ಇಸ್ಲಾಮಾಬಾದ್: ಸಾಮಾಜಿಕ ಮಾಧ್ಯಮದ ಮೂಲಕ ಗನ್‍ಗಳನ್ನು ತರಿಸಿಕೊಳ್ಳಬಹುದು ಹಾಗೂ ಈ ಸೇವೆ ಪಾಕಿಸ್ತಾನದಾದ್ಯಂತ ಚಾಲ್ತಿಯಲ್ಲಿದೆ ಎಂಬ ಆಘಾತಕಾರಿ ವಿಷಯವನ್ನು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಹೌದು, ಪಾಕಿಸ್ತಾನದಲ್ಲಿ ಗನ್‍ಗಳನ್ನು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭವಾಗಿ ತರಿಸಿಕೊಳ್ಳಬಹುದು ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಜನರು ಸಾಮಾಜಿಕ ಮಾಧ್ಯಮದ ಮೂಲಕ ತಮಗಿಷ್ಟದ ಗನ್‍ಗಳನ್ನು ಆಯ್ಕೆ ಮಾಡಿ, ವಿತರಕರಿಗೆ ಫೋನ್ ಕರೆ ಮಾಡಿ, ಬೆಲೆಯ ಬಗ್ಗೆ ಚರ್ಚಿಸಿ, ಅಡ್ವಾನ್ಸ್ ನೀಡಿದರಾಯ್ತು. ಕೆಲವೇ ದಿನಗಳಲ್ಲಿ ಆರ್ಡರ್ ಮಾಡಿದ ವ್ಯಕ್ತಿಯ ಮನೆ ಮುಂದೆ ಗನ್ ಹಾಜರಿರುತ್ತದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ
Advertisement
Advertisement
ಈ ವಹಿವಾಟು ರಹಸ್ಯವಾಗಿ ನಡೆಯುತ್ತದೆ ಎಂದು ಜನರು ಭಾವಿಸಬಹುದು. ಆದರೆ ಈ ಪ್ರಕ್ರಿಯೆಗಳು ಫೇಸ್‍ಬುಕ್ ಹಾಗೂ ವಾಟ್ಸಪ್‍ಗಳಲ್ಲೇ ಯಾವುದೇ ಮುಚ್ಚು ಮರೆ ಇಲ್ಲದೆ ನಡೆಯುತ್ತದೆ ಎನ್ನುವುದು ಆಘಾತಕಾರಿ ವಿಷಯ.
Advertisement
ಗನ್ ಅನ್ನು ತರಿಸಿಕೊಂಡ ಪಾಕ್ ಪ್ರಜೆಯೊಬ್ಬ ಈ ರಹಸ್ಯವನ್ನು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾನೆ. 38 ಸಾವಿರ ರೂ.ಯ ಗನ್ ತರಿಸಿಕೊಳ್ಳಲು ವಿತರಕ ಯಾವುದೇ ಪರವಾನಗಿಯನ್ನೂ ಕೇಳಿರಲಿಲ್ಲ. ಫೋನ್ ಮೂಲಕವೇ ಸಂಪೂರ್ಣ ವ್ಯವಹಾರ ನಡೆದಿದ್ದು, 10 ಸಾವಿರ ರೂ.ಯನ್ನು ಮುಂಗಡ ಪಾವತಿಯಾಗಿ ನೀಡಿದ್ದ. ಗನ್ ಆತನ ಕೈಗೆ ತಲುಪಿದ ಬಳಿಕ ಉಳಿದ ಹಣವನ್ನು ಪಾವತಿ ಮಾಡಿದ್ದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಋತುಸ್ರಾವದ ರಕ್ತ ಸೇವಿಸುತ್ತೇನೆ, ಫೇಸ್ ಮಾಸ್ಕ್ ಆಗಿ ಬಳಸುತ್ತೇನೆ
Advertisement
ಕರಾಚಿಯಲ್ಲಿ ಅತ್ಯಂತ ಸುಲಭವಾಗಿ ಗನ್ ಖರೀದಿಸುವ ಜಾಲಗಳಿವೆ ಎಂಬುದು ತಿಳಿದು ಬಂದಿದೆ. ಶಸ್ತ್ರಾಸ್ತ್ರ ವಿತರಕರ ಹಾಗೂ ಅದನ್ನು ತಲುಪಿಸುವವರ ಪ್ರತ್ಯೇಕ ಎರಡು ನೆಟ್ವರ್ಕ್‍ಗಳು ಇವೆ. ಶಸ್ತ್ರಾಸ್ತ್ರ ಪ್ರಕಾರಗಳ ಆಯ್ಕೆಯಲ್ಲಿ ಯಾವುದೇ ರೀತಿಯ ಮಿತಿಗಳಿಲ್ಲ. 9 ಎಂಎಂ ಪಿಸ್ತುಲ್‍ನಿಂದ ಹಿಡಿದು ಎಕೆ-47 ವರೆಗಿನ ಎಲ್ಲಾ ರೀತಿಯ ಅಸ್ತ್ರಗಳು ಮಾರಾಟವಾಗುತ್ತವೆ ಎಂದು ವರದಿಗಳು ತಿಳಿಸಿವೆ.