ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ (Karnataka BJP) ಅಸಮಾಧಾನ, ಕಾಂಗ್ರೆಸ್ ಟೀಕೆಗಳ ನಡುವೆ ಬಿಜೆಪಿಯ ನೂತನ ಅಧ್ಯಕ್ಷ ವಿಜಯೇಂದ್ರ (BY Vijayendra) ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 15ರ ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP President) ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಮೊದಲ ಹೆಜ್ಜೆ ಬೂತಿನೆಡೆಗೆ
ಗುರಿಯು ಒಂದೇ ಗೆಲುವಿನೆಡೆಗೆ
ಕಾರ್ಯಕರ್ತ ನಮ್ಮ ಶಕ್ತಿ
ಮತದಾರ ನಮ್ಮ ಬಂಧು
“ಮತ್ತೆ ಬಿಜೆಪಿ -ಮತ್ತೊಮ್ಮೆಮೋದಿ
ಬೂತ್ ಗೆಲ್ಲಿಸಿ -ದೇಶ ಗೆಲ್ಲಿಸಿ
ಸಂಕಲ್ಪ ನಮ್ಮದು -ಆಶೀರ್ವಾದ ನಿಮ್ಮದು????”.
ಸಂಘಟನೆಗೆ ನವ ಚೈತನ್ಯ ತುಂಬುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ, ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್… pic.twitter.com/oeg04oRUj3
— Vijayendra Yediyurappa (@BYVijayendra) November 11, 2023
ಬುಧವಾರ ಮಧ್ಯಾಹ್ನ 1 ಗಂಟೆಗೆ ಅರಮನೆ ಮೈದಾನದಲ್ಲಿ (Palace Ground) ಪದಗ್ರಹಣ ಸಮಾವೇಶ ನಡೆಯಲಿದೆ. ಇದಾದ ಮರುದಿನವೇ ನವೆಂಬರ್ 16ರಂದು ವಿಜಯೇಂದ್ರ ಪಕ್ಷದ ಶಾಸಕಾಂಗ ಸಭೆ ನಡೆಸಲು ಚಿಂತನೆ ನಡೆಸಿದ್ದಾರೆ. ಈ ವಿಚಾರವನ್ನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (JP Nadda) ಜೊತೆ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ. ಇದನ್ನೂ ಓದಿ: ಶ್ರೀರಾಮ ಜನ್ಮಭೂಮಿಯಲ್ಲಿ ದೀಪೋತ್ಸವ – ಅಯೋಧ್ಯೆ ಬೆಳಗಿದ 24 ಲಕ್ಷ ಹಣತೆಗಳು
- Advertisement
ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷನಾಗಿ ನಿಯುಕ್ತಿಗೊಂಡ ಹಿನ್ನೆಲೆಯಲ್ಲಿ ಪೂಜ್ಯ ತಂದೆಯವರಾದ ಶ್ರೀ @BSYBJP ಅವರ ಆಶೀರ್ವಾದ ಪಡೆಯಲಾಯಿತು. pic.twitter.com/cNnTv1CheM
— Vijayendra Yediyurappa (@BYVijayendra) November 10, 2023
- Advertisement
ವಿಜಯೇಂದ್ರ ಮೊದಲ ದಿನವೇ ಪಕ್ಷ ಸಂಘಟನೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಬೂತ್ ಅಧ್ಯಕ್ಷನ ಮನೆಗೆ ವಿಜಯೇಂದ್ರ ಮೊದಲ ಭೇಟಿ ನೀಡಿದರು. ಈ ಮೂಲಕ ಪಕ್ಷದ ಸಂಘಟನೆಯೇ ತಮ್ಮ ಮೊದಲ ಆದ್ಯತೆ. ಲೋಕಸಭೆ ಚುನಾವಣೆ ಗೆಲ್ಲುವುದೇ ನಮ್ಮ ಮುಂದಿರುವ ಸವಾಲು ಎಂಬ ಸಂದೇಶ ರವಾನಿಸಿದರು. ಚಾಮರಾಜನಗರ, ಮಂಡ್ಯ, ದಾವಣಗೆರೆ ಸೇರಿ ಹಲವೆಡೆ ಬಿಜೆಪಿ ಸಂಭ್ರಮಾಚರಣೆಗಳು ನಡೆದಿವೆ. ಇದನ್ನೂ ಓದಿ: ಐಸಿಸ್ ಪರ ಕೆಲಸ – ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳು ಅರೆಸ್ಟ್
ಈ ಮಧ್ಯೆ, ವಿಪಕ್ಷ ನಾಯಕನ ಜವಾಬ್ದಾರಿ ನೀಡಿದಲ್ಲಿ ಸಮರ್ಥವಾಗಿ ನಿರ್ವಹಿಸಲು ಸಿದ್ದ ಎಂದು ಅಶ್ವಥ್‌ನಾರಾಯಣ್ ಘೋಷಿಸಿದ್ದಾರೆ. ಜೊತೆಗೆ ಜೆಡಿಎಸ್‌ಗೆ ವಿಪಕ್ಷ ನಾಯಕನ ಸ್ಥಾನ ನೀಡುವುದನ್ನು ವಿರೋಧಿಸಿದ್ದಾರೆ.