ನವದೆಹಲಿ: ಚೀನಾ ಮೂಲದ ಬಿವೈಡಿ (BYD) ಕಂಪನಿಯು ಇಂದು ಬಹುನಿರೀಕ್ಷಿತ ಸೀಲ್ (Seal) ಸೆಡಾನ್ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ 41 ಲಕ್ಷ ರೂ. ದಿಂದ 53 ಲಕ್ಷ ರೂ.ವರೆಗೆ ಇದೆ .
Advertisement
ಬಿವೈಡಿ ಸೀಲ್ ಕಾರನ್ನು ಗ್ರಾಹಕರು 1.25 ಲಕ್ಷ ರೂಪಾಯಿಗಳನ್ನು ನೀಡಿ ಬುಕ್ ಮಾಡಬಹುದು. ಮಾರ್ಚ್ 31, 2024 ಕ್ಕಿಂತ ಮೊದಲು ಬುಕ್ ಮಾಡುವವರಿಗೆ ಉಚಿತ ಹೋಮ್ ಚಾರ್ಜರ್ ಸ್ಥಾಪನೆ (Free Home Charger Installation), 3kW ಪೋರ್ಟಬಲ್ ಚಾರ್ಜಿಂಗ್ ಬಾಕ್ಸ್ (Portable Charging Box) ಮತ್ತು 6 ವರ್ಷಗಳ ರಸ್ತೆಬದಿ ನೆರವು (Roadside Assistance) ಮತ್ತು ಇನ್ನಿತರ ಹೆಚ್ಚುವರಿ ಸೇವೆಗಳನ್ನು ಕಂಪನಿ ನೀಡಲಿದೆ.
Advertisement
ಸೀಲ್ ಕಾರು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ – 61.44kWh ಮತ್ತು 82.56kWh. ಎರಡೂ ಬ್ಯಾಟರಿಗಳು BYD ಬ್ಲೇಡ್ ತಂತ್ರಜ್ಞಾನವನ್ನು (BYD Blade Technology) ಹೊಂದಿವೆ. ಚಿಕ್ಕ ಬ್ಯಾಟರಿಯನ್ನು ಹಿಂಭಾಗದ ಆಕ್ಸಲ್ ಮೇಲೆ ಒಂದೇ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಅದು 204hp ಮತ್ತು 310Nm ಟಾರ್ಕ್ ಉತ್ಪಾದಿಸುತ್ತದೆ ಮತ್ತು 510km (NEDC Cycle) ರೇಂಜ್ ನೀಡುತ್ತದೆ.
Advertisement
Advertisement
82.5kWh ಬ್ಯಾಟರಿ ಹೊಂದಿರುವ ಸೀಲ್ RWD ಮತ್ತು AWD ಮಾದರಿಯಲ್ಲಿ ಲಭ್ಯವಿದೆ. ಒಂದೇ ಮೋಟಾರ್ ಹೊಂದಿರುವ RWD ಅವತರಣಿಕೆಯು 312hp ಪವರ್ ಮತ್ತು 360Nm ಟಾರ್ಕ್ ಉತ್ಪಾದಿಸುತ್ತದೆ. ಇದು 650 ಕಿಮೀ ರೇಂಜ್ ನೀಡುತ್ತದೆ. ಎರಡು ಮೋಟಾರ್ ಹೊಂದಿರುವ AWD ಅವತರಣಿಕೆಯು 530hp ಪವರ್ ಮತ್ತು 670Nm ಟಾರ್ಕ್ ಉತ್ಪಾದಿಸುತ್ತದೆ ಹಾಗು 580 ಕಿಮೀ. ರೇಂಜ್ ನೀಡುತ್ತದೆ. ಟಾಪ್ ವೇರಿಯಂಟ್ ಕಾರು 0-100 ಕಿಮೀ. ಸ್ಪೀಡ್ ತಲುಪಲು ಕೇವಲ 3.8 ಸೆಕೆಂಡ್ಸ್ ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸೀಲ್ ಕಾರನ್ನು ಚಾರ್ಜ್ ಮಾಡಲು 150kW ಚಾರ್ಜರ್ ಬಳಕೆ ಮಾಡಿದರೆ ಕೇವಲ 37 ನಿಮಿಷಗಳಲ್ಲಿ 10-80% ಚಾರ್ಜ್ ಮಾಡಬಹುದು. ಸಾಮಾನ್ಯ 11kW AC ಚಾರ್ಜರ್ ನ ಮೂಲಕ ಚಾರ್ಜ್ ಮಾಡಿದರೆ 0-100% ಚಾರ್ಜ್ ಮಾಡಲು 8.6 ಗಂಟೆಗಳು ಬೇಕಾಗುತ್ತದೆ. ಬಿವೈಡಿ ಕಂಪನಿಯು ಬ್ಯಾಟರಿಯ ಮೇಲೆ 8 ವರ್ಷ/1,60,000 ಕಿಮೀ ವಾರಂಟಿ ಮತ್ತು ಮೋಟಾರ್ ಮತ್ತು ಮೋಟಾರ್ ನಿಯಂತ್ರಕ ಘಟಕದ ಮೇಲೆ 8 ವರ್ಷ/1,50,000 ಕಿಮೀ ವಾರಂಟಿಯನ್ನು ನೀಡುತ್ತಿದೆ.
ಓಷನ್ ಎಕ್ಸ್ (Ocean X) ಕಾನ್ಸೆಪ್ಟ್ ಮಾದರಿಯಿಂದ ಸ್ಫೂರ್ತಿ ಪಡೆಡಿರುವ ಸೀಲ್ ಕಾರು ಕೂಪ್ ಮಾದರಿಯ ಸಂಪೂರ್ಣ ಗ್ಲಾಸ್ ರೂಫ್, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ನಾಲ್ಕು ಬೂಮರಾಂಗ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಹಿಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್ ಒಳಗೊಂಡಿದೆ.
15.6-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೆಡ್ಸ್-ಅಪ್ ಡಿಸ್ಪ್ಲೇಯನ್ನು ಸೀಲ್ ಕಾರು ಹೊಂದಿದೆ. 60:40 ಸ್ಪ್ಲಿಟ್-ಫೋಲ್ಡಿಂಗ್ ಹಿಂಬದಿ ಸೀಟುಗಳು, ಪವರ್ಡ್ ಟೈಲ್‌ಗೇಟ್ ಮತ್ತು ಹೆಚ್ಚುವರಿ ಸಂಗ್ರಹಣೆಗಾಗಿ 50-ಲೀಟರ್ ಫ್ರಂಕ್ ಇದೆ. ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟುಗಳು, ಲೆಥೆರೆಟ್ ಸೀಟ್ ಕವರ್, ಡ್ಯುಯಲ್-ಜೋನ್ ಎಸಿ, 10 ಏರ್‌ಬ್ಯಾಗ್‌ಗಳು, ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಎಬಿಎಸ್, ಹಿಲ್ ಹೋಲ್ಡ್, ಸ್ವಯಂಚಾಲಿತ ವೈಪರ್‌ಗಳು, 360-ಡಿಗ್ರಿ ಕ್ಯಾಮೆರಾ ಹಾಗೂ ADAS ತಂತ್ರಜ್ಞಾನವನ್ನು ಸೀಲ್ ಕಾರ್ ಹೊಂದಿದೆ. ಸೀಲ್ ಯುರೋ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಪಡೆದಿದೆ.