– ʻಈಗ ಟಿಕೆಟ್ ಬುಕ್ ಮಾಡಿ, ನಂತರ ಪಾವತಿಸಿʼ!
ನವದೆಹಲಿ: ನೀವು ಟ್ರೈನ್‌ನಲ್ಲಿ ಹೋಗ್ಬೇಕಾ? ನಿಮ್ಮ ಬಳಿ ಹಣ ಇಲ್ವಾ? ಡೋಂಟ್‌ವರಿ ಈಗ ಟಿಕೆಟ್ ಬುಕ್ ಮಾಡಿ ನಂತರ ಪಾವತಿಸಿ.
ಏನಿದು ಅಚ್ಚರಿ ಅಂತೀರಾ… ಹೌದು. ಭಾರತೀಯ ರೈಲ್ವೆ (Indian Railway) ಇಲಾಖೆಯು ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದೆ. ಟಿಕೆಟ್ ಬುಕಿಂಗ್‌ನಲ್ಲಿ (Ticket Booking) ಹೊಸ ಸೌಲಭ್ಯ ಜಾರಿಗೆ ತಂದಿದೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ
ಒಂದು ವೇಳೆ ನೀವು ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿದ್ದು, ತಕ್ಷಣವೇ ನಿಮ್ಮ ಬಳಿ ರೈಲು ಟಿಕೆಟ್ ಖರೀದಿಸಲು ಚಿಂತಿಸಬೇಕಿಲ್ಲ. ಅದಕ್ಕಾಗಿಯೇ ಭಾರತೀಯ ರೈಲ್ವೆ ಇಲಾಖೆ ʻಈಗಲೇ ಬುಕ್ ಮಾಡಿ, ನಂತರ ಪಾವತಿಸಿʼ ಆಯ್ಕೆಯನ್ನು ಪರಿಚಯಿಸಿದೆ, ಇದು ಯಾವುದೇ ಮುಂಗಡ ಪಾವತಿಯಿಲ್ಲದೆ ನಿಮ್ಮ ಟಿಕೆಟ್ ಅನ್ನು ಸುರಕ್ಷಿತವಾಗಿರಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಸಂಪೂರ್ಣ ಬುಕಿಂಗ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು ಮತ್ತು ಅನುಸರಿಸಲು ಕೆಲವು ಪ್ರಮುಖ ಷರತ್ತುಗಳಿವೆ.
ಬುಕ್ಕಿಂಗ್ ಹೇಗೆ?
1. ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ.
2. ‘ಬುಕ್ ನೌ’ ಆಯ್ಕೆಯನ್ನು ಕ್ಲಿಕ್ ಮಾಡಿ.
3. ಪ್ರಯಾಣಿಕರ ವಿವರಗಳು ಮತ್ತು ಕ್ಯಾಪ್ಚಾ ಕೋಡ್ ಕೇಳುವ ಹೊಸ ಪುಟವು ಕಾಣಿಸಿಕೊಳ್ಳುತ್ತದೆ. ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸು (Submit) ಆಯ್ಕೆಯನ್ನು ಕ್ಲಿಕ್ ಮಾಡಿ.
4. ನಿಮ್ಮನ್ನು ಪಾವತಿ ಪೇಜ್‌ಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಕ್ರೆಡಿಟ್/ಡೆಬಿಟ್ ಕಾರ್ಡ್, BHIM ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.
5. ಪೇ ಲೇಟರ್ ಆಯ್ಕೆಯನ್ನು ಬಳಸಲು, ಮೊದಲು (www.epaylater.in) ಗೆ ಭೇಟಿ ನೀಡುವ ಮೂಲಕ ನೋಂದಾಯಿಸಬೇಕು.
6. ನೋಂದಣಿ ನಂತರ, ಪೇ ಲೇಟರ್ ಆಯ್ಕೆಯು ಲಭ್ಯವಾಗುತ್ತದೆ. ಅದನ್ನು ಆಯ್ಕೆ ಮಾಡಿ ಮತ್ತು ಯಾವುದೇ ಮುಂಗಡ ಪಾವತಿಯಿಲ್ಲದೇ ನೀವು ದೃಢೀಕೃತ ಟಿಕೆಟ್ ಅನ್ನು ಪಡೆಯುತ್ತೀರಿ.
14 ದಿನದಲ್ಲಿ ಪಾವತಿಸಿ:
ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿದ 14 ದಿನಗಳಲ್ಲಿ ನೀವು ಪಾವತಿಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ 14 ದಿನಗಳಲ್ಲಿ ಹಣ ಪಾವತಿ ಮಾಡಲು ವಿಫಲವಾದ್ರೆ 3.5% ಸೇವಾ ಶುಲ್ಕ ವಿಧಿಸಲಾಗುತ್ತದೆ. ಆ ನಂತರವೂ ಪಾವತಿಯನ್ನ ಮತ್ತಷ್ಟು ವಿಳಂಬ ಮಾಡಿದ್ರೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪು ನೋಡ್ಕೊಂಡು ದರ್ಶನ್ ಕೇಸ್‌ನಲ್ಲಿ ಮುಂದಿನ ಕ್ರಮ – ಪರಮೇಶ್ವರ್