Connect with us

Latest

ಡಿಸಿಎಂ, ಮುಖ್ಯ ಕಾರ್ಯದರ್ಶಿ ಭಾಗವಹಿಸಿದ್ದ ಸಭೆಯಲ್ಲಿ ವಿಜಯೇಂದ್ರ ಭಾಗಿ

Published

on

ಬೆಂಗಳೂರು: ಉಪಮುಖ್ಯಮಂತ್ರಿ ಅಶ್ವಥ್‍ನಾರಾಯಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎನ್ ವಿಜಯ್ ಭಾಸ್ಕರ್ ಭಾಗವಹಿಸಿದ್ದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಭಾಗವಹಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಯಲ್ಲಿ ಜನಪ್ರತಿನಿಧಿ ಅಲ್ಲದೇ ಇದ್ದರೂ ವಿಜಯೇಂದ್ರ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ವಿಜಯೇಂದ್ರ ಭಾಗವಹಿಸಿದ ಹಿನ್ನೆಲೆಯಲ್ಲಿ ಸಭೆಗೆ ಸಿಎಂ ಪುತ್ರನಿಗೆ ಆಹ್ವಾನ ಕೊಟ್ಟಿದ್ದು ಯಾಕೆ? ಸಿಎಂ ಪುತ್ರ ಯಾವುದರಲ್ಲಿ ಪರಿಣಿತಿ ಹೊಂದಿದ್ದಾರೆ? ಸಭೆಗೂ ಸಿಎಂ ಪುತ್ರನಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಮನೆಗೆ ಹೆಚ್ಚು ಬರಬೇಡ: ಪುತ್ರ ವಿಜಯೇಂದ್ರನಿಗೆ ಬಿಎಸ್‍ವೈ ಸೂಚನೆ

ಸಭೆಯಲ್ಲಿ ತಾನು ಭಾಗವಹಿಸಿದ್ದ ವಿಚಾರದ ಬಗ್ಗೆ ಚರ್ಚೆ ಜೋರಾಗುತ್ತಿದ್ದಂತೆ ಟ್ವಿಟ್ಟರಿನಲ್ಲಿ ಸ್ಪಷ್ಟನೆ ನೀಡಿದ ವಿಜಯೇಂದ್ರ, ಲಂಡನ್ ನಿಂದ ಆಗಮಿಸಿದ್ದ ಸಂಚಾರ ತಜ್ಞರೊಂದಿಗೆ, ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ(ಬಿಪ್ಯಾಕ್) ಆಯೋಜಿಸಿದ್ದ ಚರ್ಚೆ ಕಾರ್ಯಕ್ರಮದಲ್ಲಿ, ಮಿತ್ರರಾದ ಆರ್.ಕೆ.ಮಿಶ್ರಾ, ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್ ಮೊದಲಾದವರೊಂದಿಗೆ ನಗರದ ಒಬ್ಬ ಸಾಮಾನ್ಯ ನಾಗರಿಕನಾಗಿ ಭಾಗವಹಿಸಿದ್ದೆ. ಡಿಸಿಎಂ ಅಶ್ವಥ್‍ನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು, ಪರಿಣತರು, ತಜ್ಞರು, ಸಕ್ರಿಯ ನಾಗರಿಕರು ಪಾಲ್ಗೊಂಡಿದ್ದರು. ಬೆಂಗಳೂರು ನಗರದ ವಾಹನದಟ್ಟಣೆ ಸಮಸ್ಯೆ ಎದುರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು ಎಂದು ಟ್ವೀಟ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *