– ಬರೋಬ್ಬರಿ 283 ಕೋಟಿ ದಂಡ ವಿಧಿಸಿ ನೋಟಿಸ್ ಜಾರಿ
ಬೆಂಗಳೂರು: ಇಲ್ಲಿನ ಅಪಾರ್ಟ್ಮೆಂಟ್, ಮನೆಗಳಿಗೆ ಜಲಮಂಡಳಿ ಬಿಗ್ ಶಾಕ್ ಕೊಟ್ಟಿದೆ. ಬೆಂಗಳೂರಿನ (Bengaluru) 383 ಅಪಾರ್ಟ್ಮೆಂಟ್, 43 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ಜಲಮಂಡಳಿ ನೋಟಿಸ್ ಜಾರಿ ಮಾಡಿದೆ.
ಕಾವೇರಿ ನೀರಿನ ಸಂಪರ್ಕ ಪಡೆಯದೇ ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರುವ ಬಗ್ಗೆ ಜಲಮಂಡಳಿ (Bangalore Water Supply and Sewerage Board) ತನಿಖೆ ಮಾಡುತ್ತಿತ್ತು. ಜಲಮಂಡಳಿ ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲಾಗಿದೆ. ದೊಡ್ಡ ದೊಡ್ಡ ಅಪಾರ್ಟ್ಮೆಂಟ್‌ಗಳು ಜಲಮಂಡಳಿಗೆ ವಂಚಿಸಿರೋದು ಬಯಲಾಗಿದೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಮರ ಕಡಿದ್ರೂ ಗೊತ್ತಾಗುತ್ತೆ – ನಿಸಾರ್ ಉಡಾವಣೆ ಯಶಸ್ವಿ
ನೀರಿನ ಸಂಪರ್ಕ ಪಡೆಯದೇ ಅಕ್ರಮವಾಗಿ ನೀರಿನ ಸಂಪರ್ಕ ಪಡೆದು 383 ಅಪಾರ್ಟ್ಮೆಂಟ್ ಗಳು 43 ಸಾವಿರ ಮನೆಗಳು ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರೋದು ಜಲಮಂಡಳಿ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪವರ್ ತೋರಿಸಲು ಡಿಕೆಶಿಯನ್ನು ಸಭೆಗೆ ಆಹ್ವಾನಿಸಿಲ್ಲ: ಆರ್.ಅಶೋಕ್
ಇನ್ನೂ 383 ಅಪಾರ್ಟ್ಮೆಂಟ್ ಮತ್ತು 43 ಸಾವಿರ ಮನೆಗಳಿಗೆ ಜಲಮಂಡಳಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಜಾರಿ ಮಾಡಿ ಬರೋಬ್ಬರಿ 200 ಕೋಟಿ ರೂ. ದಂಡ ವಿಧಿಸಿದೆ. ಹಲವು ವರ್ಷಗಳಿಂದ ನೀರನ್ನ ಕದಿಯುತ್ತಾ ಇರೋದು ಬಯಲಾಗಿದೆ. ಹೀಗಾಗಿ ದಂಡ ವಿಧಿಸಿ ಕ್ರಮವಹಿಸುತ್ತಾ ಇದೆ. ಅಕ್ರಮ ಕನೆಕ್ಷನ್‌ಗಳಿಗೆ ನೋಟಿಸ್ ಕೊಟ್ಟಿದ್ದು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಕೇಂದ್ರದಿಂದ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ: ಚಲುವರಾಯಸ್ವಾಮಿ
ಒಟ್ಟಾರೆ ಬೆಂಗಳೂರಿನಲ್ಲಿ ಕಾವೇರಿ ನೀರಿನ ಸಂಪರ್ಕವನ್ನ ಅಕ್ರಮವಾಗಿ ಪಡೆಯುತ್ತಿರುವ ಮನೆಗಳಿಗೆ ಅಪಾರ್ಟ್ಮೆಂಟ್‌ಗಳಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಅಧಿಕೃತವಾಗಿ ನೀರಿನ ಸಂಪರ್ಕ ಪಡೆಯದೇ ಅಕ್ರಮವಾಗಿ ಪಡೆಯುತ್ತಿರುವುದು ಬಯಲಾಗಿದ್ದು, ಯಾರೇ ತಪ್ಪು ಮಾಡಿದ್ರು ನೀರಿನ ಸಂಪರ್ಕ ಕಡಿತವಾಗೋದು ಕಟ್ಟಿಟ್ಟಬುತ್ತಿಯಾಗಿದೆ.