದ ಬಳಿಕ ಟ್ವಿಟ್ಟರ್, ಇನ್‍ಸ್ಟಾ ಡಿಲೀಟ್ ಮಾಡಿದ ರಾಜ್ ಕುಂದ್ರಾ
ಒಟ್ಟು 1,71,264 ಮಂದಿ ಮತದಾನ ಮಾಡಿದ್ದು 16 ಟೇಬಲ್ ನಲ್ಲಿ 22 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿಯ ಶಾಸಕ ಸಿಎಂ ಉದಾಸಿ ಅವರ ಅಕಾಲಿಕ ನಿಧನದಿಂಧ ತೆರವಾದ ಕ್ಷೇತ್ರಕ್ಕೆ ಕಳೆದ ಶನಿವಾರ ಮತದಾನ ನಡೆದಿತ್ತು. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅರೆಸ್ಟ್