– ಕುಖ್ಯಾತ ಮನೆಗಳ್ಳ ಬಂಧನ
ಬೆಂಗಳೂರು: ದೇಶದ್ಯಾಂತ ಐಷಾರಾಮಿ ಮನೆಗಳನ್ನು ಟಾರ್ಗೆಟ್ ಮಾಡಿ, ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬೆಂಗಳೂರಿನ ಮಡಿವಾಳ ಪೊಲೀಸರು (Madiwala Police) ಬಂಧಿಸಿದ್ದಾರೆ.
Advertisement
ಬಂಧಿತ ಆರೋಪಿಯನ್ನು ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಎಂದು ಗುರುತಿಸಲಾಗಿದೆ.ಇದನ್ನು ಓದಿ: 300 ರೂ. ಟಿ ಶರ್ಟ್‌ಗಾಗಿ ವ್ಯಕ್ತಿಯ ಹತ್ಯೆ – ಸಹೋದರರು ಅರೆಸ್ಟ್!
Advertisement
Advertisement
ಪೊಲೀಸರ ವಿಚಾರಣೆ ವೇಳೆ, ಮನೆಗಳ್ಳತನದಿಂದ ಕೋಲ್ಕತ್ತಾದಲ್ಲಿ ಪ್ರೇಯಸಿಗೆ 3 ಕೋಟಿ ರೂ. ಬೆಲೆಬಾಳುವ ಮನೆ ಖರೀದಿಸಿ ಕೊಟ್ಟಿದ್ದ. ಅಷ್ಟೇ ಅಲ್ಲದೇ ಬಾಲಿವುಡ್ ಸೇರಿದಂತೆ ಪ್ರಖ್ಯಾತ ಸಿನಿಮಾ ನಟಿಯರ ಬಗ್ಗೆ ಮೋಹ ಬೆಳೆಸಿಕೊಂಡಿದ್ದ. ಅವರಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ.
Advertisement
ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕಳೆದ ತಿಂಗಳ 9 ರಂದು ಬೆಂಗಳೂರಿನ ಮಡಿವಾಳದಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನು ಓದಿ: ಮೈಕ್ರೋ ಫೈನಾನ್ಸ್| ಶಿಕ್ಷೆಯ ಪ್ರಮಾಣ 3 ಅಲ್ಲ, 10 ವರ್ಷಕ್ಕೆ ಹೆಚ್ಚಿಸಿದ್ದೇವೆ: ಪರಮೇಶ್ವರ್