ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರು ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಇಡೀ ವಿಶ್ವದ ಧರ್ಮಾತೀತ ಆಸ್ತಿಕರನ್ನು ಸೂಜಿಗಲ್ಲಿನಂತೆ ಬರಸೆಳೆದು ಜಾಗತಿಕ ಇತಿಹಾಸ ಬರೆಯುತ್ತಿರುವ 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್ ರಾಜ್ ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದದ್ದು ಪುನೀತ ಭಾವ ಮೂಡಿಸಿತು. ಜಾಗತಿಕ ಶಾಂತಿಗಾಗಿ, ದೇಶದ ಕಲ್ಯಾಣಕ್ಕಾಗಿ ಕರುನಾಡ ಜನರ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಪ್ರಯಾಗ್ ರಾಜ್ ನಲ್ಲಿ… pic.twitter.com/0FGlCp0bu5
— Vijayendra Yediyurappa (@BYVijayendra) February 13, 2025
Advertisement
ಪುಣ್ಯಸ್ನಾನದ ಬಳಿಕ ಮಾತನಾಡಿ, ಈ ಮಹಾಕುಂಭಮೇಳ ಇಡೀ ವಿಶ್ವದ ಧರ್ಮಾತೀತ ಆಸ್ತಿಕರನ್ನು ಸೂಜಿಗಲ್ಲಿನಂತೆ ಬರಸೆಳೆದು ಜಾಗತಿಕ ಇತಿಹಾಸ ಬರೆಯುತ್ತಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಾಡಿದ ಪುಣ್ಯಸ್ನಾನ ಪುನೀತ ಭಾವ ಮೂಡಿಸಿದೆ ಎಂದು ತಿಳಿಸಿದರು.ಇದನ್ನೂ ಓದಿ: ಫೆ.28 ರಿಂದ ಮಾ.2 ವರೆಗೆ ಹಂಪಿ ಉತ್ಸವ
Advertisement
Advertisement
Advertisement
ಜಾಗತಿಕ ಶಾಂತಿಗಾಗಿ, ದೇಶದ ಕಲ್ಯಾಣಕ್ಕಾಗಿ, ಕರುನಾಡ ಜನರ ಒಳಿತಿಗಾಗಿ ಪ್ರಾರ್ಥಿಸಿದೆ. ಈ ಕುಂಭಮೇಳದ ಕೊನೆಯ ದಿನದವರೆಗೂ ಅಂದರೆ ಫೆಬ್ರವರಿ 28ರಂದು ಹರಿದು ಬರುವ ಭಕ್ತ ಸಾಗರಕ್ಕೆ ಪುಣ್ಯ ಲಭಿಸಲಿ, ಯಾವುದೇ ಅವಘಡಗಳು ಸಂಭವಿಸದಿರಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಹಾಗೂ ಪರಮಪೂಜ್ಯ ಋಷಿ ಮುನಿಗಳ ಆಶೀರ್ವಾದ ನವಚೈತನ್ಯ ಮೂಡಿಸಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
“ಸನಾತನ ಹಿಂದೂ ಸಂಸ್ಕೃತಿ ಭೂ ಮಂಡಲದ ಶ್ರೇಷ್ಠ ಪರಂಪರೆ “
144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್ ರಾಜ್ ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತ ಭಾವ ಮೂಡಿಸಿದ ಕ್ಷಣ.#MahaKumbh2025 pic.twitter.com/8H4UbmPend
— Office of BY Vijayendra (@OfficeofBYV) February 13, 2025
ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿದ್ದ ವಿಜಯೇಂದ್ರ ಗುರುವಾರ ಬೆಳಿಗ್ಗೆ ನೇರವಾಗಿ ಪ್ರಯಾಗ್‌ರಾಜ್‌ಗೆ ತೆರಳಿ ಪುಣ್ಯ ಸ್ನಾನದಲ್ಲಿ ಭಾಗವಹಿಸಿದರು.ಇದನ್ನೂ ಓದಿ: RCB ಫ್ಯಾನ್ಸ್ ನೂತನ ಕ್ಯಾಪ್ಟನ್‌ಗೆ ಬೆಂಬಲ ನೀಡಬೇಕು – ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಮನವಿ