ಸೋಲಿನ ಹತಾಶೆಯಿಂದ ಪಿತೂರಿ, ನಾಜಿ, ಪಾಕಿಸ್ತಾನ ಮಾತು: ವಿಜಯೇಂದ್ರ ತಿರುಗೇಟು

Public TV
1 Min Read
HDK BY Vijayendra

ಬೆಂಗಳೂರು: ಕುಮಾರಸ್ವಾಮಿಯವರು ಹತಾಶೆಯಿಂದ ವರ್ತಿಸುತ್ತಿದ್ದರೆ. ಇತ್ತೀಚಿನ ಚುನಾವಣೆಗಳಲ್ಲಿ ಅವರ ಪಕ್ಷಕ್ಕೆ ಆದ ಹೀನಾಯ ಸೋಲುಗಳು ಅವರಿಗೆ ಈ ರೀತಿ ಮಾತಾಡುವಂತೆ ಮಾಡಿಸುತ್ತಿವೆ. ಮಾಜಿ ಸಿಎಂ ಆಗಿರುವ ಅವರಿಗೆ ಇಂತಹ ಹೇಳಿಕೆ ಶೋಭೆ ತರುವಂಥದಲ್ಲ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿ ಸಿಎಎ ಪರ ಮನೆ ಮನೆ ಸಂಪರ್ಕಿಸಿ ಜನಜಾಗೃತಿ ಕಾರ್ಯಕ್ರಮದಲ್ಲಿ ನನ್ನನ್ನು ಕೊಲ್ಲಿಸುವ ಪಿತೂರಿ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು.

ಒಕ್ಕಲಿಗ ಸಮುದಾಯಕ್ಕೆ ಸೀಮಿತವಾಗಿ ಕುಮಾರಸ್ವಾಮಿ ಮಾತನಾಡಿರುವುದು ಸರಿಯಲ್ಲ. ಒಕ್ಕಲಿಗ ಸಮಾಜಕ್ಕೆ ಏನೋ ತೊಂದರೆಯಾಗುತ್ತದೆ ಎನ್ನುವ ಧಾಟಿಯಲ್ಲಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಯಾರೇ ಆದರೂ ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದರು.

ಸತತ ಸೋಲಿಂದಾಗಿ ಜೆಡಿಎಸ್ ಭವಿಷ್ಯದ ಬಗ್ಗೆ ಅವರಿಗೆ ಚಿಂತೆ ಇದೆ. ಅದಕ್ಕಾಗಿಯೇ ಅವರು ಪಾಕಿಸ್ತಾನ, ನಾಜಿ ಅಂತೆಲ್ಲ ಮಾತಾನಡುತ್ತಿದ್ದಾರೆ. ಜೆಡಿಎಸ್ ಮೇಲೆ ರಾಜ್ಯದ ಜನರಿಗೆ ವಿಶ್ವಾಸ ಹೋಗಿದೆ. ಅವರು ಏನೇ ಮಾತನಾಡಿದರೂ ಜನರ ವಿಶ್ವಾಸ ಸಿಗುವುದಿಲ್ಲ. ಬಿಜೆಪಿ ವಿರುದ್ಧ ಇಂತಹ ಹೇಳಿಕೆಗಳನ್ನು ಈಗಲಾದರೂ ನಿಲ್ಲಿಸಲಿ ಎಂದು ಹೇಳಿದರು.

ಯಡಿಯೂರಪ್ಪ ಸಂಬಂಧ ಹೈಕಮಾಂಡ್ ನಿಲುವು ಮತ್ತು ಸರಕಾರದ ಆರ್ಥಿಕ ಸ್ಥಿತಿ ಕುರಿತು ಟ್ವೀಟ್ ಮೂಲಕ ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಬಿ ವೈ ವಿಜಯೇಂದ್ರ ಹರಿಹಾಯ್ದರು. ಯಡಿಯೂರಪ್ಪ ನಾಲ್ಕು ಸಲ ಸಿಎಂ ಆಗಿದ್ದಾರೆ. ಕೇಂದ್ರದ ನಾಯಕರು ಯಡಿಯೂರಪ್ಪರ ನಾಯಕತ್ವ ಒಪ್ಪಿದ್ದಾರೆ. ಹಿಂದೆಯೂ ಯಡಿಯೂರಪ್ಪರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಅಂತ ಸಿದ್ದರಾಮಯ್ಯ ಏನೇನೋ ಆರೋಪ ಮಾಡುವುದು ಸರಿಯಲ್ಲ. ವಿರೋಧ ಪಕ್ಷಗಳಿಗೆ ಈಗ ಏನೂ ಹೇಳಲು ಉಳಿದಿಲ್ಲ. ಹಾಗಾಗಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಗೊಂದಲ ಸೃಷ್ಟಿಸುವ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *