ಶೂ ಧರಿಸಿದ್ದರಿಂದ 11 ಸೆಕೆಂಡಿನಲ್ಲಿ 100 ಮೀ. ಓಡಲು ಸಾಧ್ಯವಾಗಿಲ್ಲ – ರಾಮೇಶ್ವರ್ ಗುರ್ಜಾರ್

Public TV
2 Min Read
sprinter collage

ಭೋಪಾಲ್: ಶೂ ಧರಿಸಿದ್ದರಿಂದ 11 ಸೆಕೆಂಡಿನಲ್ಲಿ 100 ಮೀಟರ್ ಓಡಲು ಸಾಧ್ಯವಾಗಲಿಲ್ಲ ಎಂದು ಮಧ್ಯಪ್ರದೇಶದ ಯುವಕ ರಾಮೇಶ್ವರ್ ಗುರ್ಜಾರ್ ತಿಳಿಸಿದ್ದಾರೆ.

ಇತ್ತೀಚೆಗೆ ರಾಮೇಶ್ವರ್ ಗುರ್ಜಾರ್ ಬರಿಗಾಲಿನಲ್ಲಿ 100 ಮೀಟರ್ ಅಂತರವನ್ನು ಕೇವಲ 11 ಸೆಕೆಂಡ್‍ನಲ್ಲಿ ಪೂರ್ಣಗೊಳಿಸಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಇದೀಗ ರಾಮೇಶ್ವರ್ ಅರ್ಹತಾ ಓಟದಲ್ಲಿ 100 ಮೀ. ಅಂತರವನ್ನು 13 ಸೆಕೆಂಡಿನಲ್ಲಿ ಪೂರ್ಣಗೊಳಿಸಿದ್ದಾರೆ.

sprinter

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಮೇಶ್ವರ್, “ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಅಲ್ಲದೆ ಶೂ ಧರಿಸಿದ್ದಕ್ಕೆ ನನಗೆ ಉತ್ತಮವಾಗಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾನು ಒಂದು ತಿಂಗಳು ಇಲ್ಲಿಯೇ ಇದ್ದು ಮತ್ತೊಮ್ಮೆ ಟ್ರಯಲ್ ನೀಡುತ್ತೇನೆ. ಮುಂದಿನ ಬಾರಿ ಓಡುವಾಗ ನಾನು ಶೂ ಧರಿಸದೇ ಹಾಗೆಯೇ ಓಡುತ್ತೇನೆ. ನನಗೆ ಬರಿಗಾಲಿನಲ್ಲಿ ಓಡಲು ಇಷ್ಟವಾಗುತ್ತದೆ” ಎಂದು ತಿಳಿಸಿದ್ದಾರೆ.

Run

ನಾನು ಮಾಧ್ಯಮಗಳ ಮೂಲಕ ರಾಮೇಶ್ವರ್ ಬಗ್ಗೆ ತಿಳಿದುಕೊಂಡೆ. ರಾಮೇಶ್ವರ್ ಗೆ ಟ್ರಯಲ್ ಓಟದಲ್ಲಿ 11 ಸೆಕೆಂಡಿನಲ್ಲಿ 100 ಮೀ. ಓಡಲು ಆಗಲಿಲ್ಲ. ಸದ್ಯ ಈಗ ಅವನು ಒಂದು ತಿಂಗಳು ಅಭ್ಯಾಸ ನಡೆಸಿ ಮತ್ತೊಮ್ಮೆ ಟ್ರಯಲ್ ರನ್ ನೀಡುತ್ತಾನೆ. ಅಲ್ಲದೆ ಮಸ್ಸಲ್ ತೂಕ ಹೆಚ್ಚಿಸಲು ಆತನಿಗೆ ಒಳ್ಳೆಯ ಪೌಷ್ಠಿಕಾಂಶ ಇರುವ ಆಹಾರ ಬೇಕು. ಇಂದು ಕೇವಲ ಟ್ರಯಲ್ ಇತ್ತು. ನಾವು ಆತನಿಗೆ ಉತ್ತಮ ತರಬೇತಿ ನೀಡುತ್ತೇವೆ ಎಂದು ಮಧ್ಯಪ್ರದೇಶದ ಕ್ರೀಡಾ ಸಚಿವ ಜಿತು ಪಟ್ವಾರಿ ತಿಳಿಸಿದ್ದಾರೆ.

ರಾಮೇಶ್ವರ್ ಅವರು ತಮ್ಮ ಮೇಲೆ ವಿಶ್ವಾಸ ಇಡಬೇಕು. ಅವರು ಉತ್ತಮ ಡಯಟ್ ಅನ್ನು ಅನುಸರಿಸಬೇಕು. ಸದ್ಯ ಈಗ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅವರು ಮೊದಲು ಬರಿಗಾಲಿನಲ್ಲಿ ಓಡುತ್ತಿದ್ದರು. ಈಗ ಶೂ ಧರಿಸಿ ಟ್ರಯಲ್‍ನಲ್ಲಿ ಓಡಿದ್ದಕ್ಕಾಗಿ ಅವರು ವಿಫಲರಾಗಿದ್ದಾರೆ. ಇಂದು ಅವರು 100 ಮೀ. ಅಂತರವನ್ನು 13 ಸೆಕೆಂಡಿನಲ್ಲಿ ಪೂರ್ಣಗೊಳಿಸಿದ್ದರು ಎಂದು ರಾಮೇಶ್ವರ್ ಅವರ ಕೋಚ್ ಶಿಪ್ರಾ ಹೇಳಿದ್ದಾರೆ.

ನಾನು ಕಳೆದ ನಾಲ್ಕೈದು ವರ್ಷದಿಂದ ತಯಾರಿ ನಡೆಸುತ್ತಿದ್ದೇನೆ. ಸರ್ಕಾರ ಕೂಡ ನನಗೆ ಒಳ್ಳೆಯ ತರಬೇತಿ ಸೌಲಭ್ಯಗಳನ್ನು ನೀಡಿದೆ. ನನ್ನ ಕೋಚ್ ನನಗೆ ಯಾವಾಗಲೂ ಬೆಂಬಲ ನೀಡುತ್ತಾರೆ ಹಾಗೂ ಅವರು ನನಗೆ ಓಡಲು ಸ್ಫೂರ್ತಿ ನೀಡುತ್ತಾರೆ. ನಾನು ದೇಶಕ್ಕಾಗಿ ಓಡಿ ಪದಕ ಗೆಲ್ಲಲು ಇಷ್ಟಪಡುತ್ತೇನೆ. ನನಗೆ ಸರ್ಕಾರದಿಂದ ಉತ್ತಮ ಬೆಂಬಲ ದೊರೆತರೆ, ನಾನು ಉಸೇನ್ ಬೋಲ್ಟ್ ದಾಖಲೆಯನ್ನು ಮುರಿಯಬಹುದು ಎಂದು ರಾಮೇಶ್ವರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *