ಬೆಂಗಳೂರು: ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ ಮಾಡಿದ್ದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ ಘಟನೆ ನಗರದ ಊರ್ವಶಿ ಚಿತ್ರಮಂದಿರದಲ್ಲಿ ನಡೆದಿದೆ.
ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಥಿಯೇಟರ್ ನಲ್ಲಿ ಕಾಲ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿ, ಜ್ಯುರಾಸಿಕ್ ವರ್ಲ್ಡ್ ಸಿನಿಮಾವನ್ನು ಹಾಕಲಾಗಿತ್ತು. ಅಲ್ಲದೆ ಸಿನಿಮಾದ ಪೋಸ್ಟರ್ ಗಳನ್ನು ಥಿಯೇಟರ್ ನ ತುಂಬಾ ಹಾಕಲಾಗಿತ್ತು.
ಇಂದು ಚಿತ್ರ ವೀಕ್ಷಿಸಲು ಬಂದ ಜನರಿಗೆ ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ವಿತರಣೆ ಮಾಡಿತ್ತು. ಇನ್ನೆನೂ ಚಿತ್ರ ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲಿ ತಮಿಳಿನ ಕಾಲಾ ಚಿತ್ರ ಪ್ರದರ್ಶನವಾಗಿದೆ. ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲಾ ಚಿತ್ರವನ್ನು ಪ್ರದರ್ಶನ ಮಾಡಿದ್ದಕ್ಕೆ ಪೇಕ್ಷಕರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದಾರೆ.
ಊರ್ವಶಿ ಚಿತ್ರಮಂದಿರ ಬುಕ್‍ಮೈ ಶೋನಲ್ಲಿಯೂ ಕೂಡ ಜ್ಯುರಾಸಿಕ್ ವರ್ಲ್ಡ್ ಪ್ರಕಟಿಸಿತ್ತು.