ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿಯಿಂದ ವಿಜಯೇಂದ್ರ (BY Vijayendra) ಸ್ಪರ್ಧೆ ಮಾಡಬೇಕು ಎಂಬುದು ಕ್ಷೇತ್ರದ ಕಾರ್ಯಕರ್ತರ ಅಪೇಕ್ಷೆ ಆಗಿದೆ. ಇದನ್ನು ಪಕ್ಷಕ್ಕೂ ವಿನಂತಿ ಮಾಡಿದ್ದೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ (BY Raghavendra) ತಿಳಿಸಿದರು.
ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, 24 ಗಂಟೆಯೊಳಗೆ ಬಿಜೆಪಿ (BJP) ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಈ ಬಾರಿ ಶಿಕಾರಿಪುರಕ್ಕೆ (Shikaripura) ಆಶೀರ್ವಾದ ಮಾಡುತ್ತದೆ ಎಂಬ ವಿಶ್ವಾಸ ಇದೆ ಎಂದರು.
Advertisement
Advertisement
ಬಿಜೆಪಿ ಯಾವಾಗಲೂ ಸಂಘಟನೆಯಲ್ಲಿ ತೊಡಗಿರುತ್ತದೆ. ಹೀಗಾಗಿಯೇ ಯುದ್ಧ ಬಂದಾಗ ಶಸ್ತ್ರಭ್ಯಾಸ ಮಾಡದೇ, ನಮ್ಮ ಪಕ್ಷದ ಕಾರ್ಯಕರ್ತರ ಪರಿಶ್ರಮ, 5 ವರ್ಷದ ತಪ್ಪಸ್ಸು, ಅದರ ಪ್ರತಿಫಲ ಚುನಾವಣಾ ಸಂದರ್ಭದಲ್ಲಿ ಭಕ್ಷ್ಯ ಮಾಡುವ ಸಂದರ್ಭ ಬಂದಿದೆ. ಹೀಗಾಗಿಯೇ ಶಿವಮೊಗ್ಗ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಕಾಂಗ್ರೆಸ್ (Congress) ಸ್ನೇಹಿತರಿಗೆ, ವಿರೋಧ ಪಕ್ಷಗಳಿಗೆ ಪ್ರಚಾರ ಮಾಡಲು ವಿಷಯವಿಲ್ಲ. ಅಪಪ್ರಚಾರ ಮಾಡುವುದೇ ಅವರ ವಿಚಾರಗಳು ಆಗಿದೆ. ಎಲ್ಲದಕ್ಕೂ ಇಟಲಿ ದೇಶದ ಗ್ಲಾಸ್ ಹಾಕಿಕೊಂಡು ನೋಡುವ ಪ್ರವೃತ್ತಿ ಇದೆ. ಹೀಗಾಗಿಯೇ ಎಲ್ಲದಕ್ಕೂ ಆ ರೀತಿ ಕಾಣುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಚಿವೆ ಶಶಿಕಲಾ ಜೊಲ್ಲೆಗೆ ಗ್ರಾಮಸ್ಥರಿಂದ ಕ್ಲಾಸ್
ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಪ್ರಪಂಚದಲ್ಲಿಯೇ ಭಾರತ ತಲೆ ಎತ್ತಿ ನಿಲ್ಲುವಂತಹ ಅವಕಾಶ ಸಿಕ್ಕಿದೆ. ಕಾಂಗ್ರೆಸ್‌ನವರು ಹಾಳು ಮಾಡಿದ ಈ ವ್ಯವಸ್ಥೆಯನ್ನು, ಸರಿ ಮಾಡುವ ದಿಕ್ಕಿನಲ್ಲಿ ಪ್ರಧಾನಿ ಮೋದಿ ಮುಂದುವರಿಯುತ್ತಿದ್ದಾರೆ. ಇದನ್ನು ಅವರು ತಡೆಯಲು ಆಗುತ್ತಿಲ್ಲ. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಒಳ್ಳೆಯ ಕೆಲಸವನ್ನು ಮಾಡಿದವರನ್ನ ಟೀಕೆ ಮಾಡುವುದನ್ನಾದರೂ ಬಿಟ್ಟರೆ ವಿಪಕ್ಷ ಸ್ಥಾನವಾದರೂ ಉಳಿಯಲಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: 100 ವರ್ಷದ ಹಳೆಯ ಮರ ಶೆಡ್ ಮೇಲೆ ಬಿದ್ದು 7 ಮಂದಿ ದಾರುಣ ಸಾವು