ಬೆಂಗಳೂರು: ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಹೆಣ್ಣು ಮಕ್ಕಳ ನೆರವಿಗೆ ಟ್ರಾಫಿಕ್ ಡಿಸಿಪಿ ಹಾಗೂ ಇನ್ಸ್ ಪೆಕ್ಟರ್ ನಿಲ್ಲುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Advertisement
ನಾಗರಬಾವಿ ಸರ್ಕಲ್ ಬಳಿ ಜು 9 ರಂದು ಬೈಕ್‍ನಲ್ಲಿ ಚಲಿಸುತ್ತಿದ್ದಾಗ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ವಿಜಯ ಕಲಾ ಮೃತಪಟ್ಟಿದ್ರು. ನಿನ್ನೆ ಅವರ ಪತಿ ಕೂಡ ಸಾವನ್ನಪ್ಪಿದ್ದಾರೆ. ಅಪ್ಪ-ಅಮ್ಮನನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳಿಗೆ ಬ್ಯಾಟರಾಯನಪುರ ಮಹಿಳಾ ಇನ್ಸ್ ಪೆಕ್ಟರ್ ರೂಪಾ ಹಡಗಲಿ ಬೆನ್ನೆಲುಬಾಗಿದ್ದಾರೆ.
Advertisement
Advertisement
ತಂದೆ ಯೋಗೇಂದ್ರರನ್ನು ಅಪಘಾತದಂದು ನಾಗರಬಾವಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ 5 ಲಕ್ಷ 72 ಸಾವಿರ ಬಿಲ್ ಆಗಿತ್ತು. ಆದರೆ ಪೊಷಕರನ್ನ ಕಳೆದುಕೊಂಡು ಅನಾಥವಾಗಿದ್ದ ಹೆಣ್ಣು ಮಕ್ಕಳಿಬ್ಬರು ಹಣ ಕಟ್ಟಲು ಇಲ್ಲದೆ ಸಂಬಂಧಿಕರ ಬಳಿಯೂ ಹಣವಿಲ್ಲದೆ ಪರದಾಡುತ್ತಿದ್ದರು. ಇದನ್ನೂ ಓದಿ: ಸಂಸತ್ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ
Advertisement
ಈ ವೇಳೆ ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಕುಲ್ ದೀಪ್ ಜೈನ್ ಅವರು ಬ್ಯಾಟಯಪುರ ಸಂಚಾರ ಇನ್ಸ್ ಪೆಕ್ಟರ್ ರೂಪ ಹಡಗಲಿಗೆ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ರೂಪ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲದೆ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತನಾಡಿ ಬಿಲ್ ಮೊತ್ತ ಮನ್ನಾ ಮಾಡಿಸಿದ್ದಾರೆ. ಅದ್ಯ ರೂಪ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.