ಚಾಮರಾಜನಗರ: ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವೆಂದೇ ಪರಿಗಣಿಸಲಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್‍ಪ್ರಸಾದ್ ಗೆಲುವಿನ ನಗೆ ಬೀರಿದ್ದಾರೆ. ಬಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಅವರಿಗೆ 75610 ಮತಗಳು ಸಿಕ್ಕಿದ್ದರೆ ಗೀತಾ ಮಹದೇವ್ ಪ್ರಸಾದ್ ಅವರಿಗೆ 87,687 ಮತಗಳು ಲಭಿಸಿವೆ. ಒಟ್ಟು 12,077 ಮತಗಳ ಅಂತರದಿಂದ ಗೀತಾ ಮಹದೇವ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ.
Advertisement
ಗುಂಡ್ಲುಪೇಟೆ ಉಪಚುನಾವಣೆಯ ಅಂತಿಮ ಕಣದಲ್ಲಿದ್ದ ಅಭ್ಯರ್ಥಿಗಳು: ಸಿಎಸ್ ನಿರಂಜನ್ ಕುಮಾರ್ (ಬಿಜೆಪಿ), ಗೀತಾ ಮಹದೇವಪ್ರಸಾದ್ (ಕಾಂಗ್ರೆಸ್), ಶಿವರಾಂ (ಪಕ್ಷೇತರ), ಎಂ.ಹೊನ್ನೂರಯ್ಯ (ಭಾರತೀಯ ಡಾ. ಬಿಆರ್ ಅಂಬೇಡ್ಕರ್ ಜನತಾಪಾರ್ಟಿ), ಕೆ.ಸೋಮಶೇಖರ್ (ಪಕ್ಷೇತರ), ಶಿವರಾಜು (ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ), ಮಹದೇವಪ್ರಸಾದ್ ಬಿ (ಪಕ್ಷೇತರ)
Advertisement
ಗುಂಡ್ಲುಪೇಟೆ ಸೆಂಟ್ ಜಾನ್ಸ್ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ನಾಲ್ಕು ಕೊಠಡಿಗಳಲ್ಲಿ ತಲಾ ನಾಲ್ಕು ಟೇಬಲ್ ಗಳಲ್ಲಿ ಮತ ಎಣಿಕೆ ಮಾಡಲಾಯಿತು. ಪ್ರತಿ ಟೇಬಲ್ ಗೆ ಓರ್ವ ಮತ ಎಣಿಕೆ ಅಧಿಕಾರಿ, ಓರ್ವ ಎಣಿಕೆ ಮೇಲ್ವಿಚಾರಕ, ಓರ್ವ ಮೈಕ್ರೋ ಅಬ್ಸರ್ವರ್, ಓರ್ವ ವೀಡಿಯೋಗ್ರಾಫರ್, ಓರ್ವ ಸಹಾಯಕನನ್ನು ನೇಮಕ ಮಾಡಲಾಗಿತ್ತು. ಸಂಪೂರ್ಣ ಮತ ಎಣಿಕೆ ಕಾರ್ಯ ವೀಡಿಯೋ ಚಿತ್ರೀಕರಣ ಮಾಡಲಾಯಿತು. ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆಯಿತ್ತು. ಮತ ಎಣಿಕೆ ಹಾಲ್ ಒಳಗೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶ ಇರಲಿಲ್ಲ.
Advertisement
2013 ರ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಫಲಿತಾಂಶ ಹೀಗಿತ್ತು: