ಮಂಡ್ಯ: ಕರ್ನಾಟಕ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ಜಿಲ್ಲೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವನ್ನು ಸಾಧಿಸಿದೆ.
ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಎಲ್.ಆರ್ ಶಿವರಾಮೇಗೌಡರು ಸ್ಪಧಿಸಿದ್ದರು. ಇನ್ನೂ ಬಿಜೆಪಿಯಿಂದ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಸ್ಪರ್ಧಿಸಿದ್ದು, ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಎಲ್. ಆರ್.ಶಿವರಾಮೇಗೌಡ 3,24,925 ಮತಗಳ ಅಂತರದಲ್ಲಿ ದಾಖಲೆಯ ಗೆಲವುವನ್ನು ಸಾಧಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ
Advertisement
Advertisement
ಜೆಡಿಎಸ್ ಅಭ್ಯರ್ಥಿ ಎಲ್.ಆರ್ ಶಿವರಾಮೇಗೌಡ 5,69,302 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ 2,44,377 ಮತಗಳನ್ನು ಗಳಿಸಿದ್ದಾರೆ. ಇವರಿಬ್ಬರ ಮಧ್ಯೆ 3,24,925 ಮತಗಳ ಅಂತರವಿದ್ದು ಈ ಮೂಲಕ ಮಾಜಿ ಸಂಸದ ಅಂಬರೀಶ್ ಅವರ ಗೆಲುವಿನ ದಾಖಲೆಯನ್ನು ಶಿವರಾಮೇಗೌಡ ಮುರಿದಿದ್ದಾರೆ.
Advertisement
Advertisement
ಪಕ್ಷೇತರ ಅಭ್ಯರ್ಥಿಗಳು ಪಡೆದ ಮತ ವಿವರ:
ಎಂ.ಹೊನ್ನೇಗೌಡ 17,842, ಜಿ.ಬಿ.ನವೀನ್ ಕುಮಾರ್ 15,305, ಕೌಡ್ಲೆ ಚನ್ನಪ್ಪ 9,094, ಕೆ.ಎಸ್.ರಾಜಣ್ಣ 7,421, ಶಂಭೂಲಿಂಗೇಗೌಡ 5,483, ಬಿ.ಎಸ್.ಗೌಡ 4,086 ಮತ್ತು ನಂದೀಶ್ 4,064 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ 15,478 ಮತಗಳು ನೋಟಾ ಚಲಾವಣೆಯಾಗಿದೆ. ಈ ಬಾರಿ ಮಂಡ್ಯದ ಉಪಚುನಾವಣೆಯಲ್ಲಿ ಒಟ್ಟು 8,92,452 ಮಂದಿ ಮತದಾನ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv